ಚಿತ್ರೀಕರಣಕ್ಕೆ ಬ್ರೇಕ್‌ – ಅಮೆರಿಕದಲ್ಲಿ ಪ್ರಭಾಸ್‌ಗೆ ಶಸ್ತ್ರಚಿಕಿತ್ಸೆ

Public TV
1 Min Read
prabhas 1 1

ಟಾಲಿವುಡ್ ಬಾಹುಬಲಿ (Bahubali) ಹೀರೋ ಪ್ರಭಾಸ್ (Prabhas) ಅಭಿಮಾನಿಗಳಿಗೆ (Fans) ಬ್ಯಾಡ್ ನ್ಯೂಸ್ ಸಿಕ್ಕಿದೆ. ಸಿನಿಮಾದ ಚಿತ್ರೀಕರಣಕ್ಕೆ ಲಾಂಗ್ ಬ್ರೇಕ್ ಕೊಟ್ಟು, ಅಮೆರಿಕದಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಪ್ರಭಾಸ್ ಒಳಗಾಗಲಿದ್ದಾರೆ.

Prabhas 2

ಪ್ರಭಾಸ್ (Prabhas) ಮುಂಬರುವ ಸಿನಿಮಾಗಾಗಿಯೇ ಕಾಯುತ್ತಿದ್ದ ಫ್ಯಾನ್ಸ್‌ಗೆ ಈಗ ನಿರಾಸೆ ಆಗುವಂತಹ ವಿಚಾರ ಎದುರಾಗಿದೆ. ಆದಿಪುರುಷ್ ಸಿನಿಮಾ ರಿಲೀಸ್ ಬಳಿಕ, ‘ಸಲಾರ್’ (Salaar) ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ‘ಕಲ್ಕಿ 2898’ ಚಿತ್ರದ ಚಿತ್ರೀಕರಣವನ್ನು ಬಹುಮಟ್ಟಿಗೆ ಮುಗಿಸಿರುವ ಪ್ರಭಾಸ್ ಈ ವರ್ಷಾಂತ್ಯಕ್ಕೆ ಚಿತ್ರೀಕರಣದಿಂದ ದೊಡ್ಡ ಬ್ರೇಕ್ ಪಡೆಯಲು ಮುಂದಾಗಿದ್ದಾರೆ. ಪ್ರಭಾಸ್ ಆರೋಗ್ಯದಲ್ಲಿ ಆಗಾಗ ಏರುಪೇರು ಆಗ್ತಿದೆ. ಹಾಗಾಗಿ ಅವರು ಬ್ರೇಕ್ ಪಡೆಯಲು ನಿರ್ಧರಿಸಿದ್ದಾರೆ.

861211 prabhas 082219

ಸತತ ಶೂಟಿಂಗ್, ವ್ಯಾಯಾಮ ಇನ್ನಿತರೆಗಳಿಂದಾಗಿ ಪ್ರಭಾಸ್‌ಗೆ ಮೊಣಕಾಲು ನೋವು ಶುರುವಾಗಿದ್ದು, ವೈದ್ಯರ ಸಲಹೆ ಮೇರೆಗೆ ಮೊಣಕಾಲಿನ ಆಪರೇಷನ್‌ಗೆ ಒಳಗಾಗಲಿದ್ದಾರೆ. ಡಿಸೆಂಬರ್ ವೇಳೆಗೆ ‘ಕಲ್ಕಿ 2898’ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿಸಲಿರುವ ಪ್ರಭಾಸ್ ಆ ಬಳಿಕ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್ ಪ್ರಖ್ಯಾತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಕನಿಷ್ಟ ಒಂದು ವರ್ಷ ಸಿನಿಮಾಗಳಿಂದ ಪ್ರಭಾಸ್ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ನಟಿ ಸಮಂತಾರಂತೆ ಆರೋಗ್ಯಕ್ಕಾಗಿ ಪ್ರಭಾಸ್‌ ಕೂಡ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಈಗ ಸದ್ದು ಮಾಡ್ತಿದೆ. ಇದನ್ನೂ ಓದಿ:ಸಮುದಾಯವೊಂದನ್ನು ನಿಂದಿಸಿದ್ದಕ್ಕೆ ಉಪೇಂದ್ರ ಮೇಲೆ ಎಫ್‌ಐಆರ್ ದಾಖಲು

ಮಾರುತಿ ನಿರ್ದೇಶನದ ಹಾರರ್ ಫ್ಯಾಂಟಸಿ ಸಿನಿಮಾದಲ್ಲಿ ಪ್ರಭಾಸ್ ನಟಿಸಬೇಕಿತ್ತು. ಅದಾದ ಬಳಿಕ ‘ಅರ್ಜುನ್ ರೆಡ್ಡಿ’ (Arjun Reddy) ಸಿನಿಮಾ ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಅದಾದ ಬಳಿಕ ಬಾಲಿವುಡ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಈ ಮೂರೂ ಸಿನಿಮಾಗಳು ತಡವಾಗಲಿವೆ.

Share This Article