ಬನಾರಸ್ ಎಂಬ ಶೀರ್ಷಿಕೆಯ ಹೆಸರು ಕೇಳಿದರೆ ಈ ಚಿತ್ರದ ಕಥೆಯ ಬಿರುಸು ಎಂತಹದ್ದು ಇರಬಹುದು ಎಂಬ ಸುಳಿವು ಚಿತ್ರರಸಿಕರಿಗೆ ಸಿಗುವುದು ಸಹಜ. ಬನಾರಸ್ ಸಿನಿಮಾದ ಮೊದಲ ಗೀತೆ ಚಿತ್ರರಸಿಕರ ಮಡಿಲು ಸೇರಿದ್ದು, ಪ್ರೇಮದೂರಿನಲ್ಲಿ ಕಳೆದು ಹೋಗುವ ದಾರಿಹೋಕನ ದೃಶ್ಯಕಾವ್ಯದ ಮಯಾಗಂಗೆ ಹಾಡು ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ಸುದ್ದಿಯಾಗುತ್ತಿದೆ. ಆಫ್ ಕೋರ್ಸ್, ಬನಾರಸ್ ಪ್ಯಾನ್ ಇಂಡಿಯಾ ಸಿನಿಮಾ. ಏಕಕಾಲದಲ್ಲಿ ಐದು ಭಾಷೆಯಲ್ಲಿ ರೆಡಿಯಾಗಿರುವ ಈ ಚಿತ್ರ ಭಾರತೀಯ ಚಿತ್ರಲೋಕದಲ್ಲಿ ಹೊಸದೊಂದು ಭರವಸೆ ಹುಟ್ಟಿಸಿದೆ. ಸಿನಿಮಾದ ನಾಯಕ ಝೈದ್ ಖಾನ್ ಚಿತ್ರರಂಗದಲ್ಲಿ ಒಳ್ಳೆ ಕಲಾವಿದ ಆಗುತ್ತಾನೆ ಎಂಬ ಮೆಚ್ಚುಗೆ ಮಾತುಗಳು ಚಾಲ್ತಿಯಲ್ಲಿವೆ.
ಶ್ರೀಮಂತಿಕೆ ಜೊತೆಗೆ ವರ್ಚಸ್ಸು ಎರಡೂ ಇರುವವರು ಚಿತ್ರರಂಗಕ್ಕೆ ಪ್ರವೇಶಿಸುತ್ತಲೇ ಇರುತ್ತಾರೆ. ಆದರೆ ಮೊದಲ ನೋಟದಲ್ಲಿಯೇ ಪ್ರೇಕ್ಷಕರನ್ನು ಆವರಿಸಿ ಬಿಡುವುದು ಸವಾಲೇ ಸರಿ. ಮಯಾಗಂಗೆ ಹಾಡಿನ ಮೂಲಕ ತನ್ನ ಸಾಮರ್ಥ್ಯ ಏನು? ತನ್ನ ಪ್ರತಿಭೆ ಎಂತಹದ್ದು? ನಿರಂತರ ಕಲಾದೇವಿಯ ಆರಾಧನೆ ಜೊತೆಗೆ ಪರಿಶ್ರಮ ಇದ್ದರೆ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಬಹುದು ಎಂಬ ಭರವಸೆಯನ್ನು ಝೈದ್ ಖಾನ್ ಮೂಡಿಸಿದ್ದಾರೆ. ಕೇವಲ ಕನ್ನಡ ಸಿನಿಲೋಕ ಮಾತ್ರವಲ್ಲ ಟಾಲಿವುಡ್, ಬಾಲಿವುಡ್‍ನಲ್ಲಿಯೂ ಝೈದ್ ಬದ್ಧತೆಗೆ ಶಹಬ್ಬಾಸ್ ಗಿರಿ ಸಿಗುತ್ತಿದೆ ಅಂದರೆ ಅದಕ್ಕೆ ಕಾರಣ ಅವರ ಪರಿಶ್ರಮ. ಇದನ್ನೂ ಓದಿ: ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ
ಸಿನಿಮಾ ರಂಗದಲ್ಲಿ ಈಜಬೇಕು ಎಂಬ ಕನಸು ಕಟ್ಟಿಕೊಂಡು ಬಂದ ಝೈದ್ ಖಾನ್ ಆರಂಭದಿಂದಲೇ ಅವರು ಮೆಚ್ಚಿಕೊಂಡ ನಾಯಕ ನಟರ ಕಷ್ಟದ ಹಾದಿಯನ್ನು ಮೆಲುಕು ಹಾಕುತ್ತಲೇ ತಮ್ಮ ಮೊದಲ ಹೆಜ್ಜೆ ಪ್ರತಿಯೊಬ್ಬರ ಅಂತರ್ಯದಲ್ಲಿ ನೆನಪಿನಲ್ಲಿ ಉಳಿಯಬೇಕು. ಮೆಚ್ಚುಗೆ ವ್ಯಕ್ತವಾಗಬೇಕು ಅಂತಾ ಬೇಜಾನ್ ಕಸರತ್ತು ನಡೆಸಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಒಂದಷ್ಟು ವರ್ಷಗಳ ಕಾಲ ಕಲಾತರಬೇತಿ ಪಡೆದು ನಾಯಕನಾಗುವ ಏಕೈಕ ಗುರಿಯೊಂದಿಗೆ ಬಂದ ಝೈದ್‍ಗೆ ಗುರಿ ಸ್ಪಷ್ಟವಾಗಿತ್ತು. ಆ ಗುರಿ ಬೆನ್ನಟ್ಟಿದಾಗ ಸಿಕ್ಕಿದ್ದು ಬನಾರಸ್ ಎಂಬ ಒಂದೊಳ್ಳೆ ಕಥೆ, ಜಯತೀರ್ಥರಂತಹ ಅದ್ಭುತ ನಿರ್ದೇಶಕ. ಗುರು ಹಾಗೂ ಗುರಿ ಎರಡು ಸ್ಪಷ್ಟವಾದ್ಮೇಲೆ ಝೈದ್ ಬನಾರಸ್ ಮೂಲಕ ನಾಯಕನಾಗಿ ಬಣ್ಣ ಹಚ್ಚಿ, ಒಂದಷ್ಟು ವರ್ಷಗಳ ಕಾಲ ಸಿನಿಮಾ ತಪಸ್ಸು ಮಾಡಿ ಬನಾರಸ್ ಮೂಲಕ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ. ಅದಕ್ಕೂ ಮುನ್ನ ಚಿತ್ರಾಭಿಮಾನಿಗಳ ಮಡಿಲು ಸೇರಿರುವ ಚಿತ್ರದ ಮೊದಲ ಹಾಡು, ಝೈದ್ ಪರಿಶ್ರಮ ಎಂತಹದ್ದು, ಎನ್ನುವುದು ಎದ್ದು ಕಾಣುತ್ತದೆ. ಇದನ್ನೂ ಓದಿ: ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ
ಮುದನೀಡುವ ಮಯಾಗಂಗೆ ಸೊಗಸಾದ ಹಾಡಿನ ಮೂಲಕ ಝೈದ್ ಖಾನ್ ಬಲು ಚೆಂದವಾಗಿ ಕಾಣಿಸಿಕೊಂಡಿದ್ದು, ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ಎಂಬ ಆಶಾಭಾವನೆ ಮೂಡಿಸಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ಝೈದ್ ಪ್ಯಾನ್ ಇಂಡಿಯಾ ತುಂಬೆಲ್ಲಾ ರಾರಾಜಿಸೋದು ಮೇಲ್ನೋಟಕ್ಕೆ ತಿಳಿಯುವಂತಿದೆ.