‘ಭಾಗಮತಿ’ ಸೀಕ್ವೆಲ್‌ನಲ್ಲಿ ಅನುಷ್ಕಾ ಶೆಟ್ಟಿ

Public TV
1 Min Read
anushka shetty

ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ (Anushka Shetty) ಅವರು 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್‌ಡೇ ದಿನ ಅಭಿಮಾನಿಗಳಿಗೆ ಸ್ವೀಟಿ, ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ‘ಮಿಸ್ ಶೆಟ್ಟಿ & ಮಿಸ್ಟರ್ ಪೋಲಿ ಶೆಟ್ಟಿ’ ನಂತರ ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್‌ವೊಂದು ಸಿಕ್ಕಿದೆ.

anushka shetty

ಸ್ವೀಟಿ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸ್ವೀಟ್ ನ್ಯೂಸ್ ಸಿಕ್ಕಿದೆ. ‘ಭಾಗಮತಿ’ (Bhaagamathie) ಸಿನಿಮಾದಲ್ಲಿ ಅನುಷ್ಕಾ ನಟಿಸಿ ಎಲ್ಲರ ಮನ ಗೆದ್ದಿದ್ದರು. ಖಡಕ್ ಆಗಿ ಅನುಷ್ಕಾ ನಟಿಸಿದ್ದರು. ಇದೀಗ ಇದರದೇ ಸೀಕ್ವೆಲ್‌ನಲ್ಲಿ ನಟಿಸಲು ಕರಾವಳಿ ಬ್ಯೂಟಿ ತಯಾರಿ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ನಟ್ವರ್ ಲಾಲ್’ ಹಾಡಿಗಾಗಿ ಬಂದ ‘ವರಾಹ ರೂಪಂ’ ಸಿಂಗರ್

anushka shetty 1

ಯಾವುದೇ ಪಾತ್ರ ಕೊಟ್ಟರೂ ಕೂಡ ಆ ಪಾತ್ರವೇ ತಾವಾಗಿ ಅನುಷ್ಕಾ ಶೆಟ್ಟಿ ನಟಿಸುತ್ತಾರೆ. ಹಾಗಾಗಿ ‘ಭಾಗಮತಿ 2’ ಸೀಕ್ವೇಲ್ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾ ಬಗೆಗಿನ ನಿರೀಕ್ಷೆ ಡಬಲ್ ಆಗಿದೆ.

‘ಭಾಗಮತಿ 2’ ಸಿನಿಮಾದಲ್ಲಿ ಯಾವ ರೀತಿಯ ಲುಕ್‌ನಲ್ಲಿ ನಟಿ ಬರುತ್ತಾರೆ? ಯಾವ ರೀತಿಯ ಕಥೆಯಲ್ಲಿ ಸ್ವೀಟಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಬಗ್ಗೆ ಅಧಿಕೃತ ಅಪ್‌ಡೇಟ್ ಯಾವಾಗ ಎಂದು ಎದುರು ನೋಡ್ತಿದ್ದಾರೆ.

Share This Article