ತಿರುವನಂತಪುರ: ನ್ಯಾ. ಹೇಮಾ ವರದಿ ಕೇರಳ ಚಿತ್ರೋದ್ಯಮದಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದಂತೆ ಪ್ರಖ್ಯಾತ ನಿರ್ಮಾಪಕ ರಂಜಿತ್ (Producer Ranjith) ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಈ ಆರೋಪ ಮಾಡಿರುವುದು ನಟ ಎನ್ನುವುದು ವಿಶೇಷ.
ನಿರ್ಮಾಪಕ, ನಿರ್ದೇಶಕ ರಂಜಿತ್ ಲೈಂಗಿಕ ದೌರ್ಜನ್ಯ (Sex Assault) ಎಸಗಿದ್ದಾರೆ ಎಂದು ಆರೋಪಿಸಿ ಯುವ ನಟರೊಬ್ಬರು (Actor) ಡಿಜಿಪಿಗೆ ದೂರು ನೀಡಿದ್ದಾರೆ.
2012ರಲ್ಲಿ ಸಿನಿಮಾವೊಂದರ ಆಡಿಷನ್ ವಿಚಾರವಾಗಿ ಬೆಂಗಳೂರಿನ ಹೋಟೆಲ್‌ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದು ಆಡಿಷನ್ ಪ್ರಕ್ರಿಯೆ ಭಾಗವೆಂದು ಭಾವಿಸಿದ್ದೆ. ಇದರ ಬದಲಾಗಿ ಪಾತ್ರ ನೀಡೋದಾಗಿ ಭರವಸೆ ನೀಡಿ ರಂಜಿತ್ ತನಗೆ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ನಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆಯ ಬಳಿಕ ಮರುದಿನ ಬೆಳಗ್ಗೆ ನನಗೆ ಹಣವನ್ನು ನೀಡಿದ್ದರು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಪರಿಶೀಲಿಸಿ ಕೈಗೊಳ್ಳಲಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಹೇಮಾ ವರದಿಯ ಬಳಿಕ ಮಲಯಾಳಂ ಚಿತ್ರರಂಗ ಅಲ್ಲೋಲ ಕಲ್ಲೋಲ ಆಗಿದೆ. ಹಲವು ನಟಿಯರು ತಾವು ಅನುಭವಿಸಿದ ಕಿರುಕುಳದ ಬಗ್ಗೆ ಧ್ವನಿಯೆತ್ತಿದ್ದಾರೆ. ಇನ್ನೂ ಬಂಗಾಳಿ ನಟಿ ಶ್ರೀಲೇಖಾ ಮಿತ್ರ (Sreelekha Mitra) ಕೂಡ ನಿರ್ಮಾಪಕ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.