ನಾನು ಸಿನಿಮಾ ಸಕ್ಸಸ್‌ಗೆ ಪ್ರಾರ್ಥಿಸಲ್ಲ: ಸೀಕ್ರೆಟ್ ಬಿಚ್ಚಿಟ್ಟ ಸಲ್ಮಾನ್ ಖಾನ್

Public TV
1 Min Read
salman khan

ಬಾಲಿವುಡ್ ನಟ ಸಲ್ಮಾನ್ ಖಾನ್‌ ನಟನೆಯ ‘ಸಿಕಂದರ್‌’ ಚಿತ್ರ ಇದೇ ಮಾ.30ರಂದು ರಿಲೀಸ್‌ ಸಜ್ಜಾಗಿದೆ. ಈ ಚಿತ್ರದ ಪ್ರಚಾರ ಕಾರ್ಯದ ವೇಳೆ, ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ಸಿಕಂದರ್’ ಸಿನಿಮಾ ಸುತ್ತ ಯಾವುದೇ ವಿವಾದಗಳು ಬೇಡ ಎಂದು ಸಲ್ಮಾನ್ (Salman Khan) ಹೇಳಿದ್ದಾರೆ. ಇದನ್ನೂ ಓದಿ:KD ಲೇಡಿ ರೀಷ್ಮಾಗೆ ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಎಂದ ಧ್ರುವ ಸರ್ಜಾ

salman khan 1

ಚಿತ್ರದ ಪ್ರಚಾರ ಕಾರ್ಯದಲ್ಲಿ ಸಲ್ಮಾನ್‌ಗೆ ನಿಮ್ಮ ಚಿತ್ರಗಳು ರಿಲೀಸ್ ಆದಾಗ ಒಂದಲ್ಲಾ ಒಂದು ವಿವಾದಗಳು ಟ್ರೆಂಡ್ ಆಗುತ್ತಲೇ ಇರುತ್ತದೆ ಎಂದು ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಟ, ನನಗೆ ವಿವಾದಗಳ ಅಗತ್ಯವಿಲ್ಲ. ಆದರೆ ನಾನು ಹಲವಾರು ವಿವಾದಗಳನ್ನು ಎದುರಿಸಿದ್ದೇನೆ. ವಿವಾದಗಳಿಂದ ಸಿನಿಮಾ ಹಿಟ್ ಆಗುತ್ತೆ ಎಂದು ನಾನು ನಿರೀಕ್ಷೆ ಮಾಡಲ್ಲ. ಇದರಿಂದ ಅದೆಷ್ಟೋ ಬಾರಿ ಸಿನಿಮಾ ರಿಲೀಸ್‌ಗೆ ತಡವಾಗೋದನ್ನು ನಾನು ನೋಡಿದ್ದೇನೆ. ಇದನ್ನೂ ಓದಿ:L2 Empuraan: ರಿಲೀಸ್ ಆದ ಎರಡೇ ದಿನಕ್ಕೆ 100 ಕೋಟಿ ಬಾಚಿದ ಮೋಹನ್‌ ಲಾಲ್‌

Bollywood Salman Khan

ಇನ್ನೇನು ‘ಸಿಕಂದರ್’ ನಾಳೆ ರಿಲೀಸ್ ಆಗಲಿದೆ. ಹೀಗಿರುವಾಗ ಯಾವುದೇ ಕಾಂಟ್ರವರ್ಸಿ ಅಗತ್ಯ ನಮಗಿಲ್ಲ. ಟ್ರೈಲರ್‌ನಲ್ಲಿ ನೋಡಿರೋದಕ್ಕಿಂತ ಹೆಚ್ಚಿನದ್ದು ಸಿನಿಮಾದಲ್ಲಿ ಪ್ರೇಕ್ಷಕರಿಗೆ ಸಿಗಲಿದೆ ಎಂದು ನಟ ಭರವಸೆ ನೀಡಿದ್ದಾರೆ. ಇದು ಕೇವಲ 3.5 ನಿಮಿಷಗಳ ಟ್ರೈಲರ್ ಅಷ್ಟೇ. ನೀವು 2 ಗಂಟೆ 25 ನಿಮಿಷಗಳ ಸಿಕಂದರ್ ಚಿತ್ರವನ್ನು ನೋಡಿದಾಗ, ಈ ಟ್ರೈಲರ್ ಏನೇನೂ ಅಲ್ಲ ಎಂದು ನಿಮಗೆ ಅರ್ಥವಾಗುತ್ತದೆ. ನಾವು ಟ್ರೈಲರ್‌ನಲ್ಲಿ ಎಲ್ಲವನ್ನೂ ಹಾಕಲು ಸಾಧ್ಯವಿಲ್ಲ. ಚಿತ್ರದಲ್ಲಿ ನಿಮಗೆ ಇಷ್ಟವಾಗುವ ಬಹಳಷ್ಟು ವಿಷಯಗಳಿವೆ. ಆ್ಯಕ್ಷನ್ ಚಿತ್ರಕ್ಕೆ, ಭಾವನೆಗಳು ಬಹಳ ಮುಖ್ಯ ಎಂದಿದ್ದಾರೆ ಸಲ್ಮಾನ್.

salman khan

ಭ್ರಷ್ಟ ರಾಜಕೀಯದ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಸಲ್ಮಾನ್ ನಟಿಸಿದ್ದಾರೆ. ‘ಮಗಧೀರ’ ನಟಿ ಕಾಜಲ್, ‘ಬಾಹುಬಲಿ’ ಖ್ಯಾತಿಯ ಕಟ್ಟಪ್ಪ, ಕನ್ನಡದ ನಟ ಕಿಶೋರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಮಾ.30ರಂದು ಸಿಕಂದರ್ ರಿಲೀಸ್ ಆಗಲಿದೆ. ಮೊದಲ ಬಾರಿ ಸಲ್ಮಾನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೊತೆಯಾಗಿ ನಟಿಸಿರೋದ್ರಿಂದ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

Share This Article