ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ (Chiranjeevi Sarja) 4ನೇ ವರ್ಷದ ಪುಣ್ಯ ಸ್ಮರಣೆ ಇಂದು ನಡೆಯಿತು. ಕನಕಪುರ ರಸ್ತೆಯ ನೆಲಗುಳಿಯ ಫಾರಂಹೌಸ್‌ನಲ್ಲಿರುವ ಚಿರು ಸಮಾಧಿಗೆ ಧ್ರುವ ಸರ್ಜಾ (Dhruva Sarja) ಕುಟುಂಬಸ್ಥರಿಂದ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಗೇಲಿ ಮಾಡಿದ ಬಾಲಿವುಡ್ ಮುಂದೆ ಗೆದ್ದು ಬೀಗಿದ ಕಂಗನಾ
ಚಿರಂಜೀವಿ ಸರ್ಜಾ 4ನೇ ವರ್ಷದ ಪುಣ್ಯ ಸ್ಮರಣೆ ನೆಲಗುಳಿಯ ಫಾರಂಹೌಸ್‌ನಲ್ಲಿ ಜರುಗಿದೆ. ಚಿರು ಸಮಾಧಿಗೆ ಸಹೋದರ ಧ್ರುವ ಸರ್ಜಾ ಪೂಜೆ ಸಲ್ಲಿಸಿದ್ದರು. ಈ ವೇಳೆ, ಪತ್ನಿ ಪ್ರೇರಣಾ, ಅತ್ತಿಗೆ ಮೇಘನಾ ರಾಜ್ (Meghana Raj), ಪುತ್ರ ರಾಯನ್, ಸುಂದರ ರಾಜ್ ದಂಪತಿ, ಚಿರಂಜೀವಿ ಸರ್ಜಾ ಪೋಷಕರು ಸೇರಿದಂತೆ ‘ಮಾರ್ಟಿನ್’ (Martin Film) ಚಿತ್ರತಂಡ ಕೂಡ ಭಾಗಿಯಾಗಿತ್ತು.
ಅಂದಹಾಗೆ, ಅಭಿಮಾನಿಗಳಿಗೂ ಚಿರಂಜೀವಿ ಸಮಾಧಿ ದರ್ಶನ ಮಾಡೋಕೆ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗಿ ಚಿರು ಸಮಾಧಿ ದರ್ಶನ ಪಡೆದರು. ಇದನ್ನೂ ಓದಿ:ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ರಿಷಬ್ ಶೆಟ್ಟಿ ದಂಪತಿ
2020ರಲ್ಲಿ ಜೂನ್ 7ರಂದು ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದರು. ಬಳಿಕ ಜ್ಯೂ.ಚಿರು ಹುಟ್ಟಿದ್ದು, ಸರ್ಜಾ ಕುಟುಂಬಕ್ಕೆ ಖುಷಿ ಕೊಟ್ಟಿತ್ತು. ಈಗ ಮಗನ ಪಾಲನೆಯಲ್ಲಿ ಮೇಘನಾ ರಾಜ್ ತೊಡಗಿಸಿಕೊಂಡಿದ್ದಾರೆ.