ದಾವಣಗೆರೆ: ಇಂದು ನಟ ಕಿಚ್ಚ ಸುದೀಪ್ ಜಿಲ್ಲೆಗೆ ಆಗಮಿಸಬೇಕಿತ್ತು. ಆದರೆ ಕಾರಣಾಂತರದಿಂದ ಸುದೀಪ್ ಬರಲು ಸಾಧ್ಯವಾಗದೇ ವಿಡಿಯೋ ಮೂಲಕ ಸಂದೇಶ ರವಾನಿಸಿ ಕ್ಷಮೆ ಕೇಳಿದ್ದಾರೆ.
ಇಂದು ದಾವಣಗೆರೆಯ ಬಿಐಟಿ ಕಾಲೇಜ್ ರೋಡಿನಲ್ಲಿರುವ ಕಿಚ್ಚ ಸುದೀಪ್, ದೊನ್ನೆ ಬಿರಿಯಾನಿ ಹೋಟೆಲ್ ಪ್ರಾರಂಭೋತ್ಸವಕ್ಕೆ ಸುದೀಪ್ ಅವರು ಆಗಮಿಸಬೇಕಿತ್ತು. ನಿರ್ದೇಶಕ ನಂದ ಕಿಶೋರ್ ಒಡೆತನದ ದೊನ್ನೆ ಬಿರಿಯಾನಿ ಹೋಟೆಲ್ ಇದಾಗಿದೆ. ಈ ಹೋಟೆಲ್ ಉದ್ಘಾಟನೆಗೆ ಸುದೀಪ್ ಬರಬೇಕಿತ್ತು. ಆದ್ದರಿಂದ ಇಂದು ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಾರಂಭೋತ್ಸವವನ್ನು ನಂದ ಕಿಶೋರ್ ಮುಂದಕ್ಕೆ ಹಾಕಿದ್ದಾರೆ.
ಈ ಬಗ್ಗೆ ಸುದೀಪ್ ಅವರು ವಿಡಿಯೋ ಮೂಲಕ ಸಂದೇಶ್ ರವಾನಿಸಿದ್ದಾರೆ. “ಎಲ್ಲರಿಗೂ ಕಿಚ್ಚನ ನಮಸ್ಕಾರ, ಇಂದು ನಾನು ದಾವಣಗೆರೆಯಲ್ಲಿರುವ ಒಂದು ಹೋಟೆಲ್ ಓಪನಿಂಗ್ ಗೆ ಬರಬೇಕಿತ್ತು. ಕಾರಣಾಂತರದಿಂದ ಬರಲು ಸಾಧ್ಯವಾಗುತ್ತಿಲ್ಲ. ಕ್ಷಮೆ ಇರಲಿ, ಇದನ್ನು ಮುಂದಕ್ಕೆ ಹಾಕಿ ನಾನು ಅಕ್ಟೋಬರ್ 19 ರಂದು ನಾನು ಬರುತ್ತಿದ್ದೇನೆ. ಶಾಸಕ ಎಸ್ ವಿ ರಾಮಚಂದ್ರಪ್ಪ, ಹಾಗೂ ವಾಲ್ಮೀಕಿ ಶ್ರೀ ಸೇರಿದಂತೆ ನನ್ನನ್ನು ಕರೆದಿದ್ದರೋ ಅವರಿಗೆಲ್ಲ ನಂದಕಿಶೋರ್ ಪರ ಕ್ಷಮೆ ಕೇಳುತ್ತಿದ್ದೇನೆ. ಕಾರಣಾಂತರದಿಂದ ನಾನು ಹೈದರಾಬಾದಿನಲ್ಲಿ ಉಳಿದುಕೊಂಡಿದ್ದೇನೆ. 19ಕ್ಕೆ ಖಂಡಿತ ನಾನು ಬರುತ್ತೇನೆ” ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Kicchana donne biriyani mane opening Date postponed to 19 Th of Oct .. @KicchaSudeep @KSFA_Official @SDKSFA @Kiccha_DHFC @KicchaFC pic.twitter.com/3d6NTDrwYC
— Davangere KSFA (@DKSFAOfficial) September 29, 2018