ಮೆಗಾಸ್ಟಾರ್ ಸೊಸೆ ಲಾವಣ್ಯಗೆ ವಿಚಿತ್ರ ಕಾಯಿಲೆ- ಫ್ಯಾನ್ಸ್ ಕಾಡ್ತಿದೆ ಆ ಚಿಂತೆ

Public TV
2 Min Read
varun tej 1 1

ಟಾಲಿವುಡ್ ಬ್ಯೂಟಿ ಲಾವಣ್ಯ ತ್ರಿಪಾಠಿ (Lavanya Tripati) ಅವರು ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆಗೆ ಸೊಸೆಯಾಗಿ ಸದ್ಯದಲ್ಲೇ ಕಾಲಿಡಲಿದ್ದಾರೆ. ಇತ್ತೀಚಿಗೆ ಮೆಗಾಸ್ಟಾರ್ ಕುಟುಂಬದ ಮನೆಮಗ ವರುಣ್ ತೇಜ್ ಜೊತೆ ಅದ್ದೂರಿಯಾಗಿ ಲಾವಣ್ಯ ಎಂಗೇಜ್‌ಮೆಂಟ್ ಮಾಡಿಕೊಂಡರು. ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದರು. ಇದೀಗ ನಟಿ ಲಾವಣ್ಯ ಬಗ್ಗೆ ಹೊಸದೊಂದು ವಿಚಾರ ಚರ್ಚೆಯಾಗುತ್ತಿದೆ. ಲಾವಣ್ಯ ಅವರು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದಾರಂತೆ. ಈ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ.

varun tej

ನಟ ವರುಣ್ ತೇಜ್ (Varun Tej)- ಲಾವಣ್ಯ ಅವರು ಒಟ್ಟಿಗೆ 2 ಸಿನಿಮಾ ಮಾಡಿದ್ದರು. ಸಿನಿಮಾಗಾಗಿ ಆದ ಪರಿಚಯ ಇಂದು ಮದುವೆವರೆಗೂ ತಂದು ನಿಲ್ಲಿಸಿದೆ. ಸತತ 6 ವರ್ಷಗಳ ಪ್ರೀತಿಯನ್ನ ಮನೆಯವರಿಗೆ ತಿಳಿಸಿ, 2 ಕುಟುಂಬದ ಸಮ್ಮತಿ ಪಡೆದು ಎಂಗೇಜ್ ಆಗಿದ್ದಾರೆ. ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗ ಜೋಡಿಯ ಬಗ್ಗೆ ಅಭಿಮಾನಿಗಳಿಗೆ ಹೊಸ ತಲೆನೋವು ಶುರುವಾಗಿದೆ. ಲಾವಣ್ಯ ಅವರ ವಿಚಿತ್ರ ಕಾಯಿಲೆ ಸಮಸ್ಯೆಯಿಂದ ಮದುವೆ ಮುರಿದು ಬೀಳುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದನ್ನೂ ಓದಿ:ರಾಘವ್ ಲಾರೆನ್ಸ್-ಕಂಗನಾ ನಟನೆಯ ‘ಚಂದ್ರಮುಖಿ 2’ ಎಂಟ್ರಿಗೆ ಮುಹೂರ್ತ ಫಿಕ್ಸ್

varun tej 1 2

ಲಾವಣ್ಯ ಮೆಗಾ ಫ್ಯಾಮಿಲಿ ಸೊಸೆಯಾಗುತ್ತಾರೆ ಎನ್ನುವ ವಿಷಯ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಇನ್ನು ಲಾವಣ್ಯ ಹಿನ್ನೆಲೆ ಏನು? ಆಕೆಯ ಜಾತಿ ಏನು? ಆಕೆಯ ಆಸ್ತಿ ಮೌಲ್ಯ ಎಷ್ಟು ಅಂತೆಲ್ಲಾ ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಆಕೆ ತನಗಿರುವ ವಿಚಿತ್ರ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿದ್ದ ವೀಡಿಯೋವೊಂದು ಸದ್ದು ಮಾಡುತ್ತಿದೆ.

varun tej 2

ಸೆಲೆಬ್ರೆಟಿಗಳು ಕೂಡ ಮನುಷ್ಯರೇ ಅಲ್ಲವೇ. ಸೂಪರ್ ಸ್ಟಾರ್‌ಗಳು ಕೂಡ ಚಿತ್ರವಿಚಿತ್ರ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಕ್ಯಾನ್ಸರ್‌ನಿಂದ ಬಳಲುವವರು ಕೂಡ ಇದ್ದಾರೆ. ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿರುತ್ತಾರೆ. ಆದರೆ ಸೆಲೆಬ್ರೆಟಿಗಳು ಎನ್ನುವ ಕಾರಣಕ್ಕೆ ಅವರ ಪ್ರತಿಯೊಂದು ವಿಚಾರ ದೊಡ್ಡದಾಗಿ ಸುದ್ದಿಯಾಗುತ್ತದೆ ಅಷ್ಟೇ. 2 ವರ್ಷಗಳ ಹಿಂದೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫಾಲೋವರ್ಸ್ ಜೊತೆ ಮಾತನಾಡುತ್ತಾ ನಟಿ ಲಾವಣ್ಯ ತಮಗಿರುವ ವಿಚಿತ್ರ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು.

varun tej

ಸ್ವತಃ ಲಾವಣ್ಯ ತ್ರಿಪಾಠಿ ತಾವು ಟ್ರಿಪೋಫೋಬಿಯಾದಿಂಧ ಬಳಲುತ್ತಿರುವ ಬಗ್ಗೆ ಮಾತನಾಡಿದ್ದರು. ಚರ್ಮದ ರಂಧ್ರಗಳು, ಜೇನುಗೂಡು, ಕಮಲದ ಕಣ್ಣುಗಳ ರಂಧ್ರಗಳ ಅಥವಾ ಉಬ್ಬುಗಳನ್ನು ಹೊಂದಿರುವ ವಸ್ತುವನ್ನು ನೋಡಲು ಆಕೆ ಪ್ರಜ್ಞಾಪೂರ್ವಕವಾಗಿ ಹೆದರುತ್ತೀನಿ. ಇದರಿಂದ ಸಾಕಷ್ಟು ಬಾರಿ ಸಮಸ್ಯೆ ಎದುರಿಸಿರುವುದಾಗಿ ಹೇಳಿಕೊಂಡಿದ್ದರು. ಇದರಿಂದ ಹೊರ ಬರಲು ಪ್ರಯತ್ನ ನಡೆಸುತ್ತಿರುವುದಾಗಿ ವಿವರಿಸಿದ್ದರು. ನಾವು ಸಂತೋಷವಾಗಿ ಇರಬೇಕು. ನಮ್ಮ ಸುತ್ತಲಿನ ಪ್ರಪಂಚದಲ್ಲಿ ಸಂತಸ ಹರಡಬೇಕು, ಇದನ್ನು ನಾನು ನಂಬುತ್ತೇನೆ ಎಂದು ಲಾವಣ್ಯ ಮಾತನಾಡಿದ್ದರು.

ಇನ್ನೂ ಈಗಲೂ ಈ ವಿಚಿತ್ರ ಕಾಯಿಲೆಯಿಂದ ನಟಿ ಬಳಲುತ್ತಿದ್ದಾರಾ.? ಅಥವಾ ಗುಣಮುಖರಾಗಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಮೊದಲೇ ಶ್ರೀಜಾ, ನಿಹಾರಿಕಾ ಬದುಕು ಡಿವೋರ್ಸ್ ಪಡೆಯುವ ಮೂಲಕ ಮೂರಾ ಬಟ್ಟೆಯಾಗಿದೆ. ವರುಣ್- ಲಾವಣ್ಯ ಜೋಡಿಯ ಮಧ್ಯೆ ಈ ವಿಚಿತ್ರ ಕಾಯಿಲೆ ವಿಷ್ಯವಾಗಿ ಮದುವೆ ಬ್ರೇಕಪ್ ಆಗುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.

Share This Article