ಸ್ಯಾಂಡಲ್‌ವುಡ್ (Sandalwood) ನಟಿ ಅದಿತಿ ಪ್ರಭುದೇವ (Aditi Prabhudeva) ವೈವಾಹಿಕ ಬದುಕಿನ ಜೊತೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಮದುವೆ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಹೀಗಿರುವಾಗ ಸಿನಿಮಾ ಕಾರ್ಯಕ್ರಮವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನ ಪ್ರಶ್ನೆ ಮಾಡುವವರಿಗೆ ಖಡಕ್ ಉತ್ತರ ನೀಡಿದ್ದಾರೆ.
ಶ್ಯಾನೆ ಟಾಪ್ ನಟಿ ಅದಿತಿ ಇತ್ತೀಚಿಗೆ ಯಶಸ್ (Yashas) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ‘Once Upon A Time In Jamaligudda’ ಸಿನಿಮಾ ಮೂಲಕ ಮೋಡಿದ್ದರು. ಇನ್ನೂ ಅದಿತಿ ನಟನೆಯ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿಯಿದೆ. ಕೋಟ್ಯಧಿಪತಿ ಯುವಕನ ಕೈಹಿಡಿದಿದ್ದೀರಾ ಅನ್ನೋರಿಗೆ ನಟಿ ತಿರುಗೇಟು ನೀಡಿದ್ದಾರೆ.
Advertisement
View this post on Instagram
Advertisement
ನನ್ನ ಯೂಟ್ಯೂಬ್‌ನಲ್ಲಿ ಕೆಲವರು ಕಾಮೆಂಟ್ ಮಾಡಿದ್ದರು ನೀವು ರೈತನ ಮದುವೆ ಆಗುತ್ತೀನಿ ಎಂದು ಕೋಟ್ಯಧಿಪತಿಯನ್ನ ಮದುವೆ ಆಗಿದ್ದೀರಾ ಅನ್ನೋರಿದ್ದಾರೆ. ಅವರಿಗೆ ನನ್ನ ಉತ್ತರ ಏನೆಂದರೆ ಇದೆಲ್ಲಾ ನಿಮಗೆ ಯಾರು ಹೇಳಿದ್ದರು ನೀವು ಬಂದು ನೋಡಿದ್ದೀರಾ. ಏನೇ ಇದ್ದರೂ ಅದು ಅವರ ಬದುಕು. ನಮ್ಮ ಅಪ್ಪ ಇಷ್ಟು ಮಾಡಿದ್ದಾರೆ ಅದನ್ನು ಹೊಡ್ಕೊಂಡು ಚೆನ್ನಾಗಿ ತಿಂದು ಬಿಡುತ್ತೀನಿ ನನ್ನ ಗಂಡ ಮಾಡಿದ್ದಾನೆ ಅದನ್ನು ಹೊಡ್ಕೊಂಡು ತಿಂದು ಬಿಡುತ್ತೀನಿ ಅನ್ನೋ ವ್ಯಕ್ತಿ ನಾನಲ್ಲ. ಇದನ್ನೂ ಓದಿ: ರಾಖಿ ಸಾವಂತ್ ಪತಿ, ಮೈಸೂರು ಹುಡುಗ ಆದಿಲ್ ಪೊಲೀಸ್ ವಶಕ್ಕೆ
Advertisement
Advertisement
ನನಗೆ ನನ್ನ ಅಸ್ತಿತ್ವ ತುಂಬಾ ಮುಖ್ಯವಾಗುತ್ತದೆ ಯಾರ ಮೇಲೆ ಕೂಡ ಡಿಪೆಂಡ್ ಆಗಬಾರದು ಯಾರಿಗೂ ಭಾರ ಆಗಬಾರದು ಎಷ್ಟು ಆಗುತ್ತೆ ಅಷ್ಟು ದುಡಿಯಬೇಕು. ಒಳ್ಳೆಯ ಬ್ಯಾನರ್ ಸಿನಿಮಾ ಸಿಗಬೇಕು ಒಳ್ಳೆಯ ಕಥೆ ಇರಬೇಕು ನನ್ನ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇರುತ್ತದೆ ಇದೆಲ್ಲಾ ನೋಡಿಕೊಂಡು ಕಥೆ ಒಪ್ಪಿಕೊಳ್ಳುವೆ. ಕನ್ನಡ ಚಿತ್ರರಂಗಕ್ಕೆ ಸಾಯುವವರೆಗೂ ಋಣಿಯಾಗಿರುವೆ. ಅಯ್ಯೋ ಲೈಫ್ ಹಾಗೆ ಹೀಗೆ ಅನ್ನೋ ಆತಂಕ ಇಲ್ಲ ಮೈಂಡ್ ಫ್ರೀ ಆಗಿದೆ ಎಂದು ಅದಿತಿ ರಿಯಾಕ್ಟ್ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k