ಕ್ಯಾನ್ಬೆರಾ: 6 ತಿಂಗಳ ಮಗನ ತಲೆಯನ್ನು ನೆಲಕ್ಕೆ ಜಜ್ಜಿಕೊಂದ ತಂದೆಗೆ ಆಸ್ಟ್ರೇಲಿಯಾದ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷದ ಏಪ್ರಿಲ್ 11ರಂದು ಪಿಜ್ಜಾ ಆರ್ಡರ್ ಮಾಡಿದ್ದ ತಂದೆ ಕೂಲ್‍ಡ್ರಿಂಕ್ಸ್ ಬರದೆ ಇರುವ ವಿಚಾರಕ್ಕೆ ಸಿಟ್ಟಿಗೆದ್ದು ಮಗನನ್ನು ಹೊಡೆದು ಕೊಂದಿದ್ದ. ಈ ವಿಚಾರವಾಗಿ ತಾಯಿ ಪೊಲೀಸರಲ್ಲಿ ದೂರು ನೀಡಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ 8.5 ವರ್ಷದ ಜೈಲು ಶಿಕ್ಷೆ ವಿಧಿಸಿದೆ.
Advertisement
ಈ ಪ್ರಕರಣದ ಹಿನ್ನಲೆ ಏನು: ಪ್ರಕರಣದ ಹಿನ್ನೆಲೆ ಏನು?: ವ್ಯಕ್ತಿಯೊರ್ವ ಪಿಜ್ಜಾವನ್ನು ಮತ್ತು ಅದರೊಂದಿಗೆ ಪಾನೀಯವನ್ನು ಆರ್ಡರ್ ಮಾಡಿದ್ದನು. ಆದರೆ ಪಿಜ್ಜಾ ವಿತರಕನು ಆರ್ಡರ್ ಮಾಡಿದ್ದನ್ನು ಬಿಟ್ಟು ಬೇರೆ ಪಿಜ್ಜಾವನ್ನು ಆತನಿಗೆ ನೀಡಿದ್ದು, ಅದರಲ್ಲಿ ಪಾನೀಯ ಬಾಟಲಿ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ಹೆಂಡತಿ, ಮಕ್ಕಳಿಗೆ ಹೊಡೆಯುತ್ತಾನೆ. ಇದನ್ನೂ ಓದಿ: ನಾಯಕರಿಗೆ ಗತಿ ಇಲ್ಲ, ಅಭ್ಯರ್ಥಿಗಳಿಗಂತೂ ದಟ್ಟ ದಾರಿದ್ರ್ಯ- ಕಾಂಗ್ರೆಸ್ ವಿರುದ್ಧ ಹೆಚ್‍ಡಿಕೆ ಕಿಡಿ
Advertisement
Advertisement
ವಿಕ್ಟೋರಿಯಾದಲ್ಲಿ ವಾಸಿಸುವ ಇವಾಂಡರ್ ವಿಲ್ಸನ್ ಪಿಜ್ಜಾ ಆರ್ಡರ್ ಮಾಡಿದ್ದಾನೆ. ಪಾನೀಯ ಬಾಟಲಿ ಇಲ್ಲದಿರುವುದನ್ನು ಕಂಡು ಕೋಪಗೊಂಡಿದ್ದಾನೆ. ಇವಾಂಡರ್ ತನ್ನ ಕೋಪವನ್ನು ಹೆಂಡತಿ ಚೆಲ್ಸಿಯಾ ಸ್ಮಿತ್ ಬಳಿ ತೋರಿಸಿಕೊಂಡಿದ್ದು, ಆಕೆಗೆ ಸರಿಯಾಗಿ ಹೊಡೆದಿದ್ದಾನೆ. ಮಕ್ಕಳ ಮುಂದೆಯೇ ಆಕೆಯನ್ನು ಎಳೆದಾಡಿಕೊಂಡು ಹೊಡೆದಿದ್ದಾನೆ. ಇದನ್ನೂ ಓದಿ: ಗೋ ಕಳ್ಳರಿಗೆ ಸಹಾಯ ಮಾಡಿದ್ದ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ: ಆರಗ ಜ್ಞಾನೇಂದ್ರ
Advertisement
ಇವಾಂಡರ್ ವಿಲ್ಸನ್ ಸರಿಯಾದ ಪಿಜ್ಜಾ ನೀಡಿಲ್ಲವೆಂದು ಹೆಂಡತಿ ಚೆಲ್ಸಿಯಾ ಸ್ಮಿತ್ ಮೇಲೆ ಕೋಪ ತೋರಿಸಿದ್ದಲ್ಲದೆ, ಆಕೆಯ ತಲೆ ಕೂದಲು ಹಿಡಿದುಕೊಂಡು ಎಳೆದಾಡಿದ್ದಾನೆ. ನಂತರ ಮುಖಕ್ಕೆ ಗುದ್ದಿದ್ದಾನೆ. ಮಗ ಜಾಕೋಬಿ ತನ್ನ ತಂದೆಯ ಕ್ರೂರ ರೂಪವನ್ನು ನೋಡಿ ಅಳಲು ಪ್ರಾರಂಭಿಸಿದ್ದ. ಅದೇ ವಿಷಯವು ತಂದೆಯನ್ನು ಕೆರಳಿಸಿತು. ಮಗನಿಗೆ ಸುಮ್ಮನಿರಲು ಹೇಳಿದ್ದರೂ ಅವನು ಅಳು ನಿಲ್ಲಿಸದಿದ್ದಾಗ, ಮಗನನ್ನು ಎಳೆದು ಬೀಸಾಡಿ, ತಲೆಯನ್ನು ನೆಲಕ್ಕೆ ಬಡಿಯುತ್ತಾನೆ. ಇದನ್ನೂ ಓದಿ: ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ
ಮಗನ ಸ್ಥಿತಿಯನ್ನು ಕಂಡ ತಾಯಿ ಇವಾಂಡರ್ ವಿಲ್ಸನ್ ತಕ್ಷಣ ಆಸ್ಪತ್ರೆಗೆ ಮಗನನ್ನು ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಮಗ ಸಾವನ್ನಪ್ಪಿದ್ದ. ಈ ಎಲ್ಲ ವಿಚಾರವನ್ನು ತಾಯಿ ಚೆಲ್ಸಿಯಾ ಸ್ಮಿತ್ ಪೊಲೀಸರಲ್ಲಿ ಹೇಳಿದ್ದಳು. . ಇದನ್ನೂ ಓದಿ: ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್