Bengaluru CityCinemaKarnatakaLatestMain PostSandalwood

ಮಸ್ತಾಗಿದೆ `ಕಬ್ಜ’ ಟೀಸರ್: ಹೇಗಿದೆ ಗೊತ್ತಾ ಉಪೇಂದ್ರ- ಸುದೀಪ್ ಜುಗಲ್‌ಬಂದಿ

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಸುದೀಪ್ ನಟನೆಯ `ಕಬ್ಜ’ (Kabza) ಟೀಸರ್ ಅದ್ದೂರಿಯಾಗಿ ರಿಲೀಸ್ ಆಗಿದೆ. ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಒಂದು ದಿನ ಮುಂಚಿತವಾಗಿಯೇ ತಮ್ಮ ಫ್ಯಾನ್ಸ್‌ಗೆ ಟೀಸರ್ ಮೂಲಕ ಗಿಫ್ಟ್ ಕೊಟ್ಟಿದ್ದಾರೆ.

ಅಭಿಮಾನಿಗಳ ಪಾಲಿನ ನಿರೀಕ್ಷಿತ ಸಿನಿಮಾ `ಕಬ್ಜ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಟಾಲಿವುಡ್ ಸ್ಟಾರ್ ರಾಣಾ ದಗ್ಗುಬಾಟಿ(Rana Daggubati) ಟೀಸರ್ ರಿಲೀಸ್ ಮಾಡಿದ್ದಾರೆ. ಆರ್. ಚಂದ್ರು ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ (Upendra) ಮತ್ತು ಸುದೀಪ್(Sudeep) ಜೊತೆ ಬಹುಭಾಷಾ ನಟಿ ಶ್ರೀಯಾ ನಟಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತವಿದೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ

ರೆಟ್ರೋ ಲುಕ್‌ನಲ್ಲಿ ಮೂಡಿ ಬಂದಿರುವ `ಕಬ್ಜ’ ಟೀಸರ್‌ನಲ್ಲಿ ಉಪ್ಪಿ ಮತ್ತು ಕಿಚ್ಚ ಸುದೀಪ್ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಲೋಕೇಷನ್, ಹಿನ್ನೆಲೆ ಸಂಗೀತ, ಪಾತ್ರಧಾರಿಗಳ ಲುಕ್ ಎಲ್ಲವೂ ಸಖತ್ ಆಗಿದೆ ಅಂತಿದ್ದಾರೆ ಫ್ಯಾನ್ಸ್. ಈ ಟೀಸರ್ ಮೂಲಕ ಚಿತ್ರದ ಮೇಲಿರುವ ನಿರೀಕ್ಷೆ ದುಪ್ಪಾಟಾಗಿದೆ.

ಟೀಸರ್ ಮತ್ತು ಪೋಸ್ಟರ್ ಲುಕ್ ಮೂಲಕ ಹವಾ ಎಬ್ಬಿಸಿರುವ `ಕಬ್ಜ’ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

Live Tv

Leave a Reply

Your email address will not be published.

Back to top button