ಮೆಗಾ ಸ್ಟಾರ್ ಚಿರಂಜೀವಿ (Megastar Chiranjeevi) ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ(Knee Surgery) ಒಳಗಾಗಿದ್ದಾರೆ. ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್ ಮಾಡಲಾಗಿದೆ. ಒಂದು ವಾರಗಳ ಕಾಲ ಅವರು ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಹೈದರಾಬಾದ್‌ಗೆ(Hydrabad) ಚಿರಂಜೀವಿ ವಾಪಸ್ ಬರಲಿದ್ದಾರೆ ಎಂದು ಸುದ್ದಿ ಆಗಿದೆ.
ನಟ ಚಿರಂಜೀವಿ ಅವರಿಗೆ ಆಗಾಗ ಮೊಣಕಾಲು ನೋವು ಕಾಣಿಸಿಕೊಳ್ಳುತ್ತಿತ್ತು. ಆ ಕಾರಣದಿಂದ ಅವರು ಪರೀಕ್ಷೆ ಮಾಡಿಸಿದ್ದರು. ನೋವು ನಿವಾರಣೆಗಾಗಿ ಅವರು ಮೊಣಕಾಲಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಮೊಣಕಾಲು ಚಿಪ್ಪಿನಲ್ಲಿ ಇರುವ ಸೋಂಕನ್ನು ನಿವಾರಿಸುವ ಸಲುವಾಗಿ ಈ ಸರ್ಜರಿ ಮಾಡಲಾಗುತ್ತದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಇದನ್ನೂ ಓದಿ:ಮದುವೆ ನಂತರ ನೀರು ಬಿಸಿ ಮಾಡಿದ್ದು ಬಿಟ್ಟು ಬೇರೆ ಅಡುಗೆ ಮಾಡಿಲ್ವಂತೆ- ಕಿಯಾರಾ ಅಡ್ವಾಣಿ
ಆಗಸ್ಟ್ 11ರಂದು ಚಿರಂಜೀವಿ ನಟನೆಯ ‘ಭೋಲಾ ಶಂಕರ್’ (Bhola Shankar) ಸಿನಿಮಾ ರಿಲೀಸ್ ಆಗಿತ್ತು. ಚಿತ್ರಮಂದಿರದಲ್ಲಿ ಈ ಚಿತ್ರ ಮಕಾಡೆ ಮಲಗಿತ್ತು. ಸ್ಟಾರ್ ಕಲಾವಿದರ ದಂಡೇ ಸಿನಿಮಾದಲ್ಲಿ ಇದ್ರು ಸಿನಿಮಾ ಗೆಲ್ಲೋದ್ರಲ್ಲಿ ಎಡವಿತ್ತು. ಅದರ ಜೊತೆಗೆ ಕೆಲವು ಗಾಸಿಪ್ ಕೂಡ ಹಬ್ಬಿತ್ತು. ನಟನ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಕುರಿತಂತೆ ಅನೇಕ ಅಂತೆ-ಕಂತೆಗಳು ಹರಿದಾಡಿದ್ದವು. ಚಿರಂಜೀವಿ ಆರೋಗ್ಯದ ಬಗ್ಗೆ ಗಾಸಿಪ್‌ಗಳು ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದರು. ಆದರೆ ಈಗ ಅವರು ದೆಹಲಿಯಲ್ಲಿ ಆಪರೇಷನ್ ಮಾಡಿಸಿಕೊಂಡಿರುವುದು ಖಚಿತವಾಗಿದೆ. ಸರ್ಜರಿಯ ಬಳಿಕ ನಟ ವಿಶ್ರಾಂತಿ ಪಡೆಯುತ್ತಿದ್ದಾರೆ.
‘ಭೋಲಾ ಶಂಕರ್'(Bhola Shankar) ಸಿನಿಮಾ ಜೈಲರ್ (Jailer) ಸಿನಿಮಾ ಮುಂದೆ ಮಕಾಡೆ ಮಲಗಿದೆ. ಹೀಗಿದ್ರೂ ಚಿತ್ರತಂಡ ಹುಮ್ಮಸ್ಸು ಕಮ್ಮಿಯಾಗಿಲ್ಲ. ಭೋಲಾ ಶಂಕರ್ ಸಿನಿಮಾ ಹಿಂದಿ ವರ್ಷನ್‌ನಲ್ಲಿ ರಿಲೀಸ್ ಮಾಡಲು ತಯಾರಿ ನಡೆಯುತ್ತಿದೆ. ಚಿತ್ರದ ಟ್ರೈಲರ್ ಕೂಡ ರಿಲೀಸ್ ಮಾಡಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]