ಕನ್ನಡದ `ನಟಸಾರ್ವಭೌಮ’ (Natasarwbhowma) ಚಿತ್ರದಿಂದ ಕನ್ನಡಕ್ಕೆ ಪರಿಚಿತರಾದ ನಟಿ ಅನುಪಮಾ ಪರಮೇಶ್ವರನ್ `ಡಿಜೆ ಟಿಲ್ಲು’ ಪಾರ್ಟ್ 2 (DJ Tillu 2) ಚಿತ್ರದಿಂದ ಹೊರನಡೆದಿದ್ದಾರೆ. ತೆಲುಗಿನ ಚಿತ್ರದಿಂದ ಹಠಾತ್ತನೆ ಹೊರನಡೆದಿದ್ದಾರೆ.
- Advertisement 2
ಕನ್ನಡದ ಜೊತೆ ಪರಭಾಷೆಗಳಲ್ಲಿ ಮೋಡಿ ಮಾಡಿರುವ ಪುನೀತ್ ನಾಯಕಿ ಅನುಪಮಾ ಪರಮೇಶ್ವರನ್(Anupama Parameshwaran) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿದ್ದು ಜೊನ್ನಲಗೊಂಡ ನಟನೆಯ `ಡಿಜೆ ಟಿಲ್ಲು’ (Dj Tillu) ಚಿತ್ರದ ಸಕ್ಸಸ್ ನಂತರ ಈ ಚಿತ್ರದ ಮುಂದುವರೆದ ಭಾಗದ ಚಿತ್ರೀಕರಣ ನಡೆಯುತ್ತಿದೆ. ಆದರೆ ಈಗ ಹಠಾತ್ತನೆ ನಟಿ ಅನುಪಮಾ ಈ ಚಿತ್ರವನ್ನ ಕೈಬಿಟ್ಟಿದ್ದಾರೆ.
- Advertisement 3
- Advertisement 4
ಇನ್ನೂ ಅನುಪಮಾ ಆಯ್ಕೆಗೂ ಮುನ್ನ ಈ ಚಿತ್ರಕ್ಕೆ ಆಯ್ಕೆಯಾಗಿದ್ದು ಭರಾಟೆ ನಟಿ ಶ್ರೀಲೀಲಾ(Sreeleela), ನಂತರ ಅವರ ಬದಲು ಅನುಪಮಾ ಅವರನ್ನ ಆ ಜಾಗಕ್ಕೆ ಹಾಕಿಕೊಳ್ಳಲಾಗಿತ್ತು. ಈಗ ಪ್ರಾಜೆಕ್ಟ್ನಿಂದ ಅನುಪಮಾ ಅವರು ಹೊರನಡೆದಿದ್ದಾರೆ.
ಅನುಪಮಾ ಪರಮೇಶ್ವರನ್ ಅವರು ಸಿನಿಮಾದ ಶೂಟಿಂಗ್ ಆರಂಭಿಸಿ ಕೆಲ ದಿನಗಳ ಕಾಲ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದರು. ಆದರೆ ಈಗ ಹಠಾತ್ತನೆ ಚಿತ್ರೀಕರಣ ತ್ಯಜಿಸಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸೂಕ್ತ ಕಾರಣಗಳನ್ನು ಚಿತ್ರತಂಡ ನೀಡಿಲ್ಲವಾದರೂ, ಚಿತ್ರೀಕರಣ ಮಾಡುತ್ತಿರುವ ರೀತಿಗೂ ಹೇಳಿದ್ದ ಕತೆಗೂ ಸಂಬಂಧವಿಲ್ಲವೆಂದು ಅನುಪಮಾ ಆರೋಪಿಸಿ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ತಮಿಳು ಸೀರಿಯಲ್ನಿಂದ ಹೊರನಡೆದ `ಪಾರು’ ನಟಿ ಮೋಕ್ಷಿತಾ ಪೈ
ಅಭಿಮಾನಿಗಳು ಈ ಹಿಂದಿನ ಡಿಜೆ ಟಿಲ್ಲು ನಾಯಕಿ ನೇಹಾ ಶೆಟ್ಟಿಯನ್ನೇ ಹಾಕಿಕೊಳ್ಳಿ ಎಂದು ಮನವಿ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಅದ್ಯಾವ ನಟಿ ಈ ಚಿತ್ರಕಥೆಗೆ ಫೈನಲ್ ಆಗುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.