‘ಯೆಂಟಮ್ಮಾʼ ಅಂತಾ ಮಸ್ತ್‌ ಆಗಿ ಲುಂಗಿ ಡ್ಯಾನ್ಸ್ ಮಾಡಿದ ಸಲ್ಮಾನ್ ಖಾನ್‌, ರಾಮ್‌ಚರಣ್, ವೆಂಕಟೇಶ್

Public TV
1 Min Read
ram charan

ಲ್ಮಾನ್ ಖಾನ್ (Salman Khan) ಮತ್ತು ಪೂಜಾ ಹೆಗ್ಡೆ (Pooja Hegde) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದ ‘ಯೆಂಟಮ್ಮಾ’ ಸಾಂಗ್ ರಿಲೀಸ್ ಆಗಿ ಯೂಟ್ಯೂಬ್‌ನಲ್ಲಿ ಹೈಪ್ ಕ್ರಿಯೆಟ್ ಮಾಡುತ್ತಿದೆ. ಸಲ್ಮಾನ್ ಖಾನ್ ಜೊತೆ ರಾಮ್ ಚರಣ್, ವೆಂಕಟೇಶ್ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

POOJA HEGDE 1 1

ಸಲ್ಮಾನ್ ಖಾನ್ ನಟನೆ ಮತ್ತು ನಿರ್ಮಾಣದ ಜವಬ್ದಾರಿ ಹೊತ್ತಿರುವ Kisi Ka Bhai Kisi Ka Jaan ಸಿನಿಮಾ ಸಾಂಗ್ ರಿಲೀಸ್ ಆಗಿದೆ. ಸಲ್ಮಾನ್ ಚಿತ್ರಕ್ಕೆ ಗೆಸ್ಟ್ ಅಪಿಯರೆನ್ಸ್ ಕೊಟ್ಟಿರುವ ರಾಮ್ ಚರಣ್ – ವೆಂಕಟೇಶ್ ಮಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಪೂಜಾ ಹೆಗ್ಡೆ ಕೂಡ ನಾನೇನು ಕಮ್ಮಿ ಅಂತಾ ಭರ್ಜರಿಯಾಗಿ ಯೆಂಟಮ್ಮಾ ಸಾಂಗ್‌ಗೆ ಸ್ಟೆಪ್ ಹಾಕಿದ್ದಾರೆ. ಇದನ್ನೂ ಓದಿ:ಮಾಜಿ ಪತಿ ಹೊಸ ಸಂಬಂಧದ ಬಗ್ಗೆ ನಾನೇನು ಮಾತನಾಡಲೇ ಇಲ್ಲ: ಸಮಂತಾ ಸ್ಪಷ್ಟನೆ

ram charan 1ನಟ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ಈ ಸಿನಿಮಾದ ಮೊದಲ ಹಾಡು ಕೆಲವು ಕಾರಣದಿಂದ ಟ್ರೋಲ್ ಆಗಿತ್ತು. ಆದರೆ ಈಗ ‘ಯೆಂಟಮ್ಮಾ’ ಸಾಂಗ್ ಧೂಳೆಬ್ಬಿಸುತ್ತಿದೆ. ಈ ಹಾಡಿನಲ್ಲಿ ಸಲ್ಮಾನ್ ಖಾನ್, ರಾಮ್ ಚರಣ್, ದಗ್ಗುಬಾಟಿ ವೆಂಕಟೇಶ್ ಅವರು ಪಂಚೆ ಎತ್ತಿಕಟ್ಟಿ ಕುಣಿದಿದ್ದಾರೆ. ಪಾಯಲ್ ದೇವ್ ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ಹಿಂದಿ ಮತ್ತು ತೆಲುಗು ಮಿಶ್ರಿತ ಸಾಹಿತ್ಯ ಇದೆ. ಇದು ಅಭಿಮಾನಿಗಳಿಗೆ ಹೊಸ ಕಿಕ್ ನೀಡುತ್ತಿದೆ.

 

View this post on Instagram

 

A post shared by Pooja Hegde (@hegdepooja)

ಇನ್ನೂ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರ ಏ. 21ಕ್ಕೆ ತೆರೆಗೆ ಬರುತ್ತಿದೆ. ಮೊದಲ ಬಾರಿಗೆ ಸಲ್ಮಾನ್- ಪೂಜಾ ಕಾಂಬಿನೇಷನ್‌ನಲ್ಲಿ ಈ ಚಿತ್ರ ಮೂಡಿ ಬಂದಿದೆ. ರಿಲೀಸ್‌ ಬಳಿಕ ಈ ಸಿನಿಮಾ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡುತ್ತೆ ಅಂತಾ ಕಾದುನೋಡಬೇಕಿದೆ.

Share This Article