ದಾವಣಗೆರೆ: ಚನ್ನಗಿರಿಯ (Channagiri) ಲಕ್ಷ್ಮೀಪುರ ಅರಣ್ಯ ಪ್ರದೇಶದಲ್ಲಿ ಎರಡು ಜಿಂಕೆಗಳನ್ನು ಬೇಟಿಯಾಡಿದ ಅರೋಪಿಯನ್ನು ಅರಣ್ಯ ಇಲಾಖೆ ( Forest Department) ಸಿಬ್ಬಂದಿ ಬಂಧಿಸಿದ್ದಾರೆ.
ಮಲ್ಲಿಗೆರೆ ಗ್ರಾಮದ ದಿವಾಕರ್ (24) ಬಂಧಿತ ಅರೋಪಿ. ಅರಣ್ಯ ಪ್ರದೇಶದಲ್ಲಿ ಆರು ಜನ ಅರೋಪಿಗಳು ಎರಡು ಜಿಂಕೆ ಬೇಡಿಯಾಡಿದ್ದರು. ಅವುಗಳ ಮಾಂಸವನ್ನು ಸಾಗಾಟ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಲಯ ಅರಣ್ಯಾಧಿಕಾರಿ ಮಸ್ತಾನ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಬಂಧಿತರಿಂದ ಎರಡು ಜಿಂಕೆ ತಲೆ, ಮಾಂಸ, ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಅರೋಪಿಗಳಿಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
