ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ (Pawan Kalyan) ಅವರು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಅವರು ಮುಗಿಸಿಕೊಡಬೇಕಿದೆ. ಇದರ ನಡುವೆ ನಟನ ಪುತ್ರನ ಬಗ್ಗೆ ಇಂಟ್ರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಪವನ್ ಪುತ್ರ ಅಕಿರಾ ನಂದ (Akira Nanda) ಚಿತ್ರರಂಗಕ್ಕೆ ಬರಲಿದ್ದಾರೆ ಎಂಬ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.
ರಾಜಕೀಯಕ್ಕೆ ಬರುವ ಮುನ್ನವೇ ಪವನ್ ಕಲ್ಯಾಣ್ ಅವರು ಓಜಿ, ಉಸ್ತಾದ್ ಭಗತ್ ಸಿಂಗ್, ಹರಿಹರ ವೀರಮಲ್ಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅದರಲ್ಲಿ OG ಸಿನಿಮಾ ಮೇಲೆ ನಟನಿಗೆ ಭಾರೀ ನಿರೀಕ್ಷೆಯಿದೆ. ಹಾಗಾಗಿ ‘ಓಜಿ’ ಚಿತ್ರದಲ್ಲಿ ಪುತ್ರ ಅಕಿರಾ ನಂದ ಕೂಡ ನಟಿಸಿದ್ದಾರೆ ಎನ್ನಲಾಗಿದೆ. ಪವನ್ ಅವರ ಯೌವ್ವನದ ಪಾತ್ರದಲ್ಲಿ ಅಕಿರಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅಕಿರಾ ಭಾಗದ ಚಿತ್ರೀಕರಣ ಕೂಡ ನಡೆದಿದೆ ಎನ್ನಲಾಗಿದೆ. ನಟನ ಕಡೆಯಿಂದ ಅಫಿಷಿಯಲ್ ಅನೌನ್ಸ್‌ಮೆಂಟ್ ಬರುವವರೆಗೂ ಕಾಯಬೇಕಿದೆ.
OG ಸಿನಿಮಾದಿಂದ ಅಕಿರಾ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ಬಳಿಕ ಮುಂದಿನ ದಿನಗಳಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದು ತೆರೆಮರೆಯಲ್ಲಿ ಸಕಲ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ಕನ್ನಡದ ನಟಿಗೆ ಬಿಗ್ ಚಾನ್ಸ್- ತೆಲುಗಿನತ್ತ ಶರಣ್ಯ ಶೆಟ್ಟಿ
ಇನ್ನೂ ಅಕಿರಾ ನಂದ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಬಾಲಯ್ಯ ಅವರ ಟಾಕ್ ಶೋನಲ್ಲಿ ರಾಮ್ ಚರಣ್ ಕೂಡ ಸುಳಿವು ನೀಡಿದ್ದರು. ಈಗ ಈ ವಿಚಾರ ಮತ್ತೆ ಚಾಲ್ತಿಗೆ ಬಂದಿದೆ.