‘ಲೈಗರ್’ (Liger) ಸಿನಿಮಾ ಸೋಲಿನಿಂದ ಬೇಸತ್ತ ವಿಜಯ್ ದೇವರಕೊಂಡ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸಮಂತಾ ಜೊತೆಗಿನ ಖುಷಿ ಚಿತ್ರ, ಶ್ರೀಲೀಲಾ ಜೊತೆ ಹೊಸ ಚಿತ್ರದ ಅಪ್‌ಡೇಟ್ ನಂತರ ಮತ್ತೆ ತಮ್ಮ ಮುಂಬರುವ ಸಿನಿಮಾ ಬಗ್ಗೆ ವಿಜಯ್ ಬಿಗ್ ಅಪ್‌ಡೇಟ್ ನೀಡಿದ್ದಾರೆ. ‘ಗೀತಾ ಗೋವಿಂದಂ’ (Geetha Govindam) ಸಿನಿಮಾದ ನಿರ್ದೇಶಕನ ಹೊಸ ಚಿತ್ರಕ್ಕೆ ವಿಜಯ್ ಕೈಜೋಡಿಸಿದ್ದಾರೆ. ಈ ಬಾರಿ ರಶ್ಮಿಕಾ (Rashmika Mandanna) ಬದಲು ಸೀತಾರಾಮಂ ಬೆಡಗಿ ಜೊತೆ ವಿಜಯ್ ಡ್ಯುಯೇಟ್ ಹಾಡಲಿದ್ದಾರೆ.
Advertisement
ವಿಭಿನ್ನ ಕಥೆಯೊಂದಿಗೆ ಡೈರೆಕ್ಟರ್ ಪರಶುರಾಮ್, ವಿಜಯ್ ಜೊತೆ ಕೈಜೋಡಿಸಿದ್ದಾರೆ. ಈ ಹಿಂದೆ ‘ಗೀತಾ ಗೋವಿಂದಂ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ರಶ್ಮಿಕಾ- ವಿಜಯ್ ಜೋಡಿ ಕಮಾಲ್ ಮಾಡಿತ್ತು. ಇದೀಗ ಮತ್ತೆ ಈ ತಂಡ ಹೊಸ ಸಾಹಸಕ್ಕೆ ಕೈಹಾಕಿದೆ. ಹೊಸ ಜೋಡಿ ಜೊತೆ ಚೆಂದದ ಲವ್ ಸ್ಟೋರಿ ಹೇಳಲು ಹೊರಟಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆದ ನಟಿ- ಐಕಾನ್ ಸ್ಟಾರ್‌ಗೆ ಶ್ರೀಲೀಲಾ ನಾಯಕಿ
Advertisement
Advertisement
ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ (Vijay Devarakonda), ಪರಶುರಾಮ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ದಕ್ಷಿಣ ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು, ಶಿರೀಶ್ ಈ ಚಿತ್ರಕ್ಕೆ ಹಣ ಹಾಕುತ್ತಿದ್ದು, ವಾಸು ವರ್ಮಾ ಕ್ರಿಯೇಟಿವ್ ಪ್ರೊಡ್ಯೂಸರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಸಿನಿಮಾಗೆ ಕ್ಲ್ಯಾಪ್ ಮಾಡಿದ್ರೆ, ಗೋವರ್ಧನ್ ರಾವ್ ದೇವರಕೊಂಡ ಮೊದಲ ಶಾಟ್ ನಿರ್ದೇಶಿಸಿದರು. ಜನಪ್ರಿಯ ಹಣಕಾಸುದಾರ ಸತ್ತಿ ರಂಗಯ್ಯ ಕ್ಯಾಮೆರಾಗೆ ಚಾಲನೆ ನೀಡಿದರು. ಸದ್ಯ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದೆ.
Advertisement
ಈ ಮೂಲಕ ಹೊಸ ಸಿನಿಮಾಗೆ ಚಾಲನೆ ಸಿಕ್ಕಿದೆ. ವಿಜಯ್-ಮೃಣಾಲ್ ಠಾಕೂರ್ (Mrunal Thakur) ಮೊದಲ ಬಾರಿಗೆ ಜೋಡಿಯಾಗಿ ನಟಿಸಲಿದ್ದಾರೆ. ಹಾಗಾಗಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಗೀತಾ ಗೋವಿಂದಂ ಟೀಮ್ ಎಂದ ಮೇಲೆ ಚಿತ್ರದ ಮೇಲಿನ ಪ್ರೀತಿ ಫ್ಯಾನ್ಸ್‌ಗೆ ಬೆಟ್ಟದಷ್ಟಿದೆ. ‘ಗೀತಾ ಗೋವಿಂದಂ’ ಟೀಮ್‌ನ ಹೊಸ ಕಥೆಯಲ್ಲಿ ರಶ್ಮಿಕಾ ಇಲ್ಲದೇ ಇರೋದು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ. ಆದರೆ ವಿಜಯ್- ಮೃಣಾಲ್ ಜೋಡಿ ಸಿನಿಮಾದಲ್ಲಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಅಂತ ಕಾದುನೋಡಬೇಕಿದೆ.