ಶಿವಮೊಗ್ಗ: ಸಿನಿಮಾ ಅನ್ನುವುದು ಒಂದು ಕುಟುಂಬ, ನನಗೂ ಸಹ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆ ಇದೆ. ನಾನು ಅಶೋಕ್ ಕಶ್ಯಪ್ ಸೇರಿ ಸಿನಿಮಾ ನಿರ್ಮಾಣ ಮಾಡಬೇಕೆಂದುಕೊಂಡಿದ್ದೇವೆ ಎಂದು ಹಿರಿಯ ನಟ ದೊಡ್ಡಣ್ಣ ತಿಳಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಪ್ರತಿಕ್ರಿಯಿಸಿದ ಅವರು, ಸಿನಿಮಾ ನಿರ್ಮಾಣ ಕುರಿತು ಈಗಾಗಲೇ ಮಾತುಕತೆ ನಡೆಸುತ್ತಿದ್ದೇವೆ. ಸತ್ಯ ಘಟನೆ ಆಧಾರಿತ ಸಿನಿಮಾಗಳು ಯಶಸ್ಸು ಗಳಿಸುತ್ತಿವೆ. ಇದರಿಂದ ನೈಜ ಘಟನೆ ಆಧಾರಿತ ಸಿನಿಮಾ ಹಾಗೂ ಪುರಾಣ ಆಧಾರಿತ ಸಿನಿಮಾಗಳನ್ನು ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ನಾಯಕರಿಗೆ ಗತಿ ಇಲ್ಲ, ಅಭ್ಯರ್ಥಿಗಳಿಗಂತೂ ದಟ್ಟ ದಾರಿದ್ರ್ಯ- ಕಾಂಗ್ರೆಸ್ ವಿರುದ್ಧ ಹೆಚ್‍ಡಿಕೆ ಕಿಡಿ
ಇಂದು ಕನ್ನಡವನ್ನು ಉಳಿಸಬೇಕಿದೆ. ಮಕ್ಕಳು ಯಾವುದೇ ಮಾಧ್ಯಮದಲ್ಲಿ ಕಲಿಯಲಿ ಆದರೆ ಪೋಷಕರು ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಸಬೇಕು. ಕನ್ನಡ ನಮ್ಮ ತಾಯಿ ಭಾಷೆ, ತಾಯಿ ಭಾಷೆ ಮರೆತರೆ ತಾಯಿನ ಮರೆತ ಹಾಗೆ, ತಾಯಿನ ಮರೆತರೆ, ತಾಯಿ ನಾಡನ್ನು ಮರೆತ ಹಾಗೆ, ತಾಯಿ ನಾಡನ್ನು ಮರೆತರೆ ಸಂಸ್ಕೃತಿಯನ್ನು ಮರೆತ ಹಾಗೇ ಎಂದರು. ಇದನ್ನೂ ಓದಿ: ಮಗನ ತಲೆಯನ್ನು ನೆಲಕ್ಕೆ ಜಜ್ಜಿ ಕೊಂದ ತಂದೆಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ಕನ್ನಡ ಶಾಲೆಗಳು ಉಳಿಯಬೇಕು. ಪಂಪ, ರನ್ನ, ಜನ್ನರ ಸಾಹಿತ್ಯ ಓದಿದರೆ ಕನ್ನಡ ಉಳಿದಂತೆ ಆಗುತ್ತದೆ. ಕಾನ್ವೆಂಟ್ ಸಂಸ್ಕೃತಿ ಬಂದ ಮೇಲೆ ಮಕ್ಕಳು ಪೋಷಕರನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಿದ್ದಾರೆ ಎಂಬ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಗೋ ಕಳ್ಳರಿಗೆ ಸಹಾಯ ಮಾಡಿದ್ದ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ: ಆರಗ ಜ್ಞಾನೇಂದ್ರ
ಕನ್ನಡ ಚಿತ್ರರಂಗದಲ್ಲಿ ಪೋಷಕ ನಟ ಬಳಕೆ ಕಡಿಮೆ ಆಗುತ್ತಿರುವುದರಿಂದಲೇ ಸಿನಿಮಾಗಳು ಹೆಚ್ಚು ದಿನ ಓಡುತ್ತಿಲ್ಲ. ಚಿತ್ರದಲ್ಲಿ ಎಲ್ಲಾ ಸಂಬಂಧಗಳು ಇದ್ದಾಗ ಅದು ಅರ್ಥ ಪೂರ್ಣವಾಗುತ್ತದೆ. ಹರಿಕಥೆ ದಾಸನಿಗೂ ತಾಳಮೇಳ ಇರಬೇಕು. ಹಾಗೆಯೇ ನಾಯಕ ನಟ, ನಟಿಗೆ ಚಿತ್ರದಲ್ಲಿ ಅತ್ತೆ, ಮಾವ, ಚಿಕ್ಕಪ್ಪ ಹೀಗೆ ಎಲ್ಲಾ ಸಂಬಂಧಗಳು ಕಥೆಯಲ್ಲಿದ್ದಾಗ ಆ ಚಿತ್ರ ಯಶಸ್ಸು ಗಳಿಸುತ್ತದೆ ಎಂದರು.