ವಿಜಯ್ ದೇವರಕೊಂಡ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

Public TV
1 Min Read
vijay devarakonda

ವಿಜಯ್ ದೇವರಕೊಂಡ (Vijay Devarakonda) ಇಂದು (ಮೇ.9) 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಇದರ ನಡುವೆ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಅಭಿಮಾನಿಗಳಿಗೆ ಚಿತ್ರತಂಡ ವಿಜಯ್ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಒಬ್ಬ ಅಭಿಮಾನಿಯಾಗಿ ಅಮಿತಾಭ್‌ರನ್ನು ನಾನು ಮೀಟ್ ಮಾಡಬೇಕು- ದರ್ಶನ್ ಹೇಳಿಕೆ ವೈರಲ್

vijay devarakonda

‘ಫ್ಯಾಮಿಲಿ ಸ್ಟಾರ್’ ಚಿತ್ರದ ನಂತರ ‘VD 12’ ಚಿತ್ರವನ್ನು ವಿಜಯ್ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಪ್ರೇಮಲು’ (Premalu) ನಟಿ ಮಮಿತಾ ಬೈಜು (Mamitha Baiju) ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ಈ ಚಿತ್ರದ ನಂತರ ‘ಶ್ಯಾಮ್ ಸಿಂಗ್ ರಾಯ್’ ಚಿತ್ರದ ಡೈರೆಕ್ಟರ್ ರಾಹುಲ್ ಜೊತೆ ಸಿನಿಮಾ ಮಾಡಲು ವಿಜಯ್ ಸಾಥ್ ನೀಡಲಿದ್ದಾರೆ. ಈ ಚಿತ್ರದ ಬಗ್ಗೆ ಇಂದು (ಮೇ.7) ಅಧಿಕೃತ ಘೋಷಣೆ ಆಗಿದೆ. ಈ ಚಿತ್ರಕ್ಕೆ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಲಿದ್ದಾರೆ.

vijay

ಖ್ಯಾತ ನಿರ್ಮಾಪಕ ದಿಲ್ ರಾಜು ಮತ್ತು ಡೈರೆಕ್ಟರ್ ರವಿ ಕಿರಣ್ ಕೋಲ ಜೊತೆ ವಿಜಯ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಲಿದೆ. ಸದ್ಯ ಚಿತ್ರದ ಪೋಸ್ಟರ್ ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಜಯ್ ಕತ್ತಿ ಹಿಡಿದಿರುವ ಪೋಸ್ಟರ್ ರಿಲೀಸ್ ಆಗಿದೆ. ಕತ್ತಿ ನಾನೇ ರಕ್ತ ನನ್ನದೇ, ಯುದ್ಧ ನನ್ನೊಂದಿಗೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಸದ್ಯ ವಿಜಯ್‌ ಸಿನಿಮಾಗಳ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸದ್ಯ ವಿಜಯ್ ಕೈಯಲ್ಲಿ 3 ಸಿನಿಮಾಗಳಿವೆ. ಈ ಮೂರು ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಈ ಬಾರಿ ಯಶಸ್ಸು ಸಿಗಲೇ ಬೇಕು ಎಂದು ವಿಜಯ್ ಟೊಂಕ ಕಟ್ಟಿ ನಿಂತಿದ್ದಾರೆ. ‌’ಲೈಗರ್’ ವಿಜಯ್‌ಗೆ ಸಕ್ಸಸ್ ಸಿಗುತ್ತಾ ಕಾದುನೋಡಬೇಕಿದೆ.

Share This Article