ಬಾಲಿಯಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ಐಶ್ವರ್ಯಾ ಸಿಂಧೋಗಿ

Public TV
1 Min Read
aishwarya

ಸ್ವಪ್ನೋ ಕೀ ರಾಣಿ, ರಣತಂತ್ರ, ಸಂಯುಕ್ತಾ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ಐಶ್ವರ್ಯಾ ಸಿಂಧೋಗಿ ಈಗ ಕಿರುತೆರೆಯಲ್ಲಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ಪ್ರಸ್ತುತ ‘ನಮ್ಮ ಲಚ್ಚಿ’ (Namma Lacchi) ಖಳನಟಿಯಾಗಿರುವ ಐಶ್ವರ್ಯಾ, ಶೂಟಿಂಗ್ ಬ್ರೇಕ್ ಹಾಕಿ ಬಾಲಿಗೆ (Bali) ಹಾರಿದ್ದಾರೆ. ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ನಟಿ ಗಮನ ಸೆಳೆಯುತ್ತಿದ್ದಾರೆ.

aishwarya 1

ಇತ್ತೀಚಿಗೆ ‘ನಾಗಿಣಿ 2’ (Nagini 2) ಸೀರಿಯಲ್ ಮುಗಿದ ಮೇಲೆ ‘ಸೂಪರ್ ಕ್ವೀನ್ಸ್’ ಎಂಬ ರಿಯಾಲಿಟಿ ಶೋನಲ್ಲಿ (Super Queens) ಐಶ್ವರ್ಯಾ ಭಾಗವಹಿಸಿದ್ದರು. ಈ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ‘ನಮ್ಮ ಲಚ್ಚಿ’ ಸೀರಿಯಲ್‌ನಲ್ಲಿ ವಿಜಯ್ ಸೂರ್ಯಗೆ ಜೋಡಿಯಾಗಿ ಐಶು ನಟಿಸುತ್ತಿದ್ದಾರೆ. ಜೊತೆಗೆ ವಿಲನ್‌ಯಾಗಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಸ್ಟಾರ್ ನಟನ ಪುತ್ರನಿಂದ ಟಾರ್ಚರ್, ಈ ಸುದ್ದಿ ನಿಜಾನಾ? ಕೃತಿ ಶೆಟ್ಟಿ ಸ್ಪಷ್ಟನೆ

aishwarya 2

ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಇಂಡೋನೇಷ್ಯಾದ ಬಾಲಿಗೆ ಸ್ನೇಹಿತೆ ನಮ್ರತಾ ಗೌಡ (Namratha Gowda) ಜೊತೆ ಐಶ್ವರ್ಯಾ ತೆರಳಿದ್ದಾರೆ. ಬಾಲಿಯ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ನಾಗಿಣಿ ನಟಿಯರು ಮಸ್ತ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಬಾಲಿಯಲ್ಲಿ ಐಶ್ವರ್ಯಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ವೆಸ್ಟರ್ನ್ ಲುಕ್‌ನಲ್ಲಿ ಐಶ್ವರ್ಯಾ ಸಿಂಧೋಗಿ ಮಿಂಚಿದ್ದಾರೆ. ಕನ್ನಡದ ಸಾಲು ಸಾಲು ಸಿನಿಮಾಗಳ ಮೂಲಕ ಕಾಣಿಸಿಕೊಂಡಿದ್ದ ಯುವ ನಟಿ ಈಗ ಕಿರುತೆರೆಯಲ್ಲಿ ಶೈನ್ ಆಗ್ತಿದ್ದಾರೆ. ಸದ್ಯ ಬಾಲಿಯ ಕಲರ್‌ಫುಲ್ ಫೋಟೋಗಳು ಸದ್ದು ಮಾಡುತ್ತಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article