ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshit Shetty) ಕಳೆದ ವರ್ಷ ‘777 ಚಾರ್ಲಿ’ ಮೂಲಕ ಪ್ಯಾನ್ ಇಂಡಿಯಾ ಸದ್ದು ಮಾಡಿದ್ರು. ಈಗ ‘ಸಪ್ತಸಾಗರದಾಚೆ ಎಲ್ಲೋ’ (Saptasagaradacche Yello) ಸಿನಿಮಾ ಸಕ್ಸಸ್ ಕಂಡಿದೆ. ಕನ್ನಡದಲ್ಲಿ ಯಶಸ್ಸು ಕಂಡ ಬೆನ್ನಲ್ಲೇ ತೆಲುಗು ವರ್ಷನ್‌ನಲ್ಲೂ ಮನು-ಪ್ರಿಯಾ ಕಥೆ ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ರಕ್ಷಿತ್ ಬ್ಯುಸಿಯಾಗಿದ್ದಾರೆ. ಈ ವೇಳೆ, ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ರಕ್ಷಿತ್ ಈಗಲೂ ಸಂಪರ್ಕದಲ್ಲಿದ್ದಾರಾ? ರಶ್ಮಿಕಾ ಬೆಳವಣಿಗೆ ಅವರ ಅಭಿಪ್ರಾಯವೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ರಕ್ಷಿತ್ ಶೆಟ್ಟಿ ಈಗಲೂ ರಶ್ಮಿಕಾ ಅವರೊಟ್ಟಿಗೆ ಸಂಪರ್ಕದಲ್ಲಿದ್ದಾರಾ? ಎಂಬ ಪ್ರಶ್ನೆಯನ್ನು ಯೂಟ್ಯೂಬರ್ ಒಬ್ಬರು ಕೇಳಿದ್ದಾರೆ. ಪ್ರಶ್ನೆಗೆ ಉತ್ತರಿಸಿದ ನಟ ರಕ್ಷಿತ್ ಶೆಟ್ಟಿ, ಹೌದು, ನಾವು ಸಂಪರ್ಕದಲ್ಲಿದ್ದೇವೆ. ಆಕೆಗೆ ಸದಾ ದೊಡ್ಡ ಕನಸುಗಳಿದ್ದವು, ಆ ಕನಸುಗಳನ್ನು ಈಗ ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. ಅವರ ಸಾಧನೆಗೆ ಭೇಷ್ ಎನ್ನಲೇಬೇಕು, ಆಕೆಯ ಸಕ್ಸಸ್ ಬಗ್ಗೆ ಖುಷಿಯಿದೆ ಎಂದಿದ್ದಾರೆ. ಈ ಹಿಂದೆಯೂ ರಶ್ಮಿಕಾ ಬಗ್ಗೆ ಪ್ರಶ್ನೆ ಎದುರಾದಾಗೆಲ್ಲ ರಕ್ಷಿತ್ ಶೆಟ್ಟಿ ಇದೇ ಘನತೆಯಿಂದಲೇ ಉತ್ತರ ನೀಡಿದ್ದಾರೆ.
‘ಸಪ್ತ ಸಾಗರಾಲು ದಾಟಿ’ ಇಂದು (ಸೆ.22) ರಿಲೀಸ್ ಆಗಿದೆ. ರಕ್ಷಿತ್ ಶೆಟ್ಟಿ- ರುಕ್ಮಿಣಿ ವಸಂತ್ ಕಾಂಬೋ ಟಾಲಿವುಡ್‌ನಲ್ಲೂ (Tollywood) ಮೋಡಿ ಮಾಡುತ್ತಾ? ಮನು- ಪ್ರಿಯಾ ಲವ್ ಸ್ಟೋರಿಗೆ ತೆಲುಗಿನ ಪ್ರೇಕ್ಷಕರು ಫಿದಾ ಆಗ್ತಾರಾ ಕಾಯಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


