‘ಪಾಕಿಸ್ತಾನ್ ಜಿಂದಾಬಾದ್’ ಎಂದವರನ್ನು ಬೆಂಬಲಿಸಿದ ನಟ ಚೇತನ್: ವಿವಾದಾತ್ಮಕ ಪೋಸ್ಟ್

Public TV
1 Min Read
FotoJet 4 19

ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುವುದರ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಕಾಲೇಜು ಫೆಸ್ಟ್ ಅಲ್ಲಿ ಈ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಕೂಡ ನಡೆದಿದೆ ಎಂದು ಹೇಳಲಾಗಿತ್ತು. ಈ ಕುರಿತು ನಟ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ಪರ ಧ್ವನಿ ಎತ್ತಿದ್ದಾರೆ.

chetan 13 1

ಈ ಕುರಿತು ಚೇತನ್ ಟ್ವಿಟ್ ಮಾಡಿದ್ದು, ‘ನಿನ್ನೆ ನಡೆದ ಕಾಲೇಜು ಫೇಸ್ಟ್ ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ. ಈ ಕಾರಣಕ್ಕಾಗಿ ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿದ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತಗೆದುಕೊಳ್ಳಲಾಗಿದೆ. ಇದು ಅಸಂಬಂಧ ಮತ್ತು ಅಪಾಯಕಾರಿ’ ಎಂದು ಅವರು ಟ್ವಿಟ್ ಮಾಡಿದ್ದಾರೆ.

ಅಲ್ಲದೇ,  ‘ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು ಶತ್ರುಗಳಲ್ಲ. ವಿದ್ಯಾರ್ಥಿಗಳನ್ನು ಥಳಿಸಿ ಬೆದರಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು ಅಪಾಯಕಾರಿ. ಪಾಕಿಸ್ತಾನ ಕ್ಕೆ ಜೈಕಾರ ಹಾಕೋದು ವಾಕ್ ಸ್ವಾತಂತ್ರ್ಯ’ ಎಂದು ಚೇತನ್ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಾಕಷ್ಟು ವೈರಲ್ ಕೂಡ ಆಗಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕರೆದ ದೇಶದ್ರೋಹಿಗಳ ಜೊತೆ ಚೇತನ್ ನಿಂತಿದ್ದಾರೆ ಎಂದು ಕೆಲವರು ಕಾಮೆಂಟ್ ಕೂಡ ಮಾಡಿದ್ದಾರೆ.

chetan 13 5

ಇತ್ತೀಚಿನ ದಿನಗಳಲ್ಲಿ ಚೇತನ್ ಬರೆದ ಪ್ರತಿ ಪೋಸ್ಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ವಿವಾದಕ್ಕೂ ಕಾರಣವಾಗುತ್ತಿವೆ. ಕೆಲವರು ಅವರ ನಡೆಯನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಟ್ವಿಟ್ ಇನ್ನ್ಯಾವ ವಿವಾದದ ತಿರುವು ಪಡೆದುಕೊಳ್ಳುತ್ತದೋ ಕಾದು ನೋಡಬೇಕು.

Live Tv
[brid partner=56869869 player=32851 video=960834 autoplay=true]

Share This Article