ಬೆಂಗಳೂರು: ನಾನು ಎಲ್ಲಾ ಪೊಲೀಸರ ವಿರುದ್ಧ ಮಾತನಾಡಿಲ್ಲ. ಗೋ ಕಳ್ಳರಿಗೆ ಬೆಂಬಲ ನೀಡುವ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಬಗ್ಗೆ ನನಗೆ ಗೌರವ ಇದೆ. ಮೊನ್ನೆ ಗೋ ಕಳ್ಳರನ್ನು ಹಿಡಿಯಲು ಹೋದವರ ಮೇಲೆಯೇ ಕಾರು ಹತ್ತಿಸಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಬದುಕುಳಿದಿರುವುದು ಪವಾಡ. ಈ ಘಟನೆಯಿಂದ ನನಗೆ ಬೇಸರವಾಗಿದೆ. ಪೊಲೀಸರ ಮೇಲೆ ನನಗೆ ಗೌರವ ಇದೆ. ಎಲ್ಲಾ ಪೊಲೀಸರು ಒಂದೇ ರೀತಿ ಇರುವುದಿಲ್ಲ. ಕರ್ನಾಟಕದಲ್ಲಿ ದಕ್ಷ ಪೊಲೀಸರೂ ಇದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹಸುವಿನ ಹೊಟ್ಟೆಯಲ್ಲಿ ಸಿಕ್ತು ಐಸ್‍ಕ್ರೀಂ ಕಪ್, ಸ್ಪೂನ್ ಸೇರಿ 77 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ!
ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆಗೆ ಸುಪಾರಿ ಪ್ರಕರಣ ಕುರಿತು ಮಾತನಾಡಿ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾವ ಶಾಸಕರಿಗೂ ಹಾಗೆ ಆಗಬಾರದು. ಮುಖವಾಡ ಕಳಚುವಂತೆ ಮಾಡುತ್ತೇವೆ. ಪೊಲೀಸ್ ಕಾಯಿದೆ ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಶಾಸಕ ವಿಶ್ವನಾಥ್ ಅವರಿಗೆ ಎಲ್ಲಾ ಭದ್ರತೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಸೇನೆ ಕೆಲಸಕ್ಕಾಗಿ ನಕಲಿ ದಾಖಲೆ- 9 ಜನರ ಬಂಧನ
ಓಮಿಕ್ರಾನ್ ಕುರಿತು ಮಾತನಾಡಿದ ಅವರು, ಹೊಸ ವೈರಸ್ ಬಗ್ಗೆ ಆಗುವುದು ಬೇಡ ಎಚ್ಚರಿಕೆ ಬೇಕು. ಗೈಡ್‌ಲೈನ್ ಏನ್ ಬರುತ್ತೋ, ಅದಕ್ಕೆ ನಮ್ಮ ಇಲಾಖೆ ಸಹಕಾರ ನೀಡುತ್ತದೆ. ಇದು ಸಾವು, ಬದುಕಿನ ಪ್ರಶ್ನೆ. ಪೊಲೀಸರು ಏನೆಲ್ಲಾ ಮಾಡಬೇಕು ಎಂದು ನಾವು ಸೂಚಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.