‘ಆರ್‌ಆರ್‌ಆರ್’ ಸಿನಿಮಾ 2022ರ ವರ್ಷದ ಸೂಪರ್ ಡೂಪರ್ ಹಿಟ್ ಸಿನಿಮಾವಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಇತಿಹಾಸ ಬರೆದಿತ್ತು. ಇತ್ತೀಚಿಗೆ ರಾಜಮೌಳಿ ನಿರ್ದೇಶನದ ‘ನಾಟು ನಾಟು’ ಹಾಡಿಗೆ ಆಸ್ಕರ್ ಅವಾರ್ಡ್ ಕೂಡ ತಮ್ಮದಾಗಿಸಿಕೊಂಡರು. ಈಗ ‘ಆರ್‌ಆರ್‌ಆರ್’ ಟೀಮ್, ಆಸ್ಕರ್ ವಿಜೇತರನ್ನ ಆಯ್ಕೆ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಆಸ್ಕರ್ ಜ್ಯೂರಿಯಾಗುವ ಚಾನ್ಸ್ ಸಿಕ್ಕಿದೆ.
Advertisement
ರಾಜಮೌಳಿ ನಿರ್ದೇಶನದ RRR ಸಿನಿಮಾ ಮೂಲಕ ಇಂಡಿಯನ್ ಸಿನಿಮಾಗಳ ಕಡೆ ತಿರುಗಿ ನೋಡುವ ಹಾಗೇ ಆಯಿತು. ಈ ಸಿನಿಮಾದ ‘ನಾಟು ನಾಟು’ ಗೀತೆಗೆ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ (Oscar) ಪ್ರಶಸ್ತಿ ಸಿಕ್ಕಿದ್ದು ಗೊತ್ತೇಯಿದೆ. ಇದೀಗ ಆಸ್ಕರ್ ಟೀಮ್, RRR ತಂಡದ ಸದಸ್ಯರಿಗೆ ಮತ್ತೊಂದು ಗೌರವ ಲಭಿಸಿದೆ. ತಂಡದ ನಾಲ್ವರಿಗೆ ಆಸ್ಕರ್ ಜ್ಯೂರಿ ಸದಸ್ಯರಾಗುವ ಅವಕಾಶ ಸಿಕ್ಕಿದೆ. ಅಕಾಡಿಮೆ ಈ ಬಾರಿ ಹೊಸದಾಗಿ ಸೇರ್ಪಡೆಯಾದ ಸದಸ್ಯರ ಪಟ್ಟಿ ರಿಲೀಸ್ ಮಾಡಿದೆ. ಅದರಲ್ಲಿ ರಾಮ್ ಚರಣ್ (Ramcharan), ಜ್ಯೂ.ಎನ್‌ಟಿಆರ್ (Jr.ntr), ಕೀರವಾಣಿ ಅವರಿಗೆ ಆಸ್ಕರ್ ವಿಜೇತರ ಆಯ್ಕೆಯಲ್ಲಿ ಮತ ಚಲಾಯಿಸುವ ಅವಕಾಶ ಸಿಕ್ಕಿದೆ. ಇದನ್ನೂ ಓದಿ:‘ಎಮರ್ಜೆನ್ಸಿ’ ನಂತರದ ಸಿನಿಮಾ ಸುಳಿವು ಕೊಟ್ಟ ಕಂಗನಾ ರಣಾವತ್
Advertisement
Advertisement
ಈ ವರ್ಷ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಬಹಳ ಅದ್ಧೂರಿಯಾಗಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. 95ನೇ ಅಕಾಡೆಮಿ ಅವಾರ್ಡ್ಸ್ ವೇದಿಕೆಯಲ್ಲಿ ಆರ್ ಸಿನಿಮಾ ಆರ್ಭಟ ಜೋರಾಗಿತ್ತು. ಚಿತ್ರದ ‘ನಾಟು ನಾಟು’ ಸಾಂಗ್ ಸ್ಪೆಷಲ್ ಡ್ಯಾನ್ಸ್ ಪರ್ಫಾರ್ಮನ್ಸ್ ಇತ್ತು. ಆಸ್ಕರ್ ಅಂಗಳದಲ್ಲಿ ಇತ್ತೀಚಿಗಷ್ಟೇ ಆಸ್ಕರ್ ಗೆದ್ದು ಬಿಗಿದ್ದಲ್ಲದೇ ಈಗ ಆಸ್ಕರ್ ಜ್ಯೂರಿ ಮೆಂಬರ್ಸ್ ಆಗುವ ಅವಕಾಶವನ್ನು ಈ ಸಿನಿಮಾ ತಂದುಕೊಟ್ಟಿದೆ. ಈ ಬಗ್ಗೆ ಇದೀಗ ಅಕಾಡೆಮಿ ಪಟ್ಟಿ ರಿಲೀಸ್ ಮಾಡಿ ಟಾಲಿವುಡ್‌ಗೆ ಸಿಹಿಸುದ್ದಿ ಕೊಟ್ಟಿದೆ.
Advertisement
ರಾಮ್‌ಚರಣ್, ಜ್ಯೂ.ಎನ್‌ಟಿಆರ್, ಮಣಿರತ್ನಂ, ಕರಣ್ ಜೋಹರ್, ಚೈತನ್ಯಾ ತಮಹಾನ್, ಷಾನೆಕ್ ಸೇನ್, ಎಂ.ಎಂ ಕೀರವಾಣಿ, ಚಂದ್ರಬೋಸ್, ಸಿದ್ದಾರ್ಥ್ ಕಪೂರ್, ಸಾಬು ಸಿರಿಲ್, ಸೆಂಥಿಲ್ ಸೇರಿದಂತೆ ಹಲವರು ಆಸ್ಕರ್ ಜ್ಯೂರಿ ಮೆಂಬರ್ಸ್ ಪಟ್ಟಿಯಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಮುಂದಿನ ಆಸ್ಕರ್ ಪ್ರಶಸ್ತಿ ವಿಜೇತರ ಆಯ್ಕೆಯಲ್ಲಿ ಇವರಿಗೆಲ್ಲಾ ಮತ ಚಲಾಯಿಸುವ ಹಕ್ಕು ಸಿಗಲಿದೆ. ಅಕಾಡೆಮಿ ಸದಸ್ಯರಿಗೆ ಮಾತ್ರ ಈ ಅವಕಾಶ ಇರುತ್ತದೆ. ಮುಂದಿನ ವರ್ಷ ಮಾರ್ಚ್ 10ಕ್ಕೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇನ್ನೂ ರಾಜಮೌಳಿ ಅವರಿಗೆ ಮಾತ್ರ ಈ ಅವಕಾಶ ಸಿಗದೇ ಇರೋದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.