ನರೇಗಲ್ ಪೊಲೀಸ್ ಪೇದೆಯಿಂದ ಅನುಚಿತ ವರ್ತನೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಯುವತಿಯ ವಿರುದ್ಧ ಹನಿಟ್ರ್ಯಾಪ್ ಆರೋಪ

Public TV
1 Min Read
Naregl police station

ಗದಗ: ನರೇಗಲ್‍ನ ಪೊಲೀಸ್ (Police) ಪೇದೆಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಯುವತಿಯೊಬ್ಬಳು ಮಾಡಿದ್ದ ಆರೋಪಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಪೊಲೀಸ್ ಪೇದೆ ಯುವತಿಯ ವಿರುದ್ಧ ಹನಿಟ್ರ್ಯಾಪ್ (Honey trap) ಆರೋಪ ಮಾಡಿದ್ದಾರೆ.

ಅಮಾನತಾಗಿರುವ ಪೊಲೀಸ್ ಪೇದೆ ಶಂಕರ್, ಯುವತಿ ಜೊತೆಗೆ ನಾನು ಅನೈತಿಕ ಸಂಬಂಧ ಹೊಂದಿರುವುದು ನಿಜ. ನನಗೆ ಗೊತ್ತಾಗದ ಹಾಗೆ ಯುವತಿ ಖಾಸಗಿ ವೀಡಿಯೋ ಮಾಡಿಕೊಂಡು ಬ್ಲಾಕ್‍ಮೇಲ್ ಮಾಡುತ್ತಿದ್ದಾಳೆ. ಆಡಿಯೋ, ಫೋಟೊ ಹಾಗೂ ವೀಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂಗೆ ಕಾಲೇಜು ವಿದ್ಯಾರ್ಥಿನಿ ಬಲಿ

ಫೋನ್ ಪೇ ಮೂಲಕ ಯುವತಿಗೆ ಹಣ ನೀಡಿರುವ ಬಗ್ಗೆ ದಾಖಲೆ ನೀಡಿ, ಯುವತಿ ಹಿಂದೆ ದೊಡ್ಡ ಜಾಲವಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಶಂಕರ್ ಎಸ್‍ಪಿ ಬಳಿ ಮನವಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ಯುವತಿಯೊಬ್ಬಳು ಪೊಲೀಸ್ ಪೇದೆ ಶಂಕರ್ ವಿರುದ್ಧ ಅನುಚಿತ ವರ್ತನೆ ಆರೋಪ ಮಾಡಿದ್ದಳು. ಈ ಆರೋಪ ಕೇಳಿಬಂದ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿತ್ತು. ಇದೀಗ ಶಂಕರ್ ಅವರು ಹನಿಟ್ರ್ಯಾಪ್ ಆರೋಪ ಮಾಡಿದ್ದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದನ್ನೂ ಓದಿ: ಒಂದಲ್ಲ, ಎರಡಲ್ಲ, ಮೂರು ಬಾರಿ ಮದುವೆ- ಇದು ಆನೇಕಲ್ ಬ್ಯೂಟಿಯ ಲವ್ ಕಹಾನಿ

Share This Article