ನ್ಯಾಷನಲ್ ಸ್ಟಾರ್ ಯಶ್ (Yash) ‘ಟಾಕ್ಸಿಕ್’ (Toxic) ಸಿನಿಮಾದ ಕೆಲಸ ನಡುವೆ ನಟ ಶಿವಣ್ಣರನ್ನು ಭೇಟಿಯಾಗಿದ್ದಾರೆ. ಹಲವು ಸಮಯದ ನಂತರ ಯಶ್ ಮತ್ತು ಶಿವಣ್ಣ ಭೇಟಿಯಾಗಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ರಕುಲ್ ದಾಂಪತ್ಯ ಮುರಿದು ಬೀಳಲಿದೆ- ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ
Advertisement
ಶಿವಣ್ಣ (Shivarajkumar) ಸದ್ಯ ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಬೆಂಗಳೂರಿನ HMT ಗ್ರೌಂಡ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದ ಸೆಟ್ಗೆ ತೆರಳಿ ಶಿವಣ್ಣರನ್ನು ಯಶ್ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದಾರೆ. ಬಳಿಕ ಚಿತ್ರತಂಡಕ್ಕೆ ಯಶ್ ವಿಶ್ ಮಾಡಿದ್ದಾರೆ. ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಂಗಾತಿ ಇಲ್ಲದೆ ಬದುಕೋದು ಕಷ್ಟ- ಮದುವೆ ಬಗ್ಗೆ ಮಾತನಾಡಿದ ಕಂಗನಾ
Advertisement
Advertisement
ಇನ್ನೂ ಶಿವಣ್ಣನ 131ನೇ ಸಿನಿಮಾಗೆ ಇತ್ತೀಚೆಗೆ ಚಾಲನೆ ನೀಡಲಾಗಿತ್ತು. ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದು (ಆ.16) ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ನಿರ್ಮಾಪಕ ಎಸ್ ಎನ್ ರೆಡ್ಡಿ ಕ್ಲ್ಯಾಪ್ ಮಾಡಿದರು. ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಂಡರು.
Advertisement
ಮುಹೂರ್ತದ ಬಳಿಕ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣ, 2 ವರ್ಷಗಳ ಹಿಂದೆ ಚಿತ್ರತಂಡ ಕಥೆ ಹೇಳಿದ್ದರು. ಯಾಕೆ ಇಷ್ಟು ಲೇಟ್ ಎಂದು ಕೇಳಬೇಡಿ. ಮೊದಲ ಬಾರಿಗೆ ಸ್ಕ್ರೀಪ್ಟ್ ಕೇಳಿದಾಗ ತುಂಬಾ ಚೆನ್ನಾಗಿ ಇತ್ತು. ಅಲ್ಲಿ ಏನೋ ಬೇಕಾಗಿತ್ತು ಎಂದು ಹೇಳುತ್ತಿದ್ದೆ. ಆದರೆ ಇಂಟರೆಸ್ಟಿಂಗ್ ಇತ್ತು. ಈ ಚಿತ್ರದಲ್ಲಿ ಎಲ್ಲರಿಗೂ ಕೆಲಸವಿದೆ. ಡೈಲಾಗ್ ರೈಟರ್, ಕ್ಯಾಮೆರಾ ಮೆನ್ಗೆ ತುಂಬಾ ಕೆಲಸವಿದೆ. ಮ್ಯೂಸಿಕ್ ಡೈರೆಕ್ಟರ್ಗೂ ತುಂಬಾ ಕೆಲಸವಿದೆ. ಎಲ್ಲಾ ಆರ್ಟಿಸ್ಟ್ಗಳು ಕೆಲಸವಿದೆ. ಒಂದು ಸಿನಿಮಾವೆಂದರೆ ಟೆಕ್ನಿಕಲ್ ಅಂತಾರೆ ಇಲ್ಲ ಆಕ್ಟರ್ಸ್ ಸಿನಿಮಾ ಎಂದು ಕರೆಯುತ್ತಾರೆ. ಇದು ಎಲ್ಲರ ಸಿನಿಮಾ. ಕಲಾವಿದರು, ತಂತ್ರಜ್ಞನರ ಸಿನಿಮಾ. ಜನ ಕುತೂಹಲದಿಂದ ಸಿನಿಮಾ ನೋಡಬೇಕು. ನಾನು ನವೀನ್ ಜೊತೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ಇನ್ನೊಂದು ಸರ್ಪ್ರೈಸ್ ಕ್ಯಾರೆಕ್ಟರ್ ಇದೆ. ಪ್ರತಿಯೊಂದು ಕೆಲಸದಲ್ಲಿ ದೇವರು ನಂಬುತ್ತೇವೆ. ಆದರೆ ಮನುಷ್ಯರೇ ದೇವರನ್ನು ನಂಬುತ್ತಾರೆ. ಇದು ಚಿತ್ರದ ಕಥೆಯ ಎಳೆ ಎಂದು ಮಾತನಾಡಿದ್ದರು.
ನಿರ್ದೇಶಕ ಕಾರ್ತಿಕ್ ಅದ್ವೈತ್ ಮಾತನಾಡಿ, ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಚಿತ್ರ ಬಿಡುಗಡೆಯಾಗುವಷ್ಟರಲ್ಲಿ ಕನ್ನಡ ಮಾತನಾಡುತ್ತೇನೆ ಎಂದು ಪ್ರಾಮಿಸ್ ಮಾಡುತ್ತೇನೆ. ಶಿವಣ್ಣ ಕಥೆ, ಕ್ಯಾರೆಕ್ಟರ್ ಮೇಲೆ ನಂಬಿಕೆ ಇಟ್ಟು ನನಗೆ ಸಿನಿಮಾ ನಿರ್ದೇಶನಕ್ಕೆ ಅವಕಾಶ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ನನ್ನ ಇಬ್ಬರು ನಿರ್ಮಾಪಕರು ಚಿತ್ರದ ಮುಖ್ಯ ಪಿಲ್ಲರ್ ಎಂದು ತಿಳಿಸಿದರು.