ದೇಶದ ಮೇಲೆ ಪ್ರೀತಿ ಇರುವವರು ವೋಟ್ ಹಾಕಬೇಕು- ಸುದೀಪ್ ಮನವಿ

Public TV
1 Min Read
sudeep

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Actor Sudeep) ಮಗಳು ಸಾನ್ವಿ (Sanvi Sudeep) ಜೊತೆ ಆಗಮಿಸಿ ವೋಟ್ ಮಾಡಿದ್ದಾರೆ. ದೇಶಕ್ಕಾಗಿ ಬಂದು ವೋಟ್ ಮಾಡಿ ಎಂದು ನಟ ಸುದೀಪ್ ಮಾತನಾಡಿದ್ದಾರೆ. ದೇಶದ ಮೇಲೆ ಪ್ರೀತಿ ಇರುವವರು ವೋಟ್ ಮಾಡುತ್ತಾರೆ. ಬರದೇ ಇರುವವರ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುತ್ತೀರಾ ಎಂದು ನಟ ಮಾತನಾಡಿದ್ದಾರೆ. ಇದನ್ನೂ ಓದಿ:ಬೆಂಗಳೂರಿನಲ್ಲಿದ್ದರೂ, ಉಡುಪಿಗೆ ಬಂದು ಮತ ಹಾಕುವೆ : ನಟ ರಕ್ಷಿತ್ ಶೆಟ್ಟಿ

SUDEEP 1 1ಜೆಪಿ ನಗರದ ಆಕ್ಸ್‌ಫರ್ಡ್ ಸ್ಕೂಲ್‌ಗೆ ಆಗಮಿಸಿ ಮತದಾನ ಮಾಡಿದ ಸುದೀಪ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ದೇಶದ ಮೇಲೆ ಪ್ರೀತಿ ಇರುವವರು ಬಂದು ವೋಟ್ ಹಾಕಬೇಕು. ಕೆಲವರು ಹೇಳಿದ್ರೂ ಬಂದು ಹಾಕಲ್ಲ. ಅಂತಹವರನ್ನು ಏನೂ ಮಾಡೋಕೆ ಆಗುತ್ತೆ. ಯಾರು ಬಂದು ವೋಟ್ ಹಾಕುತ್ತಾರೆ ಅವರಿಗೆ ಗೌರವ ಕೋಡೊಣ ಎಂದಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮತ (Vote) ಹಾಕಿದ್ದಾರೆ ಎಂದು ಸುದೀಪ್ ಮಾತನಾಡಿದ್ದಾರೆ.

ಅಂದಹಾಗೆ, ತಂದೆಯ ಜೊತೆ ಸಾನ್ವಿ ಸುದೀಪ್ ವೋಟ್ ಮಾಡಿದ್ದು, ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ.‌

Share This Article