ಬಾಲಿವುಡ್ (Bollywood) ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರು ಸಿನಿಮಾಗಿಂತ ತಮ್ಮ ವೈಯಕ್ತಿಕ ವಿಚಾರ ಸಾಕಷ್ಟು ಸುದ್ದಿಯಾಗ್ತಿದ್ದಾರೆ. ನವಾಜುದ್ದೀನ್ ಅವರ ಮನೆ ಕಲಹ ಬೀದಿ ರಂಪಾಟವಾಗಿದೆ. ನಟನ ವಿರುದ್ಧ ಪತ್ನಿ ಕಿರುಕುಳ ಕೇಸ್ ದಾಖಲಿಸಿದ್ದರು. ಈ ಬೆನ್ನಲ್ಲೇ ನವಾಜುದ್ದೀನ್ ಅವರು ಶೆಹನಾಜ್‌ಗೆ ಸಂದರ್ಶನವೊಂದರಲ್ಲಿ ಪ್ರೀತಿ ಪಾಠ ಮಾಡಿದ್ದಾರೆ. ನನ್ನ ಪ್ರೀತಿ ಶುದ್ಧ ಎಂದು ನಟ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ
ಇತ್ತೀಚಿಗೆ ನವಾಜುದ್ದೀನ್ ಅವರು ಶೆಹನಾಜ್ ಗಿಲ್ (Shehnaaz Gill Show) ಅವರ ಟಾಕ್ ಶೋನಲ್ಲಿ ಭಾಗವಹಿಸಿದ್ದಾರೆ. ಶೆಹನಾಜ್ ಜೊತೆ ಸಿನಿಮಾ ಜರ್ನಿ, ವೈಯಕ್ತಿಕ ವಿಚಾರ, ಪ್ರೀತಿ, ಸಿನಿಮಾ ಸೋಲು-ಗೆಲುವಿನ ಬಗ್ಗೆ ಹೀಗೆ ಸಾಕಷ್ಟು ವಿಚಾರಗಳನ್ನ ಶೇರ್ ಮಾಡಿದ್ದಾರೆ. ಈ ಕುರಿತ ಪ್ರೋಮೋ ಕೂಡ ನಟಿಯ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸದ್ದು ಮಾಡ್ತಿದೆ. ಪ್ರೀತಿಯ (Love) ಬಗ್ಗೆ ನಟ ಮಾತನಾಡಿದ್ದಾರೆ.
View this post on Instagram
ನಾನು ಫ್ರಾಡ್ ಇರಬಹುದು. ನಾನು ಅನೇಕ ಬಾರಿ ಸುಳ್ಳುಗಳನ್ನು ಹೇಳಿರಬಹುದು. ಆದರೆ, ನನ್ನ ಪ್ರೀತಿ ಯಾವಾಗಲೂ ಶುದ್ಧ. ಕಣ್ಣುಗಳ ಮಧ್ಯೆ ಅರಳೋದು ಪ್ರೀತಿ ಎಂದಿದ್ದಾರೆ ನವಾಜುದ್ದೀನ್. ಸಾಕಷ್ಟು ದೂರ ಸಾಗಬೇಕು ಎಂದರೆ ಗಿಮಿಕ್ ಮಾಡಬಾರದು. ಬದಲಿಗೆ ಕಷ್ಟಪಡಬೇಕು. ನಾನು ಸ್ವಲ್ಪ ಗಿಮಿಕ್ ಮಾಡಿದ್ದೇನೆ ಎಂದು ನವಾಜುದ್ದೀನ್ ಒಪ್ಪಿಕೊಂಡಿದ್ದಾರೆ. ನೀವು ಜೀವನದಲ್ಲಿ ಏನಾಗಬೇಕು ಎಂದುಕೊಂಡಿದ್ದೀರಿ ಎಂದು ನವಾಜುದ್ದೀನ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿರುವ ಶೆಹನಾಜ್, ಗಾಯನ, ನಟನೆ, ಫ್ಯಾಷನ್. ಇದೆಲ್ಲವನ್ನೂ ಮಿಕ್ಸ್ ಮಾಡಿದ್ದೇನೆ ಎಂದಿದ್ದಾರೆ.
ಸದ್ಯ ಈ ಪ್ರೋಮೋ ವೈರಲ್ ಸಖತ್ ಸದ್ದು ಮಾಡ್ತಿದೆ. ಅನೇಕರು ಪೂರ್ತಿ ಎಪಿಸೋಡ್ ನೋಡಲು ಕಾಯುತ್ತಿದ್ದಾರೆ. ಶೆಹನಾಜ್ ಅವರು ‘ಬಿಗ್ ಬಾಸ್’ ಮೂಲಕ ಫೇಮಸ್ ಆದವರು. ಇತ್ತೀಚೆಗೆ ತೆರೆಗೆ ಬಂದ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಅವರು ನಟಿಸಿದ್ದರು.