ನಟ ಕಮಲ್ ಹಾಸನ್‍ಗೆ ಕೊರೊನಾ ಸೋಂಕು ದೃಢ

Public TV
1 Min Read
xkamal hassan 14 1473871077.jpg.pagespeed.ic .FYskuwMvHB

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಒಬ್ಬರಾದ ಕಮಲ್ ಹಾಸನ್‍ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಈ ಬಗ್ಗೆ ಸ್ವತಃ ನಟ ತಮ್ಮ ಟ್ಟಿಟ್ಟರ್ ಮೂಲಕ ತಿಳಿಸಿದ್ದಾರೆ. ಕೊರೊನಾ ಸೋಂಕು ಇರುವುದು ದೃಢಪಟ್ಟಿರುವುದಾಗಿ ಹೇಳಿರುವ ಅವರು ಜಾಗೃತರಾಗಿರುವಂತೆ ಕರೆ ನೀಡಿದ್ದಾರೆ.

ಟ್ವಿಟ್ಟರ್‍ನಲ್ಲಿ ಏನಿದೆ?: ಅಮೆರಿಕ ಪ್ರವಾಸದಿಂದ ಹಿಂದಿರುಗಿದ ಬಳಿಕ ನನಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದು, ಟೆಸ್ಟ್ ಮಾಡಲಾಗಿತ್ತು. ಈ ವೇಳೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಕೊರೊನಾ ಸಾಂಕ್ರಾಮಿಕ ರೋಗ ಇನ್ನೂ ತೊಲಗಿಲ್ಲವೆಂದು ಎಲ್ಲರೂ ಅರ್ಥ ಮಾಡಿಕೊಳ್ಳೊಣ ಮತ್ತು ಜವಾಬ್ದಾರಿಯುತವಾಗಿ ವರ್ತಿಸೋಣ. ಎಲ್ಲರೂ ಸುರಕ್ಷಿತವಾಗಿರಿ ಎಂದು ಬರೆದುಕೊಂಡಿದ್ದಾರೆ.

CORONA-VIRUS.

ತಮ್ಮ ಫ್ಯಾಷನ್ ಬ್ರ್ಯಾಂಡ್ ಹೌಸ್ ಆಫ್ ಖದ್ದರ್‍ನ್ನು ಪ್ರಾರಂಭಿಸಲು 67 ವರ್ಷದ ನಟ ಕಮಲ್ ಹಾಸನ್ ಯುಎಸ್‍ಗೆ ತೆರಳಿದ್ದರು. ಈ ಕಾರ್ಯಕ್ರಮ ಕಳೆದ ವಾರ ಚಿಕಾಗೋದಲ್ಲಿ ನಡೆದಿದೆ. ಭಾರತಕ್ಕೆ ಮರಳಿದ ನಂತರ ವಾರಂತ್ಯದ ಸಂಚಿಕೆಯನ್ನು ನಡೆಸಲು ತಮಿಳಿನ ಬಿಗ್‍ಬಾಸ್ ಸೆಟ್‍ಗೆ ಹೋಗಿದ್ದರು. ವಾರಾಂತ್ಯದ ಸಂಚಿಕೆಯಲ್ಲಿ, ಕಮಲ್ ಹಾಸನ್ ಮನೆಯಲ್ಲಿ ಸ್ಪರ್ಧಿಗಳೊಂದಿಗೆ ಹಾಗೂ ಸ್ಟುಡಿಯೋದಲ್ಲಿ ಪ್ರೇಕ್ಷಕರೊಂದಿಗೆ ಬಹಳ ಉತ್ಸಾಹದಿಂದ ತೊಡಗಿಕೊಂಡಿದ್ದರು. ಇದನ್ನೂ ಓದಿ: ಕೊಹ್ಲಿ ಪುತ್ರಿಯನ್ನು ರೇಪ್ ಮಾಡ್ತಿನಿ ಅಂದಿದ್ದ ಐಐಟಿ ಪದವೀಧರನಿಗೆ ಜಾಮೀನು

KAMAL HASSAN

ಕಮಲ್ ಅವರಿಗೆ ಇದೇ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸದ್ಯ ನಟ ತಮ್ಮ ಮುಂಬರುವ ವಿಕ್ರಮ್ ಚಿತ್ರದಲ್ಲಿ ನಿರತರಾಗಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರದಲ್ಲಿ ಕಮಲ್ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಹಾಗೂ ಫಹಾದ್ ಫಾಸಿಲ್ ಕೂಡಾ ನಟಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *