ಚೆನ್ನೈ: ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯದ ಸಮಾರಂಭಕ್ಕೆ ಹೋಗಿದ್ದರು. ಅಲ್ಲಿ ಯಶ್ ತಮಿಳಿನಲ್ಲಿ ವಿದ್ಯಾರ್ಥಿಗಳನ್ನು ಮಾತನಾಡಿಸಿದ್ದಾರೆ. ತಕ್ಷಣ ವಿದ್ಯಾರ್ಥಿಗಳು ರಾಕಿಭಾಯ್ ರಾಕಿಭಾಯ್ ಎಂದು ಘೋಷಣೆ ಕೂಗಿ ಅಭಿಮಾನದ ಹೊಳೆ ಹರಿಸಿದ್ದಾರೆ. ಇದನ್ನೂ ಓದಿ: ‘ಪ್ರಧಾನ ಮಂತ್ರಿ’ಯನ್ನ ಊರಿಗೆ ಬರಮಾಡಿಕೊಂಡ ರಾಕಿ ಭಾಯ್
ಸಮಾರಂಭದಲ್ಲಿ ಮಾತನಾಡಿದ ಯಶ್, ತಮಿಳಿನಲ್ಲಿ ಹೇಗಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ವಿದ್ಯಾರ್ಥಿಗಳು ದಿಲ್ ಖುಷ್ ಆಗಿದ್ದಾರೆ. ಆಗ ಒಬ್ಬ ನಟನಿಗೆ ಇದಕ್ಕಿಂತ ಬೇರೆ ಏನು ಬೇಕು ಎಂದು ಯಶ್ ತಮಿಳಿನಲ್ಲಿ ಮಾತನಾಡಿದ್ದಾರೆ.
Advertisement
Advertisement
ನೀವು ‘ಕೆಜಿಎಫ್ ಚಾಪ್ಟರ್ 1’ ನೋಡಿ ತುಂಬಾ ಇಷ್ಟ ಪಟ್ಟಿದ್ದೀರಿ. ‘ಚಾಪ್ಟರ್ 2’ ಬೇರೆ ಲೆವೆಲ್‍ನಲ್ಲಿ ಇರುತ್ತದೆ ನೋಡಿ. ವಿದ್ಯಾರ್ಥಿಗಳು ನಿಮ್ಮ ಕನಸನ್ನು ಹಿಂಬಾಲಿಸಬೇಕು. ನಿಮಗೆ ನನ್ನ ಬಾಲ್ಯ, ಶಿಕ್ಷಣ ಗೊತ್ತಿಲ್ಲ. ನಾನು ಸಾಮಾನ್ಯ ವಿದ್ಯಾರ್ಥಿ. ಆದರೆ ಜೀವನದಲ್ಲಿ ನಾನು ಒಳ್ಳೆಯ ವಿದ್ಯಾರ್ಥಿ ಎಂದು ಹೇಳಿದರು.
Advertisement
Advertisement
ತಮಿಳಿನ ಮಕ್ಕಳು ಯಾರನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಆದ್ರೆ ಒಮ್ಮೆ ಅವರಿಗೆ ಇಷ್ಟವಾದರೆ ಅದು ಬೇರೆ ಲೆವೆಲಿನಲ್ಲಿ ಇರುತ್ತದೆ ಎಂದು ಯಾರೋ ಹೇಳಿದರು. ನಿಮ್ಮ ಸಂಸ್ಕೃತಿ, ಊಟ ತುಂಬಾ ಚೆನ್ನಾಗಿದೆ ಎಂದು ಮಾತನಾಡಿದರು.
ಸಮಾರಂಭಕ್ಕೆ ರಾಕಿಭಾಯ್ ನೋಡಲು ಸಾವಿರಾರು ವಿದ್ಯಾರ್ಥಿಗಳು ಬಂದಿದ್ದರು. ಅದರಲ್ಲೂ ಯಶ್ ತಮಿಳಿನಲ್ಲಿ ವಿದ್ಯಾರ್ಥಿಗಳನ್ನ ಮಾತನಾಡಿಸಿದ್ದಕ್ಕೆ ವಿದ್ಯಾರ್ಥಿಗಳು ತುಂಬಾ ಸಂತಸಪಟ್ಟಿದ್ದಾರೆ.