ಕೊಪ್ಪಳ: ನಟ ಸುದೀಪ್ ನಮ್ಮ ಸಮಾಜದ ಓರ್ವ ಕಲಾವಿದ. ಸಿನಿಮಾದಲ್ಲಿ ಸುದೀಪ್ ಅದ್ಭುತವಾಗಿ ನಟನೆ ಮಾಡುವ ಮೇಲಕ್ಕೆ ಬಂದಿದ್ದಾರೆ. ಶ್ರೀರಾಮುಲು ಸಮಾಜಪರ ಕೆಲಸಗಳಿಂದ ರಾಜಕಾರಣದಲ್ಲಿ ಮೇಲೆ ಬಂದಿದ್ದೇನೆ. ಇಂದು ಬೆಳಗ್ಗೆ ಸುದೀಪ್ ಅವರ ಫೋನ್ ನಲ್ಲಿ ಮಾತನಾಡಿದ್ದು, ಬದಾಮಿಯಲ್ಲಿ ಪ್ರಚಾರ ಮಾಡಲ್ಲ ಅಂತಾ ತಿಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಚುನಾವಣಾ ಪ್ರಚಾರಕ್ಕೆ ಶ್ರೀರಾಮುಲು ಆಗಮಿಸಿದ್ರು. ಈ ವೇಳೆ ಸುದ್ದಿಗಾರರರೊಂದಿಗೆ ಮಾತನಾಡಿದ ಸಂಸದರು, ನನ್ನ ವಿರುದ್ಧ ಪ್ರಚಾರ ಮಾಡಲ್ಲ ಅಂತಾ ಸುದೀಪ್ ಈಗಾಗಲೇ ಟ್ವೀಟ್ ಮಾಡಿದ್ದಾರೆ. ಶ್ರೀರಾಮುಲು ವಿರುದ್ಧ ಪ್ರಚಾರ ಮಾಡುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯಗಳು ಬಂದಿದ್ದರಿಂದ ಹಿಂದೆ ಸರಿದಿದ್ದಾರೆ. ಇಂದು ಬೆಳಗ್ಗೆ ಎಂತಹ ಪರಿಸ್ಥಿತಿಯಲ್ಲೂ ನನ್ನ ವಿರುದ್ಧದ ಚುನಾವಣೆ ಪ್ರಚಾರಕ್ಕೆ ಬರಲ್ಲ ಅಂತಾ ಹೇಳಿದ್ದಾರೆ ಎಂದು ತಿಳಿಸಿದ್ರು.
ಮೋದಿ ವಿರುದ್ಧ ಸಿಎಂ ಟ್ವೀಟ್ ಮಾಡಿರುವ ವಿಚಾರವಾಗಿ ಪ್ರತಿಕ್ರಿಸಿದ ಶ್ರೀರಾಮುಲು, ಗಾಜಿನ ಮನೆ ಮೇಲೆ ನಿಂತು ಇನ್ನೊಬ್ಬರ ಮನೆ ಮೇಲೆ ಕಲ್ಲು ಹೊಡೆಯುವ ಕೆಲಸವನ್ನು ಸಿಎಂ ಮಾಡ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಾ ಭ್ರಷ್ಟ ಮಂತ್ರಿಗಳು ತುಂಬಿಕೊಂಡಿದ್ದಾರೆ. ಮೂರು ಬಿಟ್ಟವರೇ ಅಂದ್ರೆ ಕಾಂಗ್ರೆಸ್‍ನವರು ಅಂತಾ ಟೀಕಿಸಿದ್ರು.