ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ವರುಣ್ ತೇಜ್- ಲಾವಣ್ಯ ತ್ರಿಪಾಠಿ (Lavanya Tripathi) ಮದುವೆಗೆ ಕೌಂಟ್‌ಡೌನ್ ಶುರುವಾಗಿದೆ. ಇಟಲಿಯಲ್ಲಿ ಅದ್ದೂರಿಯಾಗಿ ಮದುವೆಯಾಗಲು ಸಿದ್ಧತೆ ಕೂಡ ನಡೆಯುತ್ತಿದೆ. ನವೆಂಬರ್‌ನಲ್ಲಿ ವರುಣ್- ಲಾವಣ್ಯ ಹಸೆಮಣೆ (Wedding) ಏರುತ್ತಿದ್ದಾರೆ.
ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುನ್ನುಡಿ ಬರೆಯುಲು ಸಜ್ಜಾಗಿದ್ದಾರೆ. ನವೆಂಬರ್ 1ರಂದು ಇಟಲಿಯಲ್ಲಿ ಅದ್ದೂರಿಯಾಗಿ ಮದುವೆಯಾಗ್ತಿದ್ದಾರೆ. ನ.5ರಂದು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಮದುವೆಗೆ ಎರಡು ಕುಟುಂಬ ಸದಸ್ಯರು ಮತ್ತು ಆಪ್ತರಷ್ಟೇ ಭಾಗಿಯಾಗುತ್ತಾರೆ. ಆರತಕ್ಷತೆಗೆ ಸಿನಿರಂಗದ ನಟ-ನಟಿಯರು, ರಾಜಕಾರಣಿಗಳಿಗೆ ಆಹ್ವಾನವಿದೆ. ಇದನ್ನೂ ಓದಿ:ಶ್ರೀಲೀಲಾ, ರಶ್ಮಿಕಾಗೆ ಗೇಟ್ ಪಾಸ್ – ವಿಜಯ್ ದೇವರಕೊಂಡಗೆ ಸಾಕ್ಷಿ ವೈದ್ಯ ನಾಯಕಿ
ವರುಣ್ (Varun Tej)-ಲಾವಣ್ಯ ಮೊದಲು ಭೇಟಿಯಾಗಿದ್ದು, ಇಟಲಿಯಲ್ಲಿ ‘ಮಿಸ್ಟರ್’ ಸಿನಿಮಾದ ಚಿತ್ರೀಕರಣಕ್ಕಾಗಿ ಬಂದಾಗ. ಆ ಸಮಯದಲ್ಲಿ ಪ್ರೇಮಾಂಕುರವಾಗಿತ್ತು. ಕೆಲ ವರ್ಷಗಳ ಹಿಂದೆ ಲಾವಣ್ಯಗೆ ಇಟಲಿಯಲ್ಲಿಯೇ ವರುಣ್ ಪ್ರಪೋಸ್ ಮಾಡಿದ್ರು. ಹಾಗಾಗಿ ಮೊದಲು ಭೇಟಿಯಾಗಿದ್ದ ಜಾಗದಲ್ಲೇ ಮದುವೆಯಾಗುವುದಕ್ಕೆ ನಿಶ್ಚಿಯಿಸಿದ್ದಾರೆ.
ವರುಣ್- ಲಾವಣ್ಯ ಮದುವೆಗೆ ಧರಿಸಲು ಮನೀಷ್ ಮಲ್ಹೋತ್ರಾ (Manish Malhotra) ಬಳಿ ವಿಶೇಷವಾಗಿ ವಸ್ತ್ರ ವಿನ್ಯಾಸ ಮಾಡಿಸಿದ್ದಾರೆ. ಮದುವೆಯ ದಿನ ಈ ಹೊಸ ಜೋಡಿ ಯಾವ ಲುಕ್‌ನಲ್ಲಿ ಕಾಣಿಸಿಕೊಳ್ತಾರೆ ಎಂದು ನೋಡಲು ಅಭಿಮಾನಿಗಳು ಕ್ಯೂರಿಯಸ್ ಆಗಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]