ಸ್ಯಾಂಡಲ್‌ವುಡ್‌ನಲ್ಲಿ ನಗುವಿನ ಕಚಗುಳಿ ಇಡುವಲ್ಲಿ ಯಶಸ್ವಿಯಾಗಿರುವ ʻಹರಿಕಥೆ ಅಲ್ಲ ಗಿರಿಕಥೆʼ ಚಿತ್ರದ ನಂತರ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಆಡಿ ಕಾರೊಂದನ್ನ ಖರೀದಿಸಿದ್ದಾರೆ. ನಿಮ್ಮ ಪರಿಶ್ರಮ ಮತ್ತು ಬದ್ಧತೆ ಯಾವಾಗಲೂ ಹೆಮ್ಮೆ ಆಗುತ್ತದೆ ಎಂದು ಪತಿಯನ್ನು ಪತ್ನಿ ಪ್ರಗತಿ ಶೆಟ್ಟಿ ಹೊಗಳಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟ, ನಿರ್ದೇಶಕ, ನಿರ್ಮಾಪಕನಾಗಿ ಗಮನ ಸೆಳೆದ ಪ್ರತಿಭೆ ರಿಷಬ್ ಶೆಟ್ಟಿ ಇತ್ತೀಚೆಗಷ್ಟೇ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಮೂಲಕ ಗಲ್ಲಾಪಟ್ಟಿಗೆಯಲ್ಲಿ ಸೌಂಡ್ ಮಾಡಿದ್ದರು. ಈ ಬೆನ್ನಲ್ಲೇ ಈಗ ಹೊಸ ದುಬಾರಿ ಕಾರೊಂದನ್ನ ಕೊಂಡುಕೊಂಡಿದ್ದಾರೆ. `ಆಡಿ ಕ್ಯೂ7′ ಖರೀದಿಸಿರುವ ಫೋಟೋವನ್ನು ಶೇರ್ ಮಾಡಿ, ಪತ್ನಿ ಪ್ರಗತಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಕೊಠಡಿ ಮುಂದೆ ಹೈಡ್ರಾಮಾ- ಪವಿತ್ರ ಲೋಕೇಶ್, ನರೇಶ್ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ರಮ್ಯಾ
View this post on Instagram
ರಿಷಬ್ ಶೆಟ್ಟಿ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ರೆ, ಪತ್ನಿ ಪ್ರಗತಿ ಶೆಟ್ಟಿ ಚಿತ್ರರಂಗದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಗಮನ ಸೆಳೆದಿದ್ದಾರೆ. ಈಗ ಮನೆಗೆ ಬಂದಿರುವ ಹೊಸ ಆಡಿ ಕಾರಿನ ಮುಂದೆ ನಿಂತು ರಿಷಬ್ ದಂಪತಿ ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗುತ್ತಿದೆ. ಆಡಿ ಕ್ಯೂ7 ಹೊಸದಾಗಿ ಸೇರ್ಪಡೆ ಆಯ್ತು. ನಿಮ್ಮ ಪರಿಶ್ರಮ ಮತ್ತು ಬದ್ಧತೆ ಬಗ್ಗೆ ಯಾವಾಗಲೂ ಹೆಮ್ಮೆ ಆಗುತ್ತದೆ ಎಂದು ಖುಷಿಯಿಂದ ಪತ್ನಿ ಪ್ರಗತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದೀಗ ಅಭಿಮಾನಿಗಳು, ಮತ್ತು ಸ್ನೇಹಿತರು ದಂಪತಿಗೆ ಶುಭಹಾರೈಸುತ್ತಿದ್ದಾರೆ.