ಪವಿತ್ರಾ ಜಯರಾಮ್‌ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ರಾ ಚಂದ್ರಕಾಂತ್‌?

Public TV
4 Min Read
Pavithra Jayaram 2

ತೆಲುಗು ನಟ ಚಂದ್ರಶೇಖರ್ (Actor Chandrashekar) ಮತ್ತು ಪವಿತ್ರಾ ಜಯರಾಮ್ (Pavithra Jayaram) ಅವರದ್ದು 5 ವರ್ಷಗಳ ಗೆಳತನ. ಅದು ಕೇವಲ ಗೆಳತನವಾಗಿ ಉಳಿದಿರಲಿಲ್ಲ. ಅಲ್ಲೊಂದು ಸಂಬಂಧವಿತ್ತು. ಮನೆಯವರ ವಿರೋಧವಿತ್ತು. ಕಾರಣ, ಇಬ್ಬರಿಗೂ ಒಂದೊಂದು ಸಂಸಾರ. ಎರಡೆರಡು ಮಕ್ಕಳು. ಇದೆಂಥ ಸಂಬಂಧ ನೈತಿಕವಾ? ಅನೈತಿಕವಾ? ಏನೇ ಇರಲಿ. ಈಗ ಆ ಸಂಬಂಧ ಹೆಣವಾಗಿದೆ. ನಟಿ ಪವಿತ್ರಾ ಜಯರಾಮ್ ಹೆಣದ ಮುಂದೆ ಕೂತು ಎದೆ ಎದೆ ಬಡಿದುಕೊಂಡಿದ್ದ ಚಂದ್ರು ಅಲಿಯಾಸ್ ಚಂದ್ರಕಾಂತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪವಿತ್ರಾನ ಮರೆಯೋಕೆ ಆಗ್ತಿಲ್ಲ ಅಂತ ನೇಣಿಗೆ ಕೊರಳೊಡ್ಡಿದ್ದಾರೆ. ಈ ಸಾವು ಸಾವಿರ ಅನುಮಾನಗಳಿಗೆ ಕಾರಣವಾಗಿದೆ. ಸಾವಿನ ಹಿಂದಿರೋ ರಹಸ್ಯವೂ ಬಯಲಾಗಿದೆ.

Pavithra Jayaram

ಕನ್ನಡದ ನಟಿ ಪವಿತ್ರಾ ಜಯರಾಮ್ ಆಕ್ಸಿಡೆಂಟ್‌ನಲ್ಲಿ (Accident) ಸತ್ತಾಗ ಆಕೆಯ ಜೊತೆ ಟ್ರಾವೆಲ್ ಮಾಡ್ತಿದ್ದೋನು ಇದೇ ಚಂದ್ರು. ಅದೊಂದು ಭಯಾನಕ ಆಕ್ಸಿಡೆಂಟ್. ಕಾರಿನ ಹಿಂಬಂದಿ ಸೀಟ್‌ಲ್ಲಿ ಕೂತಿದ್ದ ಚಂದ್ರು ಬದುಕಿದ್ದ, ಪಕ್ಕದಲ್ಲೇ ಕೂತಿದ್ದ ಪವಿತ್ರಾ ಉಸಿರು ಚೆಲ್ಲಿದ್ದಳು. ನನಗಾದ ಗಾಯಕಂಡು ಪವಿತ್ರಾ ಶಾಕ್ ಆಗಿದ್ದಳು. ಸಡನ್ನಾಗಿ ಸ್ಟ್ರೋಕ್ ಆಗಿರಬೇಕು. ಅಂಬ್ಯುಲೆನ್ಸ್ ಬರೋದು ತಡವಾಯಿತು. ಬದುಕಲಿಲ್ಲ ಅಂತ ಇದೇ ಚಂದ್ರು ಹೇಳಿದ್ದ. ಪವಿತ್ರಾ ಸಾವಿಗೆ ನಾನೇ ಕಾರಣ ಅಂತ ಚಂದ್ರುಗೆ ಏನಾದ್ರೂ ಅನಿಸ್ತಾ. ಅದೇ ಆತ್ಮಹತ್ಯೆಗೆ ಕಾರಣ ಆಯ್ತಾ?

Pavithra Jayaram 1

ಪವಿತ್ರಾನ ಚಂದ್ರು ಅದೆಷ್ಟು ಪ್ರೀತಿಸ್ತಾ ಇದ್ದ ಅನ್ನೋಕೆ ಅವರೇ ಪೋಸ್ಟ್ ಮಾಡಿರೋ ವಿಡಿಯೋಗಳು ಸಾಕ್ಷಿ ಆಗುತ್ತವೆ. ಶೂಟಿಂಗ್ ಸೆಟ್, ಹೋಟೆಲ್, ಪಾರ್ಕ್, ಮನೆ ಹೀಗೆ ಸಿಕ್ಕ ಸಿಕ್ಕ ಕಡೆಯಲ್ಲ ಆತ್ಮೀಯ ಆಗಿರೋ ವಿಡಿಯೋ ಮಾಡಿದ್ದಾರೆ. ತಮ್ಮಿಬ್ಬರ ಮಧ್ಯ ಹೆಸರಿಡಲಾಗದ ಒಂದು ಸಂಬಂಧ ಇದೆ ಅಂತ ತರ‍್ಸಿದ್ದಾರೆ. ಈ ತೋರಿಕೆಯ ಹಿಂದೆಯೂ ಒಂದು ಟ್ರ್ಯಾಜಿಡಿ ಕಹಾನಿ ಇದೆ. ಅದು ಅಂತಿಂಥ ಕಹಾನಿಯಲ್ಲ, ಎರಡು ಮಕ್ಕಳ ಭವಿಷ್ಯ. ತನ್ನನ್ನೇ ನಂಬಿಕೊಂಡಿರೋ ಪತ್ನಿ. ಈಗ ಕಣ್ಣೀರು ಹಾಕ್ತಿದ್ದಾರೆ. ಇದನ್ನೂ ಓದಿ:ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ

pavitra jayaram chandu 1ಚಂದ್ರುಗೆ ಈಗಾಗಲೇ ಮದುವೆ ಆಗಿತ್ತು. ಬರೋಬ್ಬರಿ ಇಪ್ಪತ್ತು ವರ್ಷಗಳ ಪ್ರೀತಿ, ಒಂಬತ್ತು ವರ್ಷಗಳ ದಾಂಪತ್ಯ. ಈ ಸಾಂಗತ್ಯಕ್ಕೆ ಜೊತೆಯಾಗಿದ್ದು ಎರಡು ಮುದ್ದಾದ ಮಕ್ಕಳು. ಪವಿತ್ರಾಗೂ ಮದುವೆ ಆಗಿದೆ. ಎರಡು ಮಕ್ಕಳಿದ್ದಾರೆ. ಗಂಡನಿಂದ ದೂರವಿದ್ದಾಕೆ ಚಂದ್ರುಗೆ ಹತ್ತಿರವಾಗೋಕೆ ಕಾರಣ ಆ ಸೀರಿಯಲ್. ಪ್ರೇಕ್ಷಕರ ಸೆಳೆಯಲು ಧಾರಾಹಿಯಲ್ಲಿ ಟ್ವಿಸ್ಟು-ಟರ್ನ್ ಇರತ್ತೆ ಸರಿ. ಆದರೆ, ಅದನ್ನೇ ಜೀವನ ಅನ್ಕೊಂಡ್ರೆ ಹೇಗೆ? ಪಾತ್ರಧಾರಿ ಆಗಬೇಕೆ ಹೊರತು ಪಾತ್ರ ಆಗಬಾರದು ಅಲ್ಲವಾ? ನಟ-ನಟಿ ಆಗಿದ್ದೋರು, ಸ್ನೇಹಿತರಾಗ್ತಾರೆ. ಆ ಸ್ನೇಹ ಒಟ್ಟಾಗಿ ಇರುವಂತೆ ಮಾಡತ್ತದೆ. ಇತ್ತ ಚಂದ್ರು ಹೆಂಡ್ತಿ, ಮಕ್ಕಳನ್ನು ತೊರೆದರೆ. ಪವಿತ್ರಾ ಕೂಡ ಒಂದೇ ಮನೆಯಲ್ಲಿ ಇರೋಕೆ ಒಪ್ಪುತ್ತಾರೆ. ಅಲ್ಲಿಂದ ಹೊಸ ಜರ್ನಿ ಶುರು ಮಾಡ್ತಾನೆ ಚಂದ್ರು.

pavitra jayaram

ಮೋಹವೇ ಹಾಗೆ.. ಅದೊಂದು ರೀತಿ ಯಡವಟ್ಟು. ಇಲಿ ಮೇಲೆ ಆನೆ ಸವಾರಿ ಮಾಡೋ ಕನಸು. ಇದು ಸಾಧ್ಯವಾ? ತಿಳಿಸಿ ಹೇಳೋರು ಯಾರು? ಆದ್ರೂ, ಹೇಳಿದ್ದಾರೆ. ನೀನು ಹೋಗ್ತಾ ಇರೋ ದಾರಿ ಸರಿ ಇಲ್ಲ ಅಂತ ತಾಯಿ ಗದರಿದ್ದಾಳೆ. ನನ್ನ ಗಂಡನ್ನ ನನಗೆ ಬಿಟ್ಟು ಕೊಡಿ ಅಂತ ಚಂದ್ರು ಹೆಂಡ್ತಿ ಉಡಿಯೊಡ್ಡಿದ್ದಾಳೆ. ತಾಯಿ ಮಾತನ್ನು ಚಂದ್ರು ಕೇಳಿಲ್ಲ. ಚಂದ್ರು ಹೆಂಡ್ತಿ ಮಾತನ್ನು ಪವಿತ್ರಾ ಕಿವಿಹಾಕ್ಕೊಂಡಿಲ್ಲ. ಈಗ ಆಗಿದ್ದೆಲ್ಲ ದುರಂತ.

ಚಂದ್ರುನ ಸರಿ ದಾರಿಗೆ ತರೋಕೆ ಏನೆಲ್ಲ ಪ್ರಯತ್ನ ಪಟ್ಟಿದ್ದಾಳೆ ಪತ್ನಿ ಶಿಲ್ಪಾ. ಐದು ವರ್ಷದಿಂದ ಕಾದಿದ್ದಾಳೆ. ಗಂಡ ಬಾರದೇ ಇದ್ದಾಗ ಪವಿತ್ರಾಗೆ ವಾರ್ನ್ ಕೂಡ ಮಾಡಿದ್ದಾಳೆ. ಏನೇ ಮಾಡಿದರೂ ಗಂಡ ಜಗ್ಗಿಲ್ಲ.. ಪವಿತ್ರಾ ಕೇರ್ ಮಾಡಿಲ್ಲ. ಈ ಜಗಳ ಅತಿರೇಕಕ್ಕೆ ಹೋದಾಗ ಪವಿತ್ರಾನೇ ನನ್ನ ಸರ್ವಸ್ವ ಅಂದಿದ್ದಾನೆ ಚಂದ್ರು. ಪವಿತ್ರಾ ಜೊತೆ ಮದುವೆ ಆಗೋದಾಗಿ ಹೇಳಿದ್ದಾನೆ. ಅಷ್ಟರ ಮಟ್ಟಿಗೆ ಈ ಸಂಬಂಧ ಗಟ್ಟಿಯಾಗಿದೆ. ಪವಿತ್ರಾ-ಚಂದ್ರು ಐದು ವರ್ಷದಿಂದ ಜೊತೆಯಲ್ಲೇ ಇದ್ದಾರೆ. ಒಂದೇ ನೆರಳಿನಲ್ಲಿ ಬದುಕ್ತಿದ್ದಾರೆ. ಕಷ್ಟ ಸುಖದಲ್ಲಿ ಭಾಗಿಯಾಗಿದ್ದಾರೆ. ಒಟ್ಟೊಟ್ಟಿಗೆ ಜರ್ನಿ ಮಾಡಿದ್ದಾರೆ. ಜಗತ್ತು ಈ ಬದುಕಿಗೊಂದು ಹೆಸರು ಕೊಟ್ಟಿದೆ. ಅದೇ ಇವತ್ತು ಚಂದ್ರು ಸಾವಿಗೆ ಕಾರಣ ಆಯ್ತಾ? ಗೊತ್ತಿಲ್ಲ. ಚಂದ್ರು ಮಾತ್ರ ಬಾರದ ಲೋಕಕ್ಕೆ ಹೋಗಿದ್ದಾನೆ. ಪವಿತ್ರಾ ಸಾವಿನ ಶಾಕ್‌ನಲ್ಲಿದ್ದವನು ಎರಡೇ ದಿನದಲ್ಲಿ ನಿನ್ನ ಬಂದು ಸರ‍್ಕೋತೀನಿ ಮಮ್ಮು ಅಂತ ಪೋಸ್ಟ್ ಮಾಡಿ ನೇಣಿಗೆ ಶರಣಾಗಿದ್ದಾನೆ.

ಪವಿತ್ರಾ ಸಾವಿನ ನಂತರ ಚಂದ್ರು ಖಿನ್ನತೆಗೆ ಜಾರಿದ್ದ ಅಂತ ಹೇಳ್ತಿದ್ದಾರೆ ಅವರ ತಾಯಿ. ದಿನವೂ ಕುಡ್ಕೊಂಡ್ ರ‍್ತಿದ್ನಂತೆ.. ಎರಡು ದಿನದಿಂದ ಯಾರ ಫೋನ್‌ಗೂ ಸಿಕ್ಕಿಲ್ಲ. ಪವಿತ್ರಾ ಜೊತೆಗಿನ ಫೋಟೋ ಶೇರ್ ಮಾಡಿದ್ದಾನೆ. ಸಾವಿನ ಮುನ್ಸೂಚನೆ ಕೊಟ್ಟಿದ್ದಾನೆ. ಯಾವ ಮನೆಯಲ್ಲಿ ಪವಿತ್ರಾ ಜೊತೆ ವಾಸವಿದ್ನೋ.. ಅದೇ ಮನೆಯಲ್ಲಿ ಉಸಿರು ಚೆಲ್ಲಿದ್ದಾನೆ. ಮಕ್ಕಳು ಅನಾಥ ಆಗಿವೆ. ಹೆಂಡತಿ, ತಾಯಿ, ತಂಗಿ ಬೀದಿಗೆ ಬಂದಿದ್ದಾರೆ. ಪ್ರೀತಿ ಅಂದರೆ ಸಾಯೋದಲ್ಲ. ಬದುಕೋದು ಚಂದ್ರು ನಟಿಸ್ತಿದ್ದ ಯಾವ ಸೀರಿಯಲ್‌ನಲ್ಲೂ ಈ ಡೈಲಾಗ್ ಇರಲಿಲ್ಲವಾ? ಅಥವಾ ಅದು ಬರೀ ಡೈಲಾಗ್ ಅಂತ ಹೇಳ್ಬಿಟ್ಟು ಮರೆತು ಬಿಟ್ಟರಾ? ಪಾತ್ರಧಾರಿಗಳು ಪಾತ್ರವಾದ್ಮೇಲೆ. ಪ್ರೀತಿ ಅಂದರೆ ಏನು ಅಂತಾನೂ ನೆನಪಿಡಬೇಕಲ್ಲವಾ? ಇಟ್ಟಿದ್ದರೆ ಚಂದ್ರು ಬದುಕರ‍್ತಿದ್ದ ಪತ್ನಿ ಶಿಲ್ಪಾ ಕಾಯುವಿಕೆಗೆ ಅಂತ್ಯನಾದ್ರೂ ಸಿಕ್ಕಿರೋದು ಅಲ್ವೇ.

Share This Article