ಪೈಲ್ವಾನ್ ಸಿನಿಮಾಗಾಗಿ ಕಿಚ್ಚನ ತಯಾರಿ ಹೇಗಿತ್ತು?

Public TV
2 Min Read
Pailwaan F

ಬೆಂಗಳೂರು: ಭಾರತೀಯ ಸಿನಿಮಾ ರಂಗದಲ್ಲಿಯೇ ಕನ್ನಡದ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಬಿಡುಗಡೆ ಮುನ್ನವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಮುನ್ಸೂಚನೆಯನ್ನ ನೀಡಿದೆ. ಪ್ರತಿ ಸಿನಿಮಾಗಳಲ್ಲಿ ಖಡಕ್ ಅಧಿಕಾರಿ, ರಫ್ ಆ್ಯಂಡ್ ಟಫ್ ಲುಕ್, ಲವ್ವರ್ ಬಾಯ್ ಪಾತ್ರದಲ್ಲಿ ಮಿಂಚುತ್ತಿದ್ದ ಸುದೀಪ್ ಮೊದಲ ಬಾರಿಗೆ ಕುಸ್ತಿಪಟುವಾಗಿ ಸಿನಿಮಾ ಅಂಗಳಕ್ಕೆ ಇಳಿದಿದ್ದಾರೆ. ಒಂದು ಕಾಲದಲ್ಲಿ ಜಿಮ್ ಅಂದ್ರೆ ದೂರ ಓಡ್ತಿದ್ದ ಸುದೀಪ್, ಪೈಲ್ವಾನನಿಗಾಗಿ ಮೈಯನ್ನು ಹುರಿ ಮಾಡಿಕೊಂಡಿದ್ದಾರೆ. ಹಾಗಾದ್ರೆ ಸಿನಿಮಾ ಒಪ್ಪಿಕೊಂಡ ಮೇಲೆ ಸುದೀಪ್ ಚಿತ್ರದ ತಯಾರಿ ನಡೆಸಿದ್ದ ರೀತಿಯನ್ನು ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

ಸಿನಿಮಾ ತಯಾರಿ ಬಗ್ಗೆ ಸುದೀಪ್ ಹೇಳಿದ್ದು ಹೀಗೆ: ಪೈಲ್ವಾನ್ ಸಿನಿಮಾಗೂ ಮುನ್ನ ನನ್ನ ಮುಂದೆ ಜಿಮ್ ಬಗ್ಗೆ ಮಾತಾಡಿದ್ರೆ ತಲೆ ಕೆಡುತ್ತಿತ್ತು. ಪೈಲ್ವಾನ್ ಕಥೆ ಒಪ್ಪಿಕೊಂಡ ಮೇಲೆ ಎರಡ್ಮೂರು ತಿಂಗಳು ಹಾಗೆ ಜಿಮ್ ಗೆ ಹೋಗದೇ ಕಾಲ ಕಳೆದೆ.

Pailwaan 1

ಒಂದು ಸಾರಿ ನಿರ್ದೇಶಕ ಕೃಷ್ಣ ಮುಂದೆ ನಾವ್ ಯಾವಾಗ ಸುಲ್ತಾನ್ ಮತ್ತು ದಂಗಲ್ ರೀತಿ ಸಿನಿಮಾ ಮಾಡೋದು ಅಂತಾ ಸಹಜವಾಗಿಯೇ ಹೇಳಿದ್ದೆ. ನನ್ನ ಮಾತನ್ನು ತುಂಬಾ ಸೀರಿಯಸ್ ಆಗಿಯೇ ತೆಗೆದುಕೊಂಡ ಕೃಷ್ಣ ಎರಡ್ಮೂರು ತಿಂಗಳಲ್ಲಿ ಸುಂದರವಾದ ಕಥೆಯನ್ನು ಸಿದ್ಧಪಡಿಸಿಕೊಂಡು ಬಂದರು. ಕಥೆ ಕೇಳಿ ಮೊದಲು ಬೇಡ ಎಂದುಸ ನಂತರ ಒಪ್ಪಿಕೊಂಡೆ. ತರಬೇತಿ ವೇಳೆ ಮೊದಲಿಗೆ ತುಂಬಾನೇ ಕಷ್ಟ ಆಯ್ತು. ಹೆಬ್ಬುಲಿ ಸಿನಿಮಾದಲ್ಲಿ ನಟಿಸಿರುವ ಕಬೀರ್ ಅವರಿಗೂ ಪೈಲ್ವಾನ್‍ದಲ್ಲಿ ಒಂದು ಪ್ರಮುಖ ಪಾತ್ರವನ್ನು ಕೃಷ್ಣ ಹಂಚಿಕೆ ಮಾಡಿದ್ರು.

ಕಥೆ ಒಪ್ಪಿಕೊಂಡ ಬಳಿಕ ನಾನು ಒಂದೆರೆಡು ತಿಂಗಳು ಜಿಮ್ ಟ್ರೈನಿಂಗ್ ಪಡೆಯದೇ ಓಡಾಡಿಕೊಂಡಿದ್ದೆ. ಒಂದು ದಿನ ಕಬೀರ್ ಸಿನಿಮಾಗಾಗಿ ಬಾಡಿ ಮಾಡಿಕೊಂಡಿರುವ ಫೋಟೋ ವಾಟ್ಸಪ್ ಗೆ ಬಂತು. ಕಬೀರ್ ಫೋಟೋ ನೋಡಿ ನನಗೆ ಸುಸ್ತಾಯ್ತು. ಚಿತ್ರಕ್ಕಾಗಿಯೇ ಕಬೀರ್ ಕ್ರಮಬದ್ಧವಾಗಿ ಜಿಮ್ ಮಾಡಿ ಸಿನಿಮಾಗೆ ಬೇಕಾದಂತೆ ತಮ್ಮ ದೇಹವನ್ನು ಹುರಿ ಮಾಡಿಕೊಂಡಿದ್ದರು.

Kabir Duhan Singh

ಕಬೀರ್ ಶೂಟಿಂಗ್ ಗೆ ಬಂದಾಗ ನಾನು ಅವರ ಮುಂದೆ ಶರ್ಟ್ ತೆಗೆಯಬೇಕಲ್ವಾ ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟಿಕೊಂಡಿತು. ಶೂಟಿಂಗ್ ಸ್ಪಾಟ್ ನಲ್ಲಿ ಕಲಾವಿದರು ಸೇರಿದಂತೆ ತುಂಬಾ ಜನ ಇರ್ತಾರೆ. ಎಲ್ಲರ ಮುಂದೆ ಮಾನ ಮರ್ಯಾದೆ ಹೋಗುತ್ತೆ ಅಂತಾ ತಲೆ ಕೆಟ್ಟು ಹೋಗಿತ್ತು. ಆ ಒಂದು ಚಿಂತೆ ನನ್ನನ್ನ ಬೆಳಗ್ಗೆ 4 ಗಂಟೆಗೆ ಎಬ್ಬಿಸಲು ಆರಂಭಿಸಿತು.

ಅದಾದ ಬಳಿಕ ನಿರಂತರವಾಗಿ 8 ತಿಂಗಳು ಜಿಮ್‍ಗೆ ಹೋಗುತ್ತಿದೆ. ಆರಂಭದ ಎರಡ್ಮೂರು ತಿಂಗಳು ಉಪ್ಪು, ಹಾಲು, ಸಕ್ಕರೆ ಸಹ ತಿನ್ನಲಿಲ್ಲ. ತರಬೇತಿಗಾಗಿ ಇಷ್ಟವಾದ ಎಲ್ಲ ಆಹಾರವನ್ನು ತ್ಯಜಿಸಿ ಇಂದು ನಾನು ನಾನಾಗಿದ್ದೇನೆ ಎಂಬ ಖುಷಿ ನನಗಿದೆ. ಟ್ರೈನಿಂಗ್ ಆರಂಭದಲ್ಲಿ ತುಂಬಾನೇ ಸಿಟ್ಟು ಬರುತ್ತಿತ್ತು. ನಿರ್ದೇಶಕ ಕೃಷ್ಣ ನನಗೆ ದೊಡ್ಡ ವಿಲನ್ ರೀತಿಯಲ್ಲಿ ಕಾಣಿಸುತ್ತಿದ್ರು. ಇದೀಗ ನನ್ನ ಬಗ್ಗೆ ನನಗೆ ಹೆಮ್ಮೆ ಆಗುತ್ತದೆ ಎಂದಿದ್ದರು.

Pailwan 1

ಪೈಲ್ವಾನ್ ಚಿತ್ರದ ಟೀಸರ್, ಟ್ರೈಲರ್, ಹಾಡುಗಳು ಸಖತ್ ಸದ್ದು ಮಾಡುತ್ತಿವೆ. ತುಳುನಾಡಿನ ಬಾಲಿವುಡ್ ನಟ ಸುನಿಲ್ ಶೆಟ್ಟಿ ಸಹ ಪೈಲ್ವಾನ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೈಲ್ವಾನನಿಗೆ ಜೊತೆಯಾಗಿ ಮುದ್ದು ಚೆಲುವೆ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಚಿತ್ರದ ಸೆಪ್ಟೆಂಬರ್ 12ರಂದ ತೆರೆಗೆ ಅಪ್ಪಳಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *