ನಟ ಬಾಲಯ್ಯ (Balayya) ಅವರು ‘ಅಖಂಡ ಪಾರ್ಟ್ 2’ (Akhanda 2) ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮೊದಲ ಭಾಗಕ್ಕಿಂತ ‘ಪಾರ್ಟ್ 2’ ಮತ್ತಷ್ಟು ಚೆನ್ನಾಗಿ ಮೂಡಿ ಬರಬೇಕು ಎಂದು ತೆರೆಮರೆಯಲ್ಲಿ ಭಾರೀ ತಯಾರಿ ನಡೆಯುತ್ತಿದೆ. ಹೀಗಿರುವಾಗ ಬಾಲಯ್ಯ ಮುಂದೆ ಖಳನಟನಾಗಿ ಅಬ್ಬರಿಸಲು ಆದಿ ಪಿನಿಸೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ತೆಲುಗಿನಲ್ಲಿ ಹೀರೋ ಮತ್ತು ವಿಲನ್ ಎರಡು ಶೇಡ್‌ಗಳಲ್ಲಿ ಗುರುತಿಸಿಕೊಂಡವರು ಆದಿ ಪಿನಿಸೆಟ್ಟಿ. ಈಗ ‘ಅಖಂಡ 2’ ಚಿತ್ರತಂಡಕ್ಕೆ ಅವರು ಎಂಟ್ರಿ ಕೊಟ್ಟಿದ್ದಾರೆ. ಚಿತ್ರೀಕರಣದಲ್ಲೂ ಅವರು ಭಾಗವಹಿಸುತ್ತಿದ್ದಾರೆ. ಬಾಲಯ್ಯ ಹಾಗೂ ಆದಿ ಇಬ್ಬರ ಜುಗಲ್‌ಬಂದಿಯ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ. ಇದನ್ನೂ ಓದಿ:ಮಾಜಿ ಸಿಎಂ ಪುತ್ರಿಗೆ ವಂಚನೆ- 4 ಕೋಟಿ ಪಂಗನಾಮ ಹಾಕಿದ ಖದೀಮರು
ಇನ್ನೂ ವಿಲನ್ ಪಾತ್ರ ಸ್ಟ್ರಾಂಗ್ ಇದ್ರೆನೇ ಹೀರೋಗೂ ಗತ್ತು. ಹಾಗಾಗಿ ಸ್ಟಾರ್ ಕಲಾವಿದ ಆದಿ ಅವರನ್ನೇ ತಂಡ ಆಯ್ಕೆ ಮಾಡಿದ್ದಾರೆ. ಬಾಲಯ್ಯ ಸಿನಿಮಾದಲ್ಲಿ ಆದಿ ಇದ್ದಾರೆ ಎಂಬ ಸುದ್ದಿ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾ ಬಗೆಗಿನ ನಿರೀಕ್ಷೆ ಡಬಲ್ ಆಗಿದೆ. ಇದನ್ನೂ ಓದಿ:ಮಹಿಳೆಯ ಚಪ್ಪಲಿ ಎತ್ತಿ ಕೊಟ್ಟ ಧ್ರುವ ಸರ್ಜಾ- ಆ್ಯಕ್ಷನ್ ಪ್ರಿನ್ಸ್ ಸರಳತೆಗೆ ಫ್ಯಾನ್ಸ್ ಫಿದಾ
ಇನ್ನೂ 2021ರಲ್ಲಿ ತೆರೆಕಂಡ ಅಖಂಡ ಸೂಪರ್ ಸಕ್ಸಸ್ ಕಂಡಿತ್ತು. ಹಾಗಾಗಿ ಇದರ ಸೀಕ್ವೆಲ್ ಶೂಟಿಂಗ್ ನಡೆಯುತ್ತಿದೆ. ಇನ್ನೂ `ಅಖಂಡ 2’ನಲ್ಲಿಯೂ ಪ್ರಗ್ಯಾ ಜೈಸ್ವಾಲ್ ನಾಯಕಿಯಾಗಿದ್ದಾರೆ.