ಬೆಂಗಳೂರು: ಹುಟ್ಟುಹಬ್ಬ ಆಚರಣೆಯನ್ನ ಮಾಡದಿರುವ ನಟರ ಲಿಸ್ಟ್ ಗೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಸೇರ್ಪಡೆ ಆಗಿದ್ದಾರೆ. ಕಿಚ್ಚ ಸುದೀಪ್ರಂತೆಯೇ ಉಪೇಂದ್ರ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರೋ ಉಪೇಂದ್ರ, “ಪ್ರೀತಿಯ ಅಭಿಮಾನಿಗಳೇ ಹಾರ, ಕೇಕ್, ಬ್ಯಾನರ್ಗಳಿಗೆ ಅನವಶ್ಯಕ ಖರ್ಚು ಮಾಡದೆ ನಿಮ್ಮ ಪ್ರೀತಿ ಶುಭಾಶಯಗಳೊಂದಿಗೆ ಬಂದು ನನ್ನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಿ ಎಂದಿದ್ದಾರೆ.
Advertisement
ಇದೇ ಸಪ್ಟೆಂಬರ್ 18ಕ್ಕೆ ಉಪೇಂದ್ರ ಜನುಮದಿನ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಉಪೇಂದ್ರ ಈ ಮಾತುಗಳನ್ನಾಡಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ನೇರವಾಗಿ ಹೇಳದ ಉಪ್ಪಿ, ವ್ಯಥಾ ಹಣ ವ್ಯಯ ಮಾಡಬೇಡಿ ಎಂದಷ್ಟೇ ಹೇಳಿದ್ದಾರೆ. ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನ ಮೀಟ್ ಮಾಡ್ತಾರಾ ಅನ್ನೋದು ಇದೇ 18 ಕ್ಕೆ ಗೊತ್ತಾಗಲಿದೆ.
Advertisement
ಪ್ರೀತಿಯ ಅಭಿಮಾನಿಗಳೇ ದಯವಿಟ್ಟು ಹಾರ,ಕೇಕ್, ಬ್ಯಾನರ್ ಗಳಿಗೆ ಅನವಶ್ಯಕ ಖರ್ಚು ಮಾಡದೆ ನಿಮ್ಮ ಪ್ರೀತಿ ಶುಭಾಶಯಗಳೊಂದಿಗೆ ಬಂದು ನನ್ನ ಹುಟ್ಟು ಹಬ್ಬದಲ್ಲಿ ಪಾಲ್ಗೊಳ್ಳಿ
— Upendra (@nimmaupendra) September 10, 2017
Advertisement
For all my loving fans request not to spend money on cakes garlands and flex boards. Please come and meet me with your wishes on my birthday
— Upendra (@nimmaupendra) September 10, 2017
Advertisement
ಈ ಹಿಂದೆ ಕಿಚ್ಚ ಸುದೀಪ್ ಅವರು ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ನೀಡಿದರೆ ಅದೇ ನನಗೆ ನೀಡುವ ಉಡುಗೊರೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ತನ್ನ ನಿರ್ಧಾರವನ್ನು ಪತ್ರದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.
ಇದನ್ನೂ ಓದಿ: ಸುದೀಪ್ ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ ಏನಿದೆ?
ಇದನ್ನೂ ಓದಿ: ಬರ್ತ್ ಡೇ ಯಾಕ್ ಆಚರಿಸಿಕೊಂಡಿಲ್ಲ ಅನ್ನೋ ಅಭಿಮಾನಿಗಳ ಪ್ರಶ್ನೆಗಳಿಗೆ ಸುದೀಪ್ ಉತ್ತರಿಸಿದ್ದು ಹೀಗೆ