ಸ್ಯಾಂಡಲ್‌ವುಡ್ (Sandalwood) ನಟ ಶಿವರಾಜ್‌ಕುಮಾರ್ ಅವರು ಕನ್ನಡ ಸಿನಿಮಾಗಳ ಜೊತೆ ಪರಭಾಷೆ ಚಿತ್ರಗಳನ್ನು ಕೂಡ ಒಪ್ಪಿಕೊಳ್ತಿದ್ದಾರೆ. ಹೀಗಿರುವಾಗ ತಮ್ಮ ಫ್ಯಾನ್ಸ್‌ಗೆ ಶಿವಣ್ಣ ಸಿಹಿಸುದ್ದಿ ನೀಡಿದ್ದಾರೆ. ತೆಲುಗಿನಲ್ಲೂ ನಟಿಸುವ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದಾರೆ.
ರಾಜ್‌ಕುಮಾರ್ ಅವರಿಗೂ ಎನ್‌ಟಿಆರ್ ಅವರ ಸ್ನೇಹ ಸಂಬಂಧ ಚೆನ್ನಾಗಿತ್ತು. ಅದೇ ರೀತಿ ಇದೀಗ ಎನ್‌ಟಿಆರ್ ಪುತ್ರ ಬಾಲಯ್ಯ ಜೊತೆ ಶಿವಣ್ಣ ಒಳ್ಳೆಯ ಒಡನಾಟವಿದೆ. ಹಾಗಾಗಿ ಎನ್‌ಟಿಆರ್ (Ntr) ಅವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿಯಾಗಿದ್ದರು. ಎನ್‌ಟಿಆರ್- ಬಾಲಯ್ಯ (Balayya) ಜೊತೆಗಿನ ಒಡನಾಟದ ಬಗ್ಗೆ ಹಂಚಿಕೊಂಡರು. ಬಾಲಯ್ಯ ನನ್ನ ಸಹೋದರನಿದ್ದಂತೆ. ಈ ಹಿಂದೆ ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದೆ. ಈಗ ದೊಡ್ಡ ಮಟ್ಟದಲ್ಲಿ ಸಿನಿಮಾವೊಂದನ್ನು ಮಾಡಲು ಪ್ಲ್ಯಾನ್ ಮಾಡುತ್ತಿದ್ದೇವೆ. ಇಬ್ಬರೂ ಒಟ್ಟಿಗೆ ನಟಿಸಲು ಯೋಚಿಸಿದ್ದೇವೆ. ಈ ಕಾರ್ಯಕ್ರಮದಲ್ಲಿ ಶಿವಣ್ಣ ಮುಂದೆ ಬಾಲಯ್ಯ ಜೊತೆ ಸಿನಿಮಾ ಮಾಡುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:‘ರಾನಿ’ ಸಿನಿಮಾ ಸೆಟ್ ನಲ್ಲಿ ನಿರ್ದೇಶಕರ ಹುಟ್ಟುಹಬ್ಬ
ಶಿವಣ್ಣ ಅವರು ಈಗಾಗಲೇ ಬಾಲಕೃಷ್ಣ ಅವರ ‘ಗೌತಮಿ ಪುತ್ರ ಶಾತಕರ್ಣಿ’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಅದು ಶಿವಣ್ಣ ನಟಿಸಿದ್ದ ಮೊದಲ ಪರಭಾಷೆಯ ಸಿನಿಮಾವಾಗಿತ್ತು. ಬಾಲಯ್ಯ ಅವರ ಮೇಲಿನ ಅಭಿಮಾನದಿಂದಾಗಿ ಆ ಪಾತ್ರದಲ್ಲಿ ನಟಿಸಿದ್ದರು. ಈಗ ಪೂರ್ಣ ಪ್ರಮಾಣದ ಸಿನಿಮಾದಲ್ಲಿ ಒಟ್ಟಿಗೆ ನಟಿಸಲು ಯೋಜನೆ ಮಾಡಿದ್ದಾರೆ.
ಮಾಹಿತಿಯ ಪ್ರಕಾರ, ಬಾಲಯ್ಯ ಮತ್ತು ಶಿವರಾಜ್‌ಕುಮಾರ್ (Shivarajkumar) ಅವರ ಸಿನಿಮಾವನ್ನು ಹೊಸ ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದಾರಂತೆ. ಈಗಾಗಲೇ ಕಥೆ ಮಾಡಿಕೊಂಡು ಇಬ್ಬರನ್ನೂ ಸಂಪರ್ಕಿಸಿದ್ದಾರಂತೆ. ಪೂರ್ಣ ಪ್ರಮಾಣದಲ್ಲಿ ಶಿವಣ್ಣ- ಬಾಲಯ್ಯ ಒಟ್ಟಿಗೆ ನಟಿಸಲಿದ್ದಾರೆ. ಅದಕ್ಕಾಗಿ ತಯಾರಿ ಕೂಡ ನಡೆಯುತ್ತಿದೆ. ತೆಲುಗು ಮತ್ತು ಕನ್ನಡದಲ್ಲಿ 2 ಭಾಷೆಯಲ್ಲೂ ಈ ಸಿನಿಮಾ ಮೂಡಿ ಬರಲಿದೆ.
ಈಗಾಗಲೇ ಶಿವಣ್ಣ ಅವರು ರಜನಿಕಾಂತ್ ‘ಜೈಲರ್’, ಧನುಷ್ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಕೈಯಲ್ಲಿರಬೇಕಾದರೆ ತೆಲುಗು- ತಮಿಳಿನಿಂದ ಶಿವಣ್ಣಗೆ ಬಂಪರ್ ಆಫರ್‌ಗಳು ಅರಸಿ ಬರುತ್ತಿವೆ.