ಬೆಂಗಳೂರು: ಹಿರಿಯ ನಟ ಜೈ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಮೊದಲ ಪತ್ನಿ ಹಾಗೂ ಮಗಳನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ.
ಬುಧವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಯಾರಿಗಾದರೂ ಕ್ಷಮೆ ಕೇಳಬೇಕೆಂದರೆ ವೇದಿಕೆ ಮೇಲೆ ನೀವು ಕೇಳಬಹುದು ಎಂದು ಹೇಳಿದ್ದರು. ಈ ವೇಳೆ ಜೈ ಜಗದೀಶ್ ಅವರು ತಮ್ಮ ಮೊದಲ ಪತ್ನಿ ಹಾಗೂ ಮಗಳನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ.
Advertisement
ವೇದಿಕೆಯಲ್ಲಿ ಮಾತನಾಡಿದ ಜೈ ಜಗದೀಶ್ ಅವರು, ನಾನು ನನ್ನ ತಂದೆ-ತಾಯಿ ಹಾಗೂ ಅಕ್ಕ-ತಂಗಿಯರಿಗೆ ಕ್ಷಮೆ ಕೇಳಬೇಕು. ನಾನು 1976ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟೆ. 1976ರಿಂದ ನಾನು ತುಂಬಾ ಯಶಸ್ಸನ್ನು ಕಂಡಿದೆ. ಆಗ ನನ್ನ ಬಳಿ ಹೆಚ್ಚು ಹಣ ಇತ್ತು. ಹಣ ಇತ್ತು ಎಂಬ ಅಹಂಕಾರ ಕೂಡ ಇತ್ತು. 1980ರಲ್ಲಿ ನನಗೆ ರೂಪ ಎಂಬವರ ಪರಿಚಯವಾಯಿತು. ಬಳಿಕ ನಾವಿಬ್ಬರು ಪ್ರೀತಿಸಲು ಆರಂಭಿಸಿದೆವು. ನಮ್ಮ ಪ್ರೀತಿ ಮುರಿಯುತ್ತಾರೆ ಎಂದು ಈ ವಿಷಯವನ್ನು ಯಾರಿಗೂ ಹೇಳಲಿಲ್ಲ ಎಂದು ಹೇಳಿದರು.
Advertisement
Advertisement
ರೂಪ ಅವರ ಮಾವ ನಮ್ಮ ಪ್ರೀತಿ ಮುರಿಯಲು ಪ್ರಯತ್ನಿಸುತ್ತಿದ್ದರು. ಆಗ ವಿಷ್ಣುವರ್ಧನ್ ಸಹಾಯದಿಂದ ನಾವಿಬ್ಬರು ಓಡಿ ಹೋಗಿದ್ದೆವು. ಆಗ ನಾನು ಎರಡು ದಿನ ವಿಷ್ಣುವರ್ಧನ್ ಅವರ ಮನೆಯಲ್ಲಿದ್ದೆ. ವಿಷ್ಣುವರ್ಧನ್ ಸಮಾಧಿಯಿರುವ ಅಭಿಮಾನ್ ಸ್ಟುಡಿಯೋದಲ್ಲಿ ಒಂದು ದೇವಸ್ಥಾನವಿತ್ತು. ಆ ದೇವಸ್ಥಾನದಲ್ಲಿ ವಿಷ್ಣುವರ್ಧನ್ ಹಾಗೂ ಭಾರತಿ ಅವರು ನನ್ನ ಹಾಗೂ ರೂಪ ಮದುವೆ ಮಾಡಿಸಿದ್ದರು. ಬಳಿಕ 1982ರಲ್ಲಿ ನನಗೆ ಮಗಳು ಹುಟ್ಟಿದಳು. ಆಕೆಗೆ ಅರ್ಪಿತಾ ಹೆಸರನ್ನು ಇಟ್ಟೆವು ಎಂದು ನೆನಪಿಸಿಕೊಂಡರು.
Advertisement
ಎಲ್ಲವೂ ಸರಿ ಹೋಗುತ್ತಿತ್ತು. ಮದುವೆಯಾದ 6 ವರ್ಷಗಳ ನಂತರ ನನ್ನ ಹಾಗೂ ರೂಪ ನಡುವೆ ಭಿನ್ನಾಭಿಪ್ರಾಯ ಆಗಿ ಆಕೆ ನನ್ನನ್ನು ಬಿಟ್ಟು ಹೋದಳು. ಆಗ ನಾನು 8 ವರ್ಷಗಳ ಕಾಲ ಹೋಟೆಲಿನಲ್ಲಿ ವಾಸಿಸುತ್ತಿದ್ದೆ. ನನ್ನ ಮಗಳು ಬೆಳೆದಿದ್ದಳು. ನನ್ನ ಮಗಳಿಗೋಸ್ಕರ ನಾನು ರೂಪಾಗೆ ವಿಚ್ಛೇದನ ನೀಡಿರಲಿಲ್ಲ. ಆದರೆ ಒಂದು ದಿನ ರೂಪಾ ನನಗೆ ಡಿವೋರ್ಸ್ ಬೇಕು ಎಂದು ಕೇಳಿದ್ದಾಗ ನಾನು ಹೋಗಿ ವಿಚ್ಛೇದನ ಪತ್ರಕ್ಕೆ ಸಹಿ ಮಾಡಿದೆ. ಆಗ ಆಕೆ ನನ್ನ ಮಗಳನ್ನು ಕರೆದುಕೊಂಡು ಹೋದಳು ಎಂದು ಭಾವುಕರಾದರು.
ಹಲವು ವರ್ಷಗಳ ಬಳಿಕ ನಾನು ನನ್ನ ಮಗಳನ್ನು ಭೇಟಿ ಮಾಡಿದೆ. ಆಕೆಗೆ ಮದುವೆ ನಿಶ್ಚಯವಾಗಿತ್ತು. ಆಗ ನಾವು ಆಕೆಯ ಮದುವೆ ಮಾಡಿದ್ದೇವು. ಮಗಳು ಮದುವೆಯಾದ 7 ವರ್ಷ ಮಾತ್ರ ಆಕೆ ತನ್ನ ಪತಿ ಜೊತೆ ಖುಷಿಯಾಗಿದ್ದಳು. ದಂಪತಿಗೆ ಮಕ್ಕಳಿರಲಿಲ್ಲ. ಈ ಬಗ್ಗೆ ನಮ್ಮ ಮಗಳನ್ನು ಪ್ರಶ್ನಿಸಿದ್ದಾಗ ಆಕೆ ನನ್ನ ಪತಿ ಮಗು ಬೇಡ ಎಂದು ಹೇಳಿದ್ದನ್ನು ತಿಳಿಸಿದಳು. ಸ್ವಲ್ಪ ದಿನದ ಬಳಿಕ ಮಗಳ ಮದುವೆ ಕೂಡ ಮುರಿದು ಬಿತ್ತು ಎಂದು ಜೈ ಜಗದೀಶ್ ಕಣ್ಣೀರು ಹಾಕಿದರು.
ಜೀವನದಲ್ಲಿ ಅರ್ಪಿತಾಳಿಗೆ ಇಬ್ಬರು ದೊಡ್ಡ ಗಂಡಸರು ಅಂದರೆ ಪತಿ ಹಾಗೂ ತಂದೆ ಬೇಕಾಗಿತ್ತು. ಆದರೆ ಇಬ್ಬರು ಆಕೆಯನ್ನು ಬಿಟ್ಟು ಹೋಗಿದ್ದರು. ನನ್ನ ಹಾಗೂ ರೂಪಾಳ ಕಾರಣದಿಂದ ನಮ್ಮ ಮಗಳಿಗೆ ಈ ಸ್ಥಿತಿ ಬಂತು. ನನ್ನ ಮಗಳ ಸ್ಥಿತಿಯನ್ನು ನೋಡಿದ ನಾನು ಆಕೆಯ ಜೊತೆ ಹೆಚ್ಚು ಕಾಲ ಕಳೆಯುತ್ತೇನೆ. ಧೈರ್ಯ ಹೇಳುತ್ತೇನೆ. ಈಗಲೂ ನನ್ನ ಮಗಳು ರೂಪಾಳ ಜೊತೆ ಇರುತ್ತಾಳೆ. ನನಗೆ ಕೇವಲ ನನ್ನ ಮಗಳ ಖುಷಿ ಬೇಕು ಎಂದು ಜಗದೀಶ್ ಹೇಳುವ ಮೂಲಕ ತಮ್ಮ ಮೊದಲ ಪತ್ನಿ, ಮಗಳನ್ನು ನೆನಪಿಸಿಕೊಂಡರು.