ಬೆಂಗಳೂರು: ಸ್ಯಾಂಡಲ್ ವುಡ್‍ನ ಚೆಂದುಳ್ಳಿ ಚೆಲುವೆ ಭಾವನಾ ಮೆನನ್ ಬಹುದಿನಗಳ ಗೆಳೆಯ ಕಮ್ ನಿರ್ಮಾಪಕ ಬೆಂಗಳೂರಿನ ನವೀನ್ ಜೊತೆ ಇಂದು ಹಸೆಮಣೆ ಏರಲಿದ್ದಾರೆ.
ಕೇರಳದ ತ್ರಿಶೂರ್‍ನ ಜವರ್‍ಲಾಲ್ ಕನ್ವೇಷನ್ ಹಾಲ್‍ನಲ್ಲಿ ಮದುವೆ ಸಮಾರಂಭ ನಡೆಯುತ್ತಿದೆ. ಭಾನುವಾರ ರಾತ್ರಿ ಮಹೆಂದಿ ಕಾರ್ಯಕ್ರಮ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋಗಳು ಹರಿದಾಡುತ್ತಿವೆ.
Advertisement
Advertisement
2017 ಮಾರ್ಚ್ 9ರಂದು ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜುವಾರಿಯರ್ ಹಾಗೂ ಸಂಯುಕ್ತವರ್ಮಾ ಪಾಲ್ಗೊಂಡಿದ್ದರು. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
Advertisement
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ `ವಿಷ್ಣುವರ್ಧನ್’ ಹಾಗೂ `ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ.