ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಮಗೆ ಮೊದಲು ಕ್ರಶ್ ಆದ ಹುಡುಗಿಯ ಬಗ್ಗೆ ಹೇಳಿದ್ದಾರೆ.
ಅಭಿಮಾನಿಗಳಿಗೆ ನಿಮಗೆ ಯಾವ ನಟರ ಮೇಲೆ ಕ್ರಶ್ ಆಗಿದೆ ಎಂದರೆ ಸಾಕು ತುಂಬಾ ಜನರು ಸುದೀಪ್ ಅಂತ ಹೇಳುತ್ತಾರೆ. ಈಗ ಸುದೀಪ್ ಅವರಿಗೆ ಸ್ಯಾಂಡಲ್ ವುಡ್ ನಟಿಯೊಬ್ಬರ ಮೇಲೆ ಕ್ರಶ್ ಆಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪತ್ನಿಗೆ ತಿಳಿಸಬೇಡಿ ಎಂದು ಹೇಳಿ ಮೊದಲ ಕ್ರಶ್ ಹೆಸರು ರಿವೀಲ್ ಮಾಡಿದ್ರು ಧೋನಿ
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ನಂ.1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಸುದೀಪ್ ತಮ್ಮ ಕ್ರಶ್ ಬಗ್ಗೆ ಹೇಳಿದ್ದಾರೆ. ಈ ಕಾರ್ಯಕ್ರಮವನ್ನು ನಟ ಶಿವರಾಜ್ ಕುಮಾರ್ ನಿರೂಪಣೆ ಮಾಡುತ್ತಾರೆ. ಈ ವಾರ ಅತಿಥಿಗಳಾಗಿ ನಿರ್ದೇಶಕ ಮತ್ತು ನಟ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಆಗಮಿಸಿದ್ದರು.
ಕಾರ್ಯಕ್ರಮದ ಮೊದಲ ಸೆಗ್ನೆಂಟ್ ಅಂದರೆ (ಸತ್ಯನಾ… ಧೈರ್ಯನಾ…) ಎಂಬ ಟಾಸ್ಕ್ ನಲ್ಲಿ ಸುದೀಪ್ ಸತ್ಯ ಹೇಳುವ ಟಾಸ್ಕ್ ಆಯ್ಕೆ ಮಾಡಿಕೊಂಡಿದ್ದರು. ಆಗ ಶಿವಣ್ಣ ಕನ್ನಡ ಚಿತ್ರರಂಗದಲ್ಲಿರುವ ಯಾವ ನಟಿಯ ಮೇಲೆ ನಿಮಗೆ ಕ್ರಶ್ ಆಗಿತ್ತು ಎಂದು ಪ್ರಶ್ನೇ ಕೇಳಿದ್ದಾರೆ. ಈ ವೇಳೆ ಸುದೀಪ್ ಕನಸಿನ ರಾಣಿ ನಟಿ ಮಾಲಾಶ್ರೀ ಮೇಲೆ ಕ್ರಶ್ ಆಗಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಸುದೀಪ್ ಮಾಲಾಶ್ರೀ ಅವರ ಸಿನಿಮಾ ಬಿಡುಗಡೆಯಾದಾಗ ಅವರನ್ನೇ ನೋಡಲು ಹೋಗುತ್ತಿದ್ದೆ ಅಂತ ಹೇಳಿದ್ದಾರೆ. ಸದ್ಯಕ್ಕೆ ಸುದೀಪ್ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ.