ಸ್ಯಾಂಡಲ್‌ವುಡ್‌ನ(Sandalwood) ಬ್ಯುಸಿ ನಟ ಧನಂಜಯ್(Dhananjay) ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಸೌಂಡ್ ಮಾಡುತ್ತಾರೆ. ಕಳೆದ ಬಾರಿ ಪ್ರಭಾಸ್ ಮದುವೆಯಾಗುವವೆರೆಗೂ ತಾನು ಮದುವೆ ಆಗಲ್ಲ ಅಂತಾ ಸುದ್ದಿಯಾಗಿದ್ದರು. ಈಗ ತಾನು ಮದುವೆಯಾಗುವ ಹುಡುಗಿಗೆ ಈ ಗುಣ ಇರಲೇಬೇಕು ಅಂತಿದ್ದಾರೆ ಡಾಲಿ.
ಕನ್ನಡ ಮಾತ್ರವಲ್ಲದೇ ಬಹುಭಾಷಾ ಚಿತ್ರಗಳಲ್ಲಿ ಮಿಂಚ್ತಿರುವ ನಟ ಧನಂಜಯ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದೆ. ಸದ್ಯ ಸಿನಿಮಾಗಿಂತ ವೈಯಕ್ತಿಕ ವಿಷ್ಯವಾಗಿ ಸೌಂಡ್ ಮಾಡುತ್ತಿದ್ದಾರೆ. ಡಾಲಿ ಮದುವೆಯಾಗುವ ಹುಡುಗಿ ಹೇಗಿರಬೇಕು ಯಾವ ಕ್ವ್ಯಾಲಿಟಿ ಇರಬೇಕು ಎಂಬುದನ್ನ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಮಸ್ತಾಗಿದೆ `ಕಬ್ಜ’ ಟೀಸರ್: ಹೇಗಿದೆ ಗೊತ್ತಾ ಉಪೇಂದ್ರ- ಸುದೀಪ್ ಜುಗಲ್‌ಬಂದಿ
ತಾನು ಮದುವೆಯಾಗುವ ಹುಡುಗಿ ಹೇಗಿರಬೇಕು ಅಂದ್ರೆ ನಾನು ಅವಳನ್ನು ನೋಡಿದರೆ ಖುಷಿಯಾಗಬೇಕು ಎಂದಿದ್ದಾರೆ ಡಾಲಿ. ಇದೊಂಥರಾ ವಿಶೇಷ ಅನಿಸಿದ್ದರು ನಿಜ ಎಂದಿದ್ದಾರೆ. ತಾವು ಮದುವೆಯಾಗುವ ಹುಡುಗಿಯಲ್ಲಿ ಲವಲವಿಕೆ ನೋಡುತ್ತಾರೆ ಎಂಬುದನ್ನ ತಿಳಿಸಿದ್ದಾರೆ.
ಇನ್ನು ಡಾಲಿ ಹೆಸರು ಸಹನಟಿ ಅಮೃತಾ ಜತೆ ಕೇಳಿ ಬರುತ್ತಿದೆ. ಅಭಿಮಾನಿಗಳ ನೆಚ್ಚಿನ ಜೋಡಿಯಾಗಿರುವ ಅಮೃತಾ ಮತ್ತು ಡಾಲಿ ನಿಜ ಜೀವನದಲ್ಲೂ ಜೋಡಿಯಾಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.