Connect with us

Bengaluru City

ಕನ್ವರ್ ಲಾಲ್ ಜೊತೆ ದರ್ಶನ್ ಸೆಲ್ಫಿ

Published

on

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಪ್ರೀತಿಯ ಶ್ವಾನ ಕನ್ವರ್ ಲಾಲ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಅಂಬರೀಶ್ ಮನೆಗೆ ದರ್ಶನ್ ಭೇಟಿ ಕೊಟ್ಟಿದ್ದರು. ಈ ವೇಳೆ ಕನ್ವರ್ ಲಾಲ್ ನೋಡಿ ದರ್ಶನ್ ಖುಷಿ ಪಟ್ಟಿದ್ದಾರೆ. ಜೊತೆಗೆ ಕಲ್ವರ್ ಲಾಲ್ ಜೊತೆ ಕಾಲಕಳೆದಿದ್ದು, ಅವನೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದೀಗ ಈ ಫೋಟೋವನ್ನು ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಅಂಬರೀಶ್ ಪ್ರೀತಿಯಿಂದ ಸೇಂಟ್ ಬರ್ನಾಡ್ ತಳಿಯ ಶ್ವಾನವನ್ನು ಸಾಕಿದ್ದರು. ಅದಕ್ಕೆ ಕನ್ವರ್ ಲಾಲ್ ಎಂದು ಹೆಸರಿಟ್ಟಿದ್ದರು. ಅಂಬಿಗೆ ಕನ್ವರ್ ಲಾಲ್ ಎಂದರೆ ತುಂಬಾ ಪ್ರೀತಿ. ನಟ ದರ್ಶನ್‍ಗೂ ಕನ್ವರ್ ಲಾಲ್ ಎಂದರೆ ಅಚ್ಚುಮೆಚ್ಚು.

ಅಂಬರೀಶ್ ಅವರಿಗೂ ಶ್ವಾನ ಎಂದರೆ ತುಂಬಾ ಪ್ರೀತಿ. ಹೀಗಾಗಿ ಅವರು ತಮ್ಮ ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿದ್ದರು. ಆ ನಾಯಿಗಳಿಗೆ ತಮ್ಮ ಜನಪ್ರಿಯ ಸಿನಿಮಾ ಡೈಲಾಗ್‍ಗಳಾದ ‘ಕನ್ವರ್ ಲಾಲ್’ ಮತ್ತು ‘ಬುಲ್ ಬುಲ್’ ಎಂದು ಹೆಸರಿಟ್ಟಿದ್ದರು. ಈ ಮೂಲಕ ಪ್ರತಿದಿನ ತಮ್ಮ ಡೈಲಾಗ್‍ಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಅಂಬರೀಶ್ ಅವರು ಸಮಯ ಸಿಕ್ಕಾಗಲೆಲ್ಲಾ ಕನ್ವರ್ ಲಾಲ್ ಮತ್ತು ಬುಲ್ ಬುಲ್ ಜೊತೆಗೆ ಕಾಲಕಳೆಯುತ್ತಿದ್ದರು.

ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ದಚ್ಚು ತಮ್ಮ ಫಾರ್ಮ್ ಹೌಸ್ ನಲ್ಲಿ ಕುದುರೆ, ಎತ್ತು, ಹಸು ಸೇರಿದಂತೆ ಅನೇಕ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಸಾಕುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *