ಸ್ಯಾಂಡಲ್ವುಡ್ನಲ್ಲಿ(Sandalwood) ದಿಗ್ಗಜರ ದೋಸ್ತಿ ಜಪ ಜೋರಾಗಿದೆ. ದಚ್ಚು-ಕಿಚ್ಚ ಮತ್ತೆ ಒಂದಾಗಲಿ ಎಂಬ ಕೂಗು ಹೆಚ್ಚಾಗಿದೆ ಕಿಚ್ಚನ ಜೊತೆ ಸುಮಲತಾ ಬರ್ತ್ಡೇ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ದರ್ಶನ್ (Darshan) ಮತ್ತೊಂದು ಹೊಸ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ:ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ಟೀಸರ್ ಗೆ ಫ್ಯಾನ್ಸ್ ಫಿದಾ
Advertisement
ಏಕಾಂಗಿಯಾಗಿರುವುದೇ ಒಳ್ಳೆಯದು. ಅಭಿಮಾನಿಗಳ ಜೊತೆ ಒಂಟಿಯಾಗಿರುತ್ತೀನಿ, ಅದೇ ಉತ್ತಮ ಎಂದು ಡಿ ಬಾಸ್ ದರ್ಶನ್ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ (Sudeep) ಜೊತೆ ಒಂದಾಗಲ್ಲ ಎಂದು ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ದಾಸನ ಬಾಯಲ್ಲಿ ಏಕಾಂಗಿ ಪದ ಕೇಳಿದ ಅಭಿಮಾನಿಯೊಬ್ಬರು ಏನೋ ಮಿಸ್ ಹೊಡಿತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
Advertisement
Advertisement
ನಿನ್ನೆಯಷ್ಟೇ (ಆಗಸ್ಟ್ 28) ದರ್ಶನ್ ಕಾಲಾಯ ತಸ್ಮೈ ನಮಃ ಎಂಬ ಅಡಿಬರಹ ಜೊತೆ ಜೋಡೆತ್ತುಗಳ ಜೊತೆ ನಿಂತಿರುವ ಫೋಟೋ ಶೇರ್ ಮಾಡಿದ್ದರು. ಈ ಮೂಲಕ ಒಂದಾಗುವ ಸುಳಿವು ನೀಡಿದ್ದರು. ಈಗ ನನ್ನ ಸೆಲೆಬ್ರಿಟಿಗಳ ಜೊತೆ ಒಂಟಿಯಾಗಿರುವುದೇ ಉತ್ತಮ ಎಂದು ನಯಾ ಪೋಸ್ಟ್ ಶೇರ್ ಮಾಡಿ, ಶಾಕಿಂಗ್ ಸಂದೇಶ ನೀಡಿದ್ದಾರೆ. ಇದನ್ನೂ ಓದಿ:ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ಟೀಸರ್ ಗೆ ಫ್ಯಾನ್ಸ್ ಫಿದಾ
Advertisement
ಒಂಟಿಯಾಗಿರುವುದರಲ್ಲಿ ಸಂತೋಷ ಇದೆ ಎಂಬ ಪೋಸ್ಟ್ ಸುದೀಪ್ ಜೊತೆ ಒಂದಾಗೋದಿಲ್ಲ ಎಂಬ ಅರ್ಥ ಕೊಡುತ್ತಿದೆಯಾ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ. ದಚ್ಚು- ಕಿಚ್ಚ ಒಂದಾಗುವ ಕನಸು ಕಂಡ ಅಭಿಮಾನಿಗಳಿಗೆ ನಿರಾಸೆಯಾಗಿದೆ.