‘ಬಾಹುಬಲಿ’ ಪ್ರಭಾಸ್- ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಗುಡ್‌ ನ್ಯೂಸ್

Public TV
2 Min Read
anushka shetty and prabhas 1

ತೆಲುಗಿನ ಮಿರ್ಚಿ, ಬಾಹುಬಲಿ, ಬಾಹುಬಲಿ 2 (Bahubali2) ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದ ಜೋಡಿ ಪ್ರಭಾಸ್- ಅನುಷ್ಕಾ ಶೆಟ್ಟಿ (Anushka Shetty) ಇದೀಗ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದಾರೆ. ಬಾಹುಬಲಿ 2 ನಂತರ ಮತ್ತೆ ಈ ಜೋಡಿ ತೆರೆಮೇಲೆ ರೊಮ್ಯಾನ್ಸ್ ಮಾಡೋಕೆ ರೆಡಿಯಾಗಿದ್ದಾರೆ.

anushka shetty and prabhas 3

ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಬಾಹುಬಲಿ’ ಸರಣಿ ಚಿತ್ರ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಆದರೆ, ಇದಾದ ಬಳಿಕ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆದರು. ಹೆಚ್ಚು ಚಿತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿಲ್ಲ. ಸದ್ಯ ಅನುಷ್ಕಾ ಶೆಟ್ಟಿ ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಮೂಲಕ ಅನುಷ್ಕಾ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

anushka shetty 1 1

ಇತ್ತ ಪ್ರಭಾಸ್ (Prabhas) ಸಲಾರ್, ಪ್ರಾಜೆಕ್ಟ್ ಕೆ, ಕಲ್ಕಿ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಇದೀಗ ಟಾಲಿವುಡ್‌ನ (Tollywood) ಬಿಗ್ ಬ್ರೇಕಿಂಗ್ ನ್ಯೂಸ್ ಎನಂದರೆ ಪ್ರಭಾಸ್- ಅನುಷ್ಕಾ ಶೆಟ್ಟಿ ಮತ್ತೆ ಒಟ್ಟಿಗೆ ನಟಿಸು ಸೂಚನೆ ಸಿಕ್ಕಿದೆ. ಒಂದು ವಿಭಿನ್ನ ಕಥೆಗೆ ಈ ಜೋಡಿ ಮತ್ತೆ ಜೊತೆಯಾಗುತ್ತಿದೆ. ಅದಕ್ಕೆ ‘ವಿಕ್ರಂ’ (Vikram) ಖ್ಯಾತಿಯ ಲೋಕೇಶ್ ಕನಗರಾಜ್ ನಿರ್ದೇಶನ ಮಾಡ್ತಿದ್ದಾರೆ. ಇದನ್ನೂ ಓದಿ:‘ಡಿಜೆ ಟಿಲ್ಲು’ ಹೀರೋ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

ಪ್ರಭಾಸ್ ಅವರು ತಮಿಳು ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬುದು ಸದ್ಯದ ಟಾಲಿವುಡ್‌ ಗಲ್ಲಿಯ ನ್ಯೂಸ್ ಈ ಸುದ್ದಿ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಸಿನಿಮಾ ಬಗ್ಗೆ ಸದ್ಯ ನಿರೀಕ್ಷೆ ಇದೀಗ ಡಬಲ್ ಆಗಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾದಿದ್ದಾರೆ. ಒಟ್ನಲ್ಲಿ ಬಾಹುಬಲಿ ಜೋಡಿಯ ಮಿರ್ಚಿ ಲವ್ ಸ್ಟೋರಿ ನೋಡೋಕೆ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಪ್ರಭಾಸ್‌-ಅನುಷ್ಕಾ ರಿಯಲ್‌ ಲೈಫ್‌ನಲ್ಲೂ ಲವ್‌ ಮಾಡ್ತಿದ್ದಾರೆ ಎನ್ನಲಾಗಿತ್ತು. ಬಳಿಕ ಈ ಸುದ್ದಿ ಟುಸ್‌ ಪಟಾಕಿ ಎಂದು ಹೇಳಲಾಯ್ತು.ಈಗ ಸಿನಿಮಾ ಅಪ್‌ಡೇಟ್‌ನಿಂದ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ.

Share This Article