ವಿಚಿತ್ರ ಆದರೂ ಸತ್ಯ ಎನ್ನುವಂತಹ ಸುದ್ದಿಯಿಂದ ತೆಲುಗು ಸಿನಿಮಾ ರಂಗದಿಂದ ಬಂದಿದೆ. ಈಗಾಗಲೇ ಕನ್ನಡ ರಿಯಲ್ ಸ್ಟಾರ್ ಉಪೇಂದ್ರ ಅವರು ಹೀರೋ ಆಗಿ ತೆಲುಗು ಸಿನಿಮಾಗಳನ್ನು ಮಾಡಿದ್ದಾರೆ. ವಿಲನ್ ರೀತಿಯ ಪಾತ್ರಗಳನ್ನೂ ಪೋಷಿಸಿದ್ದಾರೆ. ಇದೇ ಮೊದಲ ಬಾರಿಗೆ ತಂದೆಯ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಸುದ್ದಿ ಬಂದಿದೆ. ಈ ಸುದ್ದಿ ಅಚ್ಚರಿಯನ್ನೂ ಮೂಡಿಸಿದೆ. ನಿಜಕ್ಕೂ ಇದರ ಹಿಂದಿನ ಮರ್ಮವೇನು ಎನ್ನುವ ಹುಡುಕಾಟ ಕೂಡ ನಡೆದಿದೆ.
Advertisement
ಸದ್ಯ ರಿಯಲ್ ಸ್ಟಾರ್ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಕಬ್ಜ ಹೆಸರಿನ ಸಿನಿಮಾದಲ್ಲಿ ರಿಯಲ್ ಸ್ಟಾರ್ ಸುದೀಪ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಏಳು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಜೊತೆಗೆ ತಮ್ಮದೇ ನಿರ್ದೇಶನದ ಯುಐ ಸಿನಿಮಾದಲ್ಲೂ ಉಪ್ಪಿ ಬ್ಯುಸಿಯಾಗಿದ್ದರೆ, ಮತ್ತೆರಡು ಸಿನಿಮಾಗಳನ್ನೂ ಅವರು ನಾಯಕನಾಗಿ ಒಪ್ಪಿಕೊಂಡಿದ್ದಾರೆ. ಈ ನಡುವೆ ತಂದೆಯ ಪಾತ್ರವನ್ನು ಅವರು ಮಾಡಲು ಸಾಧ್ಯವಾ ಎನ್ನುವುದು ಹಲವರ ಪ್ರಶ್ನೆ. ಇದನ್ನೂ ಓದಿ : ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್
Advertisement
Advertisement
ಮಹೇಶ್ ಬಾಬು ಅವರ ಹೊಸ ಸಿನಿಮಾದಲ್ಲಿ ತಂದೆಯಾಗಿ ನಟಿಸುವಂತೆ ಆಫರ್ ಬಂದಿರುವುದು ಸತ್ಯ ಎಂದು ಹೇಳಲಾಗುತ್ತಿದೆ. ಆದರೆ, ಈ ಪಾತ್ರವನ್ನು ಉಪೇಂದ್ರ ಒಪ್ಪಿಕೊಂಡಿದ್ದಾರೋ ಇಲ್ಲವೋ ಸಸ್ಪೆನ್ಸ್. ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ ಇರುವುದರಿಂದ ಪಾತ್ರವನ್ನು ಒಪ್ಪಿಕೊಳ್ಳದೇ ಇರಬಹುದು ಎನ್ನಲಾಗುತ್ತದೆ. ಜೊತೆಗೆ ಸಾಕಷ್ಟು ಪ್ರಯೋಗಗಳನ್ನು ಮಾಡುವ ಉಪ್ಪಿ, ಮನಸ್ಸು ಮಾಡಿ ತಂದೆಯ ಪಾತ್ರವನ್ನು ಮಾಡಲೂಬಹುದು ಎನ್ನುವ ಮಾತೂ ಕೂಡ ಹರಿದಾಡುತ್ತಿದೆ. ಆದರೆ, ಇನ್ನೂ ಯಾವುದೂ ನಿಕ್ಕಿಯಾಗಿಲ್ಲ.