Connect with us

ದರ್ಶನ್ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಲು ಸುದೀಪ್ ನಕಾರ

ದರ್ಶನ್ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಲು ಸುದೀಪ್ ನಕಾರ

ತುಮಕೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಟ್ವೀಟ್ ಬಗ್ಗೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ದರ್ಶನ್ ಹಾಗೂ  ಸುದೀಪ್ ಅವರ ನಡುವೆ ವೈಮನಸ್ಸು ಉಂಟಾಗಿರುವ ಬಗ್ಗೆ ಸುದ್ದಿಯಾಗುತ್ತಿರುವ ನಡುವೆ ಇಂದು ಹೆಬ್ಬುಲಿ ಚಿತ್ರದ ಪ್ರಮೋಷನ್‍ಗಾಗಿ ನಟ ಸುದೀಪ್ ತುಮಕೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಚಿತ್ರಮಂದಿರದ ಬಳಿ ಸುದೀಪ್ ಅಭಿಮಾನಿಗಳ ಹರ್ಷೋದ್ಗಾರ ಜೋರಾಗಿತ್ತು. ಸುದೀಪ್ ನೋಡಲು ಅಭಿಮಾನಿಗಳು ಮುಗಿಬಿದ್ದರು. ಕಿಚ್ಚ ಕಿಚ್ಚ ಎಂದು ಕೂಗುತ್ತಾ ಚಪ್ಪಾಳೆ ಹಾಕಿದ್ರು.

ಇದೇ ವೇಳೆ ಮಾತನಾಡಿದ ನಟ ಸುದೀಪ್, ಚಿತ್ರದ ಸಕ್ಸಸ್ ಬಗ್ಗೆ ಅಭಿಮಾನಿಗಳನ್ನು ಭೇಟಿ ಆಗುತ್ತಿದ್ದೇನೆ. ರಾಜ್ಯದ ಎಲ್ಲಾ ಕಡೆ ತೆರಳಲಿದ್ದೇನೆ. ತುಮಕೂರಿನಿಂದ ಪ್ರಾರಂಭ ಮಾಡಿದ್ದೇನೆ ಅಂತ ಕೇವಲ ಚಿತ್ರದ ಬಗ್ಗೆ ಮಾತ್ರ ಮಾತನಾಡಿದ್ರು. ಆದ್ರೆ ದರ್ಶನ್ ಟ್ವೀಟ್ ಬಗ್ಗೆ ಪ್ರಶ್ನೆ ಮಾಡಿದಾಗ ಏನೂ ಮಾತನಾಡದೆ ಸುಮ್ಮನೆ ಥಿಯೇಟರ್ ಒಳಗೆ ಹೋದ್ರು.

ಇದನ್ನೂ ಓದಿ: ಸುದೀಪ್ ಅವರ ಈ ಮಾತಿನಿಂದ ದರ್ಶನ್ ಮನಸ್ಸಿಗೆ ಘಾಸಿ!

ಇದನ್ನೂ ಓದಿ: ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?

Advertisement
Advertisement