LatestMain PostNational

ಹಸುವಿನ ಹೊಟ್ಟೆಯಲ್ಲಿ ಸಿಕ್ತು ಐಸ್‍ಕ್ರೀಂ ಕಪ್, ಸ್ಪೂನ್ ಸೇರಿ 77 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ!

ಗಾಂಧಿನಗರ: ದೇಶಾದ್ಯಂತ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದರೂ ಅದರ ಬಳಕೆ ಮಾತ್ರ ಇನ್ನೂ ನಿಂತಿಲ್ಲ.

ಭೂಮಿಯಲ್ಲಿ ಕರಗದೆ ಅನೇಕ ಸಮಸ್ಯೆಗಳಿಗೆ ಕಾರಣವಾಗುವ ಈ ಪ್ಲಾಸ್ಟಿಕ್ ಅನ್ನು ಜನ ಈಗಲೂ ಬಳಕೆ ಮಾಡುತ್ತಾರೆ. ಇದು ಪ್ರಾಣಿಗಳ ಮೇಲೆ ತೀವ್ರ ರೀತಿಯ ಪರಿಣಾಮ ಬೀರುತ್ತದೆ. ಇದಕ್ಕೆ ಈ ಹಸುವೇ ಸ್ಪಷ್ಟ ನಿದರ್ಶನ.

ಹೌದು. ಹಸುವೊಂದರ ಹೊಟ್ಟೆಯಿಂದ ಶಶ್ಸತ್ರಚಿಕಿತ್ಸೆಯ ಮೂಲಕ ಬರೋಬ್ಬರಿ 77 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರಕ್ಕೆ ತೆಗೆಯಲಾಗಿದೆ. ಐಸ್ ಕ್ರೀಂ ಕಪ್, ಚಮಚಗಳು ಮತ್ತು ಪ್ಲಾಸ್ಟಿಕ್ ಚೀಲಗಳು ಹಸುವಿನ ಹೊಟ್ಟೆಯೊಳಗೆ ಸಿಕ್ಕಿದೆ. ಇದನ್ನು ಗುಜರಾತ್ ನ ಆನಂದ್ ಜಿಲ್ಲೆಯ ಪಶುವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮೈಸೂರಿನ ಗೀತಾ ಗೋಪಿನಾಥ್‌ಗೆ ಐಎಂಎಫ್‌ನ ಉನ್ನತ ಹುದ್ದೆಗೆ ಬಡ್ತಿ

ರಸ್ತೆ ಬದಿ ಅಸ್ವಸ್ಥಗೊಂಡಿದ್ದ ಹಸುವನ್ನು ಆನಂದ್‍ನಲ್ಲಿರುವ ಪಶು ಆಸ್ಪತ್ರೆಗೆ ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದು ಕರೆದೊಯ್ದಿತ್ತು. ಈ ವೇಳೆ ಹಸುವನ್ನು ಪರೀಕ್ಷಿಸಿದ ವೈದ್ಯರು, ಹಸು ಪ್ಲಾಸ್ಟಿಕ್ ತ್ಯಾಜ್ಯ ತಿಂದಿರುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯುವಂತೆಯೂ ತಿಳಿಸಿದ್ದಾರೆ. ಅಂತೆಯೇ ಬರೋಬ್ಬರಿ ಎರಡೂವರೆ ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಬಳಿಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆಯಲಾಗಿದೆ.

Leave a Reply

Your email address will not be published. Required fields are marked *

Back to top button