ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್ ಚಿತ್ರ ಪುಷ್ಪ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ, ಕೋಟಿ ಕೋಟಿ ಲೂಟಿ ಮಾಡಿದೆ. `ಪುಷ್ಪ 2′ ಶೂಟಿಂಗ್ ದಿನಗಣನೆ ಶುರುವಾಗಿದೆ. ಈ ಬೆನ್ನಲ್ಲೇ `ಪುಷ್ಪ 2′ ಓಟಿಟಿ ರೈಟ್ಸ್‌ಗಾಗಿ ಭರ್ಜರಿ ಫೈಟ್ ಶುರುವಾಗಿದೆ.
ತೆರೆಯ ಮೇಲೆ ಕೂಡ `ಪುಷ್ಪ’ ಅಂದ್ರೆ ಫ್ಲವರ್ ಅಲ್ಲ, ಫೈಯರ್ ಅಂತಾ ನಿರೂಪಿಸಿದ ಸಿನಿಮಾವಿದು. ಅಲ್ಲು ಅರ್ಜುನ್, ರಶ್ಮಿಕಾ, ಡಾಲಿ ಕಾಂಬಿನೇಷನ್ ಸಖತ್ ಆಗಿ ವರ್ಕೌಟ್ ಆಗಿದೆ. ಪುಷ್ಪರಾಜ್ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೂಡ ಕೊಟ್ಟಿದ್ದರು. ಇದೀಗ ʻಪುಷ್ಪ 2ʼಗಾಗಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇದೇ ಆಗಸ್ಟ್ನಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ಹೀಗಿರುವಾಗ ಚಿತ್ರದ ಶೂಟಿಂಗ್‌ಯೇ ಶುರುವಾಗಿ ಚಿತ್ರದ ಓಟಿಟಿ ರೈಟ್ಸ್‌ಗಾಗಿ ಈಗಿಂದಲೇ ಪುಷ್ಪ ಚಿತ್ರತಂಡದ ಹಿಂದೆ ಕೆಲ ಓಟಿಟಿ ಸಂಸ್ಥೆಗಳು ದೊಂಬಾಲು ಬಿದ್ದಿದೆಯಂತೆ.ಇದನ್ನೂ ಓದಿ:ಶ್ರದ್ಧಾ ಹೆಸರಿನ ಮುಂದಿರುವ ಈ ರಮಾ ಯಾರು?
ಶೂಟಿಂಗ್ ಆರಂಭವಾಗುವ ಮುನ್ನವೇ `ಪುಷ್ಪ 2′ ಚಿತ್ರದ ಓಟಿಟಿ ಹಕ್ಕುಗಳಿಗಾಗಿ ಹಲವು ಕಂಪನಿಗಳು ಪೈಪೋಟಿ ನಡೆಸುತ್ತಿವೆಯಂತೆ. ಈ ಸಿನಿಮಾದ ರೈಟ್ಸ್ಗೆ ಓಟಿಟಿ ಸಂಸ್ಥೆಯೊಂದು ಭರ್ಜರಿ ಆಫರ್ ನೀಡಿದೆಯಂತೆ. ಶೂಟಿಂಗ್ ಶುರುವಾಗುವ ಮುನ್ನವೇ ಇಂಥದ್ದೊಂದು ಆಫರ್ ನೋಡಿ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಈ ಚಿತ್ರಕ್ಕೆ 350 ಕೋಟಿ ಬಜೆಟ್ ಫಿಕ್ಸ್ ಮಾಡಲಾಗಿದೆ. ಅಲ್ಲದೇ ಇದರಲ್ಲಿ ನಟರಿಗೆ ನೀಡಲಿರುವ ಮೊತ್ತದ ಬಗ್ಗೆಯೂ ಸುದ್ದಿಯಾಗಿದೆ. `ಪುಷ್ಪ 2′ ಚಿತ್ರಕ್ಕೆ ಸುಕುಮಾರ್, ಅಲ್ಲು ಅರ್ಜುನ್ ಸೇರಿದಂತೆ ನಟರಿಗೆ ಭಾರೀ ಸಂಭಾವನೆ ನೀಡಲಿದ್ದಾರಂತೆ.
Live Tv
[brid partner=56869869 player=32851 video=960834 autoplay=true]