ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಒಂದು ಮಹತ್ವದ ಕಾರ್ಯ ಮಾಡಲು ಮುಂದಾಗಿದ್ದಾರೆ. ಇದರ ಮೊದಲ ಹೆಜ್ಜೆ ಎಂಬಂತೆ ಚೆನ್ನೈ ಬಳಿಯ ಪ್ರಮುಖ ಜಿಲ್ಲೆಯೊಂದರಲ್ಲಿ ಬಹುದೊಡ್ಡ ಜಾಗ ಖರೀದಿಸಿದ್ದಾರೆ. ತಲೈವಾ ನಡೆಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.
ಹೆಸರು ಹಣ ಎಷ್ಟೇ ಇದ್ರೂ ಸರಳತೆಗೆ ಹೆಸರುವಾಸಿ ರಜನಿಕಾಂತ್. ಆಗಲೂ ಈಗಲೂ ಸೂಪರ್ ಸ್ಟಾರ್. ಕಂಡಕ್ಟರ್ ಆಗಿದ್ದವರು ಈಗ ಕೋಟ್ಯಾಧೀಶ. ಇದೇ ರಜನಿ ತಮಿಳಿಗರ ಆಸ್ತಿ. ಸದಾ ರಜನಿಕಾಂತ್‌ಗೆ ಏನಾದ್ರೊಂದು ಮಹತ್ವದ ಕಾಯಕ ಮಾಡೋ ಹಂಬಲ. ತಮಿಳುನಾಡಿನ ಚೆಂಗಲ್‌ಪೇಟ್ ಜಿಲ್ಲೆಯ ತಿರುಪರೂರ್ ರಿಜಿಸ್ಟರ್ ಕಚೇರಿಗೆ ಆಗಮಿಸಿದ್ದಾರೆ. ಯಾಕಂದ್ರೆ ಅದೇ ವ್ಯಾಪ್ತಿಗೆ ಬರೋ ಜಾಗದಲ್ಲಿ ಭರ್ತಿ 12 ಎಕರೆ ಭೂಮಿ ಖರೀದಿಸಿದ್ದಾರೆ ತಲೈವಾ. ಇದನ್ನೂ ಓದಿ:ಹೊಸ ಕಾರು ಖರೀದಿಸಿ ಕಂಡ ಕನಸನ್ನು ಈಡೇರಿಸಿಕೊಂಡ ತುಕಾಲಿ
- Advertisement3
- Advertisement
ಸಿನಿಮಾ ತಾರೆಗಳು ಜಾಗ ಖರೀದಿಸೋದು ಫಾರ್ಮ್ ಹೌಸ್ ನಿರ್ಮಿಸಿಕೊಳ್ಳೋದು ಸಾಮಾನ್ಯ. ಆದರೆ ರಜನಿ ಯಾವ ಉದ್ದೇಶಕ್ಕಾಗಿ ಭೂಮಿ ಖರೀದಿಸಿದ್ದಾರೆ ಅಂತ ಕೇಳಿದ್ರೆ ಆಶ್ಚರ್ಯ ಪಡ್ತೀರಿ. 12 ಎಕರೆ ಜಾಗದಲ್ಲಿ ತಲೈವಾ ಆಸ್ಪತ್ರೆ ನಿರ್ಮಿಸಲಿದ್ದಾರಂತೆ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅಲ್ಲಿಯವರು ಚೆನ್ನೈಗೆ ಬರಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಆ ಜಾಗದಲ್ಲಿ ತಲೈವಾ ಆಸ್ಪತ್ರೆ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ.
ಇದೇನು ಮೊದಲ ಬಾರಿ ಏನೇಲ್ಲ. ಸಿನಿಮಾ ಜೊತೆಗೆ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಆಗಾಗ ರಜನಿಕಾಂತ್ ಅಭಿಮಾನಿಗಳ ಮನಗೆಲ್ಲುತ್ತಾರೆ.